• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೀಘ್ರವೇ ಭಾರತದಿಂದ ಕೊರೊನಾ ಲಸಿಕೆಗಳ ರಫ್ತು ಪುನರಾರಂಭ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಶೀಘ್ರವೇ ಭಾರತ ಕೊರೊನಾ ಲಸಿಕೆಗಳ ರಫ್ತನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ದೇಶದಲ್ಲಿ ಬಹುಪಾಲು ಅರ್ಹ ವಯಸ್ಕರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದ್ದು, ಭಾರತ ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆಗಳ ರಫ್ತನ್ನು ಪುನರಾರಂಭಿಸಲು ಚಿಂತನೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಕೇಂದ್ರದ ಲಸಿಕೆ ರಫ್ತು ನಿರ್ಬಂಧದ ವಿರುದ್ಧ ಸೈರಸ್ ಪೂನಾವಾಲ ಆಕ್ರೋಶಕೇಂದ್ರದ ಲಸಿಕೆ ರಫ್ತು ನಿರ್ಬಂಧದ ವಿರುದ್ಧ ಸೈರಸ್ ಪೂನಾವಾಲ ಆಕ್ರೋಶ

ಕೊರೊನಾ ಎರಡನೇ ಅಲೆ ಸಂದರ್ಭ ದೇಶದಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದಂತೆ ತನ್ನದೇ ಜನಸಂಖ್ಯೆಗೆ ಲಸಿಕೆ ನೀಡುವ ಆದ್ಯತೆಯೊಂದಿಗೆ ಭಾರತ ಏಪ್ರಿಲ್ ತಿಂಗಳಿನಲ್ಲಿ ಲಸಿಕೆ ರಫ್ತನ್ನು ನಿಲ್ಲಿಸಿತ್ತು.

ದೇಶದಲ್ಲಿ ಡಿಸೆಂಬರ್ ವೇಳೆಗೆ ತನ್ನ ಎಲ್ಲಾ 94 ಮಿಲಿಯನ್ ಅರ್ಹ ಜನಸಂಖ್ಯೆಗೆ ಲಸಿಕೆ ನೀಡಲು ಗುರಿ ಹೊಂದಿದ್ದು, ಇದುವರೆಗೆ 61% ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ನೀಡಿದೆ.

ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದು, ಕ್ವಾಡ್ ದೇಶಗಳಾದ ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾಗಳ ಶೃಂಗಸಭೆಯಲ್ಲಿ ಕೊರೊನಾ ಲಸಿಕೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದ್ದು, ಲಸಿಕೆ ರಫ್ತಿನ ಕುರಿತು ಮಾತುಕತೆ ನಡೆದಿದೆ.

ಕೊರೊನಾ ಆರ್‌ಟಿಪಿಸಿಆರ್ ಪರೀಕ್ಷಾ ಕಿಟ್‌ಗಳ ರಫ್ತಿನ ಮೇಲೆ ನಿರ್ಬಂಧಕೊರೊನಾ ಆರ್‌ಟಿಪಿಸಿಆರ್ ಪರೀಕ್ಷಾ ಕಿಟ್‌ಗಳ ರಫ್ತಿನ ಮೇಲೆ ನಿರ್ಬಂಧ

ಲಸಿಕೆ ರಫ್ತು ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಭಾರತ ತನ್ನ ಕೊರೊನಾ ಲಸಿಕೆಗಳು ಹಾಗೂ ಕೊರೊನಾ ಕಾರ್ಯಾಚರಣೆ ಮಾದರಿಯೊಂದಿಗೆ ಆಫ್ರಿಕಾಗೆ ನೆರವಾಗಲು ಬಯಸುತ್ತದೆ ಎಂದು ಮೂಲ ತಿಳಿಸಿದೆ.

India Considering Resuming Exports Of COVID-19 Vaccines Soon

ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಸೋಮವಾರ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿದ್ದು, ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.

ಜಾಗತಿಕ ಲಸಿಕೆ ಹಂಚಿಕೆ ವೇದಿಕೆಯಾದ ಕೋವ್ಯಾಕ್ಸ್‌ಗೆ ಲಸಿಕೆ ಪೂರೈಕೆ ಪುನರಾರಂಭ ಮಾಡಲು ಭಾರತೀಯ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆಯಲ್ಲಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ. ಈ ವರ್ಷವೇ ಲಸಿಕೆ ಪೂರೈಕೆ ಪುನರಾರಂಭವಾಗುತ್ತದೆ ಎಂಬ ಭರವಸೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ಅಧಿಕಾರಿ ಬ್ರೂಸ್ ಐಲ್ವಾರ್ಡ್ ತಿಳಿಸಿದ್ದಾರೆ.

ಭಾರತ ಕೊರೊನಾ ಲಸಿಕೆ ರಫ್ತನ್ನು ನಿಲ್ಲಿಸುವ ಮೊದಲು ಸುಮಾರು ನೂರು ದೇಶಗಳಿಗೆ 66 ದಶಲಕ್ಷ ಡೋಸ್‌ಗಳನ್ನು ನೀಡಿತ್ತು ಹಾಗೂ ಮಾರಾಟವನ್ನೂ ಮಾಡಿತ್ತು. ಭಾರತದಲ್ಲಿ ಸದ್ಯ ಕೊರೊನಾ ಲಸಿಕೆಗಳ ಉತ್ಪಾದನೆಯೂ ಹೆಚ್ಚಾಗಿದ್ದು, ರಫ್ತು ಮಾಡಲು ಸಕಾಲ ಎಂದು ಪರಿಗಣಿಸಲಾಗುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಕೋವಿಶೀಲ್ಡ್‌ ಲಸಿಕೆ ಉತ್ಪಾದನೆಯನ್ನು ಏಪ್ರಿಲ್ ತಿಂಗಳಿನಿಂದ ದ್ವಿಗುಣಗೊಳಿಸಿದೆ.

ಪ್ರಪಂಚದಾದದ್ಯಂತ 5.7 ಬಿಲಿಯನ್ ಡೋಸ್‌ಗಳ ಕೊರೊನಾ ಲಸಿಕೆ ಪೂರೈಕೆ ಮಾಡಲಾಗಿದೆ. ಆಫ್ರಿಕಾದಲ್ಲಿ ಮಾತ್ರ 2% ಲಸಿಕೆ ಪೂರೈಕೆಯಾಗಿದೆ. ಹೀಗಾಗಿ ಆಫ್ರಿಕಾಗೆ ನೆರವಾಗಲು ಹಲವು ದೇಶಗಳು ಮುಂದಾಗಿವೆ.

ಕೊರೊನಾ ಲಸಿಕೆ; ವಿಶ್ವದಲ್ಲೇ ನಂಬರ್ 1 ಸ್ಥಾನದಲ್ಲಿ ಭಾರತ
ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ವೇಗವಾಗಿ ನಡೆಯುತ್ತಿದ್ದು, ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರು ಮತ್ತು ಎರಡು ಡೋಸ್ ಪೂರ್ಣಗೊಳಿಸಿದವರಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಶೇ 62.54 ರಷ್ಟು ಲಸಿಕೆಯನ್ನು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇ 36.30ಯಷ್ಟು ಲಸಿಕೆಯನ್ನು ನಗರ ಪ್ರದೇಶದಲ್ಲಿ ನೀಡಲಾಗಿದೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರು, ಎರಡು ಡೋಸ್ ಪಡೆದವರು ಎರಡರಲ್ಲಿಯೂ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಒಟ್ಟು 181 ಮಿಲಿಯನ್ ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಚಿವಾಲಯ ವಿವರಿಸಿದೆ.

ಭಾರತದಲ್ಲಿ ಜನವರಿ 16ರಂದು ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಭಾರತ ಲಸಿಕೆ ರಫ್ತನ್ನು ನಿಲ್ಲಿಸಿತ್ತು. ಇದರಿಂದ ಲ್ಯಾಟಿನ್ ಅಮೆರಿಕ, ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾ ಸೇರಿದಂತೆ ಹಲವು ದೇಶಗಳಿಗೆ ಸಮಸ್ಯೆಯಾಯಿತು. ನೇಪಾಳ, ಶ್ರೀಲಂಕಾದಂಥ ದೇಶಗಳಿಗೆ ಹೆಚ್ಚಿನ ಮಟ್ಟದಲ್ಲಿ ತೊಂದರೆಯಾಯಿತು. ಇದೀಗ ಲಸಿಕೆಗಳ ರಫ್ತು ಪುನರಾರಂಭಕ್ಕೆ ಭಾರತ ಮುಂದಾಗಿರುವುದಾಗಿ ತಿಳಿದುಬಂದಿದೆ.

English summary
India is considering resuming exports of COVID-19 vaccines soon, mainly to Africa sources said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X