ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕಿಂ, ಅರುಣಾಚಲದ ಚೀನಾ ಗಡಿಯಲ್ಲಿ ಭಾರತದ ಹೆಚ್ಚು ಸೈನಿಕರು

|
Google Oneindia Kannada News

ನವದೆಹಲಿ, ಆಗಸ್ಟ್ 11 : ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿ ಉದ್ದಕ್ಕೂ ಭಾರತವೂ ಹೆಚ್ಚಿನ ಸಂಖ್ಯೆಯ ಸೇನೆಯನ್ನು ನಿಯೋಜಿಸಿದೆ. ದೋಕ್ಲಾಂ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರಕಾರದ ಹಿರಿಯ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಅಗ್ನಿಮತ್ತು ಡಾಂಗ್ ಫೆಂಗ್ ಕ್ಷಿಪಣಿ : ಯಾವುದು ಹೆಚ್ಚು ಶಕ್ತಿಶಾಲಿ?ಅಗ್ನಿಮತ್ತು ಡಾಂಗ್ ಫೆಂಗ್ ಕ್ಷಿಪಣಿ : ಯಾವುದು ಹೆಚ್ಚು ಶಕ್ತಿಶಾಲಿ?

ಭದ್ರತಾ ಪಡೆಗೆ ಎಚ್ಚರಿಕೆಯಿಂದ ಇರುವಂತೆ ಹೇಳಲಾಗಿದೆ. ದೋಕ್ಲಾಂನಲ್ಲಿ ಭಾರತದ ವಿರುದ್ಧ ಆಕ್ರಮಣಕಾರಿ ಧೋರಣೆ ತೋರಿಸುತ್ತಿರುವ ಚೀನಾವನ್ನು ಎದುರಿಸಲು ಸಿಕ್ಕಿಂನಿಂದ ಅರುಣಾಚಲ ಪ್ರದೇಶದವರೆಗಿನ ಸಾವಿರದ ನಾನೂರು ಕಿಲೋಮೀಟರ್ ಸೈನೋ-ಇಂಡೋ ಗಡಿಯುದ್ದಕ್ಕೂ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Indo-China

ಎಷ್ಟು ಸಂಖ್ಯೆಯ ಸೈನಿಕರು, ಪ್ರತಿಶತ ಎಷ್ಟರಷ್ಟು ಸೈನಿಕರನ್ನು ಹೆಚ್ಚಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಇದು ಕಾರ್ಯಾಚರಣೆಯ ಮಾಹಿತಿ. ಇದನ್ನು ಬಹಿರಂಗ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ರಕ್ಷಣಾ ತಜ್ಞರ ಪ್ರಕಾರ ನಲವತ್ತೈದು ಸಾವಿರ ಸೈನಿಕರ ನಿಯೋಜನೆ ಮಾಡಲಾಗಿದೆ. ಅವರು ಈಗಾಗಲೇ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ.

ಚೀನಾ ವಿರುದ್ಧದ ಯುದ್ಧಕ್ಕೆ ತಯಾರಿ ಆರಂಭಿಸಿತೇ ಭಾರತ?ಚೀನಾ ವಿರುದ್ಧದ ಯುದ್ಧಕ್ಕೆ ತಯಾರಿ ಆರಂಭಿಸಿತೇ ಭಾರತ?

ಒಂಬತ್ತು ಸಾವಿರ ಅಡಿಗಿಂತ ಎತ್ತರದಲ್ಲಿ ಕಾರ್ಯ ನಿರ್ವಹಿಸುವ ಸನ್ನಿವೇಶದಲ್ಲಿ ಹದಿನಾಲ್ಕು ದಿನಕ್ಕೆ ಮುಂಚಿತವಾಗಿ ತೆರಳಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.

English summary
India has poured in more troops along the entire stretch of its border with China in Sikkim and Arunachal Pradesh in the face of heightened rhetoric by Beijing over the Dokalam standoff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X