ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತದ ವಾಯುಪ್ರದೇಶ ಬಳಸಲು ಅನುಮತಿ

ನವದೆಹಲಿ, ಫೆಬ್ರವರಿ 23: ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ತನ್ನ ವಾಯು ಪ್ರದೇಶ ಬಳಸಿಕೊಳ್ಳಲು ಭಾರತ ಒಪ್ಪಿಗೆ ನೀಡಿದೆ.

ಮಂಗಳವಾರ ಇಮ್ರಾನ್ ಖಾನ್ ಶ್ರೀಲಂಕಾಗೆ ಎರಡು ದಿನಗಳ ಪ್ರವಾಸದ ಸಲುವಾಗಿ ತೆರಳಲಿದ್ದು, ಭಾರತದ ವಾಯು ಪ್ರದೇಶ ಬಳಕೆ ಮಾಡಬೇಕಿದೆ. ಹೀಗಾಗಿ ಅನುಮತಿ ನೀಡಲಾಗಿದೆ. 2019ರ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನಕ್ಕೆ ತನ್ನ ವಾಯುಪ್ರದೇಶ ಬಳಕೆಗೆ ಭಾರತ ನಿರ್ಬಂಧ ವಿಧಿಸಿತ್ತು.

ವಿವಿಐಪಿ ವಿಮಾನಗಳಿಗೆ ಸಾಮಾನ್ಯವಾಗಿ ಎಲ್ಲಾ ದೇಶಗಳೂ ಅನುಮತಿ ನೀಡುತ್ತವೆ. ಆದರೆ 2019ರಲ್ಲಿ ಪ್ರಧಾನಿ ಮೋದಿ ಅಮೆರಿಕ ಹಾಗೂ ಸೌದಿ ಅರೇಬಿಯಾ ಪ್ರವಾಸದ ಸಂದರ್ಭ ಭಾರತದ ವಿಮಾನ ಪಾಕಿಸ್ತಾನ ವಾಯುಪ್ರದೇಶವನ್ನು ಬಳಸಿಕೊಳ್ಳಲು ಪಾಕಿಸ್ತಾನ ಅನುಮತಿ ನಿರಾಕರಿಸಿದ್ದು ಅಸಹಜವೆನಿಸಿತ್ತು.

India Allows Pakistani Prime Minister Imran Khan Aircraft To Use Airspace

ಇದೇ ವೇಳೆ ಶ್ರೀಲಂಕಾ ಸಂಸತ್‌ನಲ್ಲಿ ನಿಗದಿಯಾಗಿದ್ದ ಇಮ್ರಾನ್ ಖಾನ್ ಭಾಷಣವನ್ನು ಶ್ರೀಲಂಕಾ ರದ್ದುಗೊಳಿಸಿದೆ. ಇಮ್ರಾನ್ ಭಾಷಣಕ್ಕೆ ಅವಕಾಶ ನೀಡುವುದು ಭಾರತದೊಂದಿಗೆ ವೈಮನಸ್ಸಿಗೆ ಕಾರಣವಾಗಬಹುದು ಎಂಬ ಉದ್ದೇಶದಿಂದ ಭಾಷಣ ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+