ಜಾಧವ್ ಬಿಡುಗಡೆಗೆ ಭಾರತ ಕಂಡುಕೊಂಡ 2 ಹೊಸ ಮಾರ್ಗ

ಈಗ ಕಂಡುಕೊಂಡಿರುವ ಕಾನೂನು ದಾರಿಗಳಲ್ಲಿ ಭಾರತಕ್ಕೆ ಸೋಲಾದರೂ ರಾಜತಾಂತ್ರಿಕ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತ ಸರ್ಕಾರ ಆಲೋಚಿಸಿದೆ.

ನವದೆಹಲಿ, ಏಪ್ರಿಲ್ 13: ಗೂಡಾಚಾರಿಯ ಆರೋಪ ಹೊತ್ತು ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಅವರನ್ನು ಶಿಕ್ಷೆಯಿಂದ ಪಾರು ಮಾಡಲು ಭಾರತ ಸರ್ಕಾರ ತನ್ನ ಪ್ರಯತ್ನ ಮುಂದುವರಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಈ ಪ್ರಕರಣದಿಂದ ಜಾಧವ್ ಅವರನ್ನು ಪಾರು ಮಾಡಲು ಭಾರತದ ಮುಂದೆ ಈಗ ಎರಡು ಆಯ್ಕೆಗಳು ಇವೆ.

 Kulbhushan Jadhav

ಮೊದಲನೆಯದಾಗಿ, - ಸೇನಾ ನ್ಯಾಯಾಲಯ ತೀರ್ಪು ಹೊರಬಿದ್ದ 60 ದಿನಗಳೊಳಗೆ ಆ ತೀರ್ಪಿನ ವಿರುದ್ಧ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು. ಎರಡನೆಯದು - ಪಾಕಿಸ್ತಾನ ರಾಷ್ಟ್ರಪತಿಯಲ್ಲಿ ಕ್ಷಮಾದಾನ ಕೋರುವುದು.

ಈ ಎರಡರಲ್ಲಿ ಮೊದಲನೆ ದಾರಿಗೆ ಹೆಚ್ಚು ಒತ್ತು ನೀಡಲಾಗಿದೆ. ಸೇನಾ ನ್ಯಾಯಾಲಯವು ನೀಡಿರುವ ತೀರ್ಪಿನ ವಿರುದ್ಧ ಪಾಕಿಸ್ತಾನ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಜಾಧವ್ ಕುಟುಂಬಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ರಾಜತಾಂತ್ರಿಕ ಮಟ್ಟದಲ್ಲಿ ಯಾವ ರೀತಿ ಜಾಧವ್ ಅವರನ್ನು ಬಿಡುಗಡೆ ಮಾಡಿ ತರಲು ಅನುಕೂಲವಾಗುವ ಮಾರ್ಗಗಳ ಹುಡುಕಾಟದಲ್ಲಿ ಭಾರತ ಸರ್ಕಾರ ತೊಡಗಿದೆ.

ಕಾನೂನು ರೀತಿಯ ದಾರಿಗಳಲ್ಲಿ ಸೋಲು ಅಥವಾ ಹಿನ್ನಡೆಯಾದರೆ, ಜಾಧವ್ ವಿಚಾರದಲ್ಲಿ ರಾಜತಾಂತ್ರಿಕ ಮಟ್ಟದ ಮಾತುಕತೆಗೆ ಚಾಲನೆ ನೀಡಲು ಸರ್ಕಾರ ಆಲೋಚಿಸಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+