ಭಾರತ-ಚೀನಾ ಯೋಧರ ಘರ್ಷಣೆ; ವೈರಲ್ ಆದ ವಿಡಿಯೋ

ನವದೆಹಲಿ, ಜೂನ್ 22 : ಗಾಲ್ವನ್ ಕಣಿವೆಯಲ್ಲಿನ ಭಾರತ-ಚೀನಾ ಯೋಧರ ಘರ್ಷಣೆ ಬಳಿಕ ಉನ್ನತ ಮಟ್ಟದ ಮಾತುಕತೆಗಳು ಆರಂಭವಾಗಿವೆ. ಇದೇ ಸಮಯದಲ್ಲಿ ಯೋಧರ ನಡುವಿನ ಘರ್ಷಣೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.

ಲಡಾಕ್‌ನ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ನಡೆದಿತ್ತು. ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಸೇನೆಯ ಕಮಾಡಿಂಗ್ ಆಫೀಸರ್ ಸೇರಿ 40ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.

ಈ ಘರ್ಷಣೆ ಬಳಿಕ ಭಾರತದಲ್ಲಿ ಚೀನಾದ ಮೇಲಿನ ಆಕ್ರೋಶ ಹೆಚ್ಚಾಗಿದೆ. ಗಡಿಯಲ್ಲಿ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿದ್ದು, ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದರ ನಡುವೆಯೇ ವಿಡಿಯೋವೊಂದು ವೈರಲ್ ಆಗಿದೆ.

India-China Faceoff New Video Goes Viral

ಏನಿದು ವಿಡಿಯೋ? : ಗಡಿಯಲ್ಲಿ ಭಾರತೀಯ ಯೋಧರು ಚೀನಾದ ನಾಲ್ವರು ಯೋಧರ ಭುಜಕ್ಕೆ ಕೈ ಹಾಕಿ ಹಿಂದೆ ತಳ್ಳುತ್ತಿರುವ ವಿಡಿಯೋ ಇದಾಗಿದೆ. ಇದು ಗಾಲ್ವನ್ ಕಣಿವೆಯ ವಿಡಿಯೋ ಎಂದು ಬರಹದಡಿ ಹಲವು ಕಡೆ ಶೇರ್ ಆಗುತ್ತಿದೆ.

ವಾಪಸ್ ತೆರಳುವಂತೆ ಪದೇ ಪದೇ ಹೇಳುತ್ತಿರುವ 5.30 ನಿಮಿಷದ ವಿಡಿಯೋ ಇದಾಗಿದೆ. ಆದರೆ, ಈ ವಿಡಿಯೋ ಸಮಯ ಮತ್ತು ದಿನಾಂಕ ಸರಿಯಾಗಿ ಕಾಣಿಸುತ್ತಿಲ್ಲ. ಇದು ಹಳೆಯ ವಿಡಿಯೋ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೇ ತಿಂಗಳಿನಲ್ಲಿ ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ತಳ್ಳಾಟದ ವಿಡಿಯೋ ಇದಾಗಿದೆ ಎಂಬ ವರದಿಗಳು ಬರುತ್ತಿವೆ. ಮೇ 5 ಮತ್ತು 6ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಗಲಾಟೆ ನಡೆದಿತ್ತು. ಇದೇ ಮಾದರಿ ಗಲಾಟೆ ಮೇ 9ರಂದು ಸಹ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+