ಲೋಕಸಭೆ ಚುನಾವಣೆ ವೇಳೆ ಭಾರತದಲ್ಲಿ ಪಾಕ್ ನಿಂದ ಕೋಮು ಗಲಭೆಗೆ ಕುಮ್ಮಕ್ಕು

ಬಿಜೆಪಿಯು "ಹಿಂದುತ್ವ ರಾಷ್ಟ್ರೀಯತೆ ವಾದ" ಮುಂದೆ ಮಾಡಿಕೊಂಡು ಮುಂಬರುವ ಲೋಕಸಭೆ ಚುನಾವಣೆಗೆ ತೆರಳಿದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳಿಂದ ಕೋಮು ಗಲಭೆಗಳಾಗಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆಯ ಇತ್ತೀಚಿನ ವರದಿಯೊಂದು ಬಹಿರಂಗ ಮಾಡಿದೆ. ಇಡೀ ಜಗತ್ತು ಎದುರಿಸುತ್ತಿರುವ ಆತಂಕಗಳ ಮೌಲ್ಯಮಾಪನವನ್ನು ಮಾಡಲಾಗಿದೆ.

ಅಫ್ಘಾನಿಸ್ತಾನದಲ್ಲಿ ಜುಲೈ ಮಧ್ಯಭಾಗದಲ್ಲಿ ಅಧ್ಯಕ್ಷೀಯ ಚುನಾವಣೆ ಇದೆ. ಅಲ್ಲಿ ತಾಲಿಬಾನ್ ನಿಂದ ಭಾರೀ ಪ್ರಮಾಣದಲ್ಲಿ ದಾಳಿಗಳಾಗುವ ಸಾಧ್ಯತೆ ಇದೆ. ಈ ವರ್ಷ ದಕ್ಷಿಣ ಏಷ್ಯಾದ ದೇಶಗಳು ದೊಡ್ಡ ಮಟ್ಟದಲ್ಲಿ ಸವಾಲು ಎದುರಿಸಲಿವೆ. ಪಾಕಿಸ್ತಾನವು ಉಗ್ರರ ಜತೆಗೆ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಭಾರತದಲ್ಲಿನ ಲೋಕಸಭೆ ಚುನಾವಣೆಯು ಕೋಮು ಗಲಭೆಯ ಅಪಾಯವನ್ನು ಸೂಚಿಸುತ್ತದೆ ಎಂದು ತಿಳಿಸಲಾಗಿದೆ.

ಇರಾನ್ ನಿಂದ ಹೊಸದಾಗಿ ಯಾವುದೇ ಅಣ್ವಸ್ತ್ರ ಕಾರ್ಯಕ್ರಮ ಕೈಗೆತ್ತಿಕೊಳ್ಳುವ ಸಾಧ್ಯತೆ ಇಲ್ಲ. ಅದೇ ವೇಳೆ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಕಾರ್ಯಕ್ರಮ ಕೈ ಬಿಡುವಂತೆಯೂ ಕಂಡುಬರುವುದಿಲ್ಲ. ಜತೆಗೆ ಇರಾಕ್ ಮತ್ತು ಸಿರಿಯಾದಲ್ಲಿ ಈಗಲೂ ಸಾವಿರಾರು ಸಂಖ್ಯೆಯಲ್ಲಿ ಐಎಸ್ ಉಗ್ರಗಾಮಿಗಳು ಇದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಇಸ್ಲಾಮಿಕ್ ಸ್ಟೇಟ್ ಮುಗಿದುಹೋಗಿದೆ, ಅದು ಉಳಿದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

India at risk of communal violence, terror attacks by Pak-based groups

ಇದು ವಾರ್ಷಿಕ ವರದಿಯಾಗಿದ್ದು, ಮಂಗಳವಾರದಂದು ಅಮೆರಿಕ ಕಾಂಗ್ರೆಸ್ ಮುಂದೆ ಇಡಲಾಗಿದೆ. ಮುಖ್ಯವಾಗಿ ಭಾರತದಲ್ಲಿ ಬಿಜೆಪಿಯು ಹಿಂದುತ್ವ ರಾಷ್ಟ್ರೀಯತೆ ವಿಚಾರದಲ್ಲಿ ಚುನಾವಣೆಗೆ ಹೋದರೆ ಕೋಮು ಗಲಭೆಗಳಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಮುಸ್ಲಿಮರಲ್ಲಿ ಗಾಬರಿ ಮೂಡಿಸಿ, ಉಗ್ರಗಾಮಿ ಗುಂಪುಗಳ ಪ್ರಭಾವವನ್ನು ಭಾರತದಲ್ಲಿ ವಿಸ್ತರಿಸಲು ಪ್ರಯತ್ನಿಸಬಹುದು ಎಂದು ಎಚ್ಚರಿಸಲಾಗಿದೆ.

ಕಳೆದ ವರ್ಷ ಇದೇ ವರದಿಯಲ್ಲಿ ಭಾರತಕ್ಕೆ ಹೆಚ್ಚಿನ ಆತಂಕಗಳೇನೂ ಹೇಳಿರಲಿಲ್ಲ. ಸವಾಲು- ಆತಂಕ ಎಂದು ಹೇಳಿದ್ದು ಚೀನಾ ಹಾಗೂ ಪಾಕಿಸ್ತಾನದಿಂದ ಮಾತ್ರ. ಪಾಕಿಸ್ತಾನದ ನೆಲವನ್ನು ಬಳಸಿಕೊಂಡು ಭಾರತ ಹಾಗೂ ಅಫ್ಘಾನಿಸ್ತಾನದ ಮೇಲೆ ಉಗ್ರರು ದಾಳಿ ನಡೆಸುವುದು ಹೆಚ್ಚಾಗಬಹುದು. ಇದು ಅಮೆರಿಕ ಹಿತಾಸಕ್ತಿಗೂ ಅಪಾಯ ಒಡ್ಡಬಹುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+