ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.31ರವರೆಗೂ ಬ್ರಿಟನ್‌-ಭಾರತ ವಿಮಾನಗಳ ರದ್ದು

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಬ್ರಿಟನ್ ನಲ್ಲಿ ಹೊಸ ವಿಧದ ಕೊರೊನಾ ವೈರಸ್ ಪತ್ತೆಯಾಗಿರುವ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಬ್ರಿಟನ್-ಭಾರತದ ನಡುವಿನ ಎಲ್ಲಾ ವಿಮಾನಗಳನ್ನು ಡಿಸೆಂಬರ್ 31ರವರೆಗೂ ರದ್ದುಗೊಳಿಸಿದೆ.

ಡಿಸೆಂಬರ್ 22ರಿಂದ ಡಿ.31ರವರೆಗೆ ನಿಗದಿಯಾಗಿದ್ದ ವಿಮಾನಗಳನ್ನು ರದ್ದುಗೊಳಿಸಿದ್ದು, ಡಿ.22ರಂದು ಭಾರತ ತಲುಪಲಿರುವ ವಿಮಾನದಲ್ಲಿರುವವರಿಗೆ ನಿಲ್ದಾಣದಲ್ಲಿಯೇ ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.

ಹೊಸ ಕೊರೊನಾ ಸೋಂಕು; ವಿಮಾನಗಳ ಸ್ಥಗಿತಕ್ಕೆ ಮನವಿ
ಲಂಡನ್ ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿಯಂತ್ರಣ ಮೀರಿದ್ದು, ಸೋಮವಾರ ಹೊಸ ವಿಧದ ಕೊರೊನಾ ವೈರಸ್ ಪತ್ತೆಯಾಗಿರುವುದಾಗಿ ತಿಳಿದುಬಂದಿತ್ತು. ಈ ವೈರಸ್, ಪ್ರಸ್ತುತ ಇರುವ ವೈರಸ್ ಗಿಂತ ಅತಿ ವೇಗವಾಗಿ ಹರಡಬಲ್ಲದ್ದಾಗಿದ್ದು, ಮುನ್ನೆಚ್ಚರಿಕೆಯಾಗಿ ಯುರೋಪ್ ತಕ್ಷಣವೇ ಬ್ರಿಟನ್ ನಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿತು. ಇದರ ಬೆನ್ನಲ್ಲೇ ಐದು ದೇಶಗಳು ಬ್ರಿಟನ್ ನಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿದವು. ಭಾರತ ಕೂಡ ತಾತ್ಕಾಲಿಕವಾಗಿ ಡಿ.31ರವರೆಗೂ ಬ್ರಿಟನ್-ಭಾರತದ ನಡುವಿನ ವಿಮಾನಗಳನ್ನು ರದ್ದುಗೊಳಿಸಿದೆ.

 India Bans Fights From UK Till Dec 31 Over New Covid-19 Variant Spread

"ಕೊರೊನಾ ವೈರಸ್ ತಡೆಯ ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಡಿ.22ರಂದು ಭಾರತಕ್ಕೆ ಬರಲಿರುವ ಪ್ರಯಾಣಿಕರಿಗೆ ಪರೀಕ್ಷೆ ನಡೆಸಲಾಗುವುದು. ಅವರಲ್ಲಿ ವೈರಸ್ ಪತ್ತೆಯಾದರೆ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗುವುದು" ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸಾಂಸ್ಥಿಕ ಕ್ವಾರಂಟೈನ್ ಗೆ ಸೋಂಕಿತರನ್ನು ಒಳಪಡಿಸಲಾಗುತ್ತದೆ. ನೆಗೆಟಿವ್ ಇದ್ದವರಿಗೂ ಏಳು ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಇರಲು ಸೂಚಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಲಂಡನ್ ನಿಂದ ನಾಲ್ಕನೇ ಹಂತದ ಲಾಕ್ ಡೌನ್ ಹೇರಲಾಗಿದ್ದು, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್ ನಂತರ ಸ್ಥಿತಿಗತಿ ಆಧರಿಸಿ ವಿಮಾನ ಯಾನ ಆರಂಭದ ಕುರಿತು ಚಿಂತನೆ ನಡೆಸಲಾಗುವುದು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ

English summary
The Centre government Monday issued an order to suspend all flights to and from the United Kingdom till December 31 over new Covid-19 Variant Spread
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X