EV ಉತ್ಪಾದನೆ, ನೋಂದಣಿ ಮತ್ತು ರಫ್ತು, ಮಾರಾಟದಲ್ಲಿ ಭಾರತ ಸಾಧನೆ
ಬೆಂಗಳೂರು, ನವೆಂಬರ್ 20: ಭಾರತವು ಇವಿ (ಎಕೆಕ್ಟ್ರಿಕ್ ಹಬ್) ಆಗುವುದರಲ್ಲಿ ಅನುಮಾನವೇ ಇಲ್ಲ. "ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ದೇಶ ಆಟೋ ವಲಯವು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಿದೆ. ಇವಿ ಉತ್ಪಾದನೆ, ರಫ್ತು ಮತ್ತು ಮಾರಾಟದಲ್ಲಿ ದೇಶ ಮಹತ್ವದ ಸಾಧನೆ ಮಾಡಿದೆ. ಇದೇ ವರ್ಷದ ಅತ್ಯಧಿಕ ಇವಿ ನೋಂದಣಿ ಆಗಿದೆ. ಬೈಕ್ ಮಾರಾಟದಲ್ಲೂ ದಾಖಲೆ ಆಗಿದೆ. ಭಾರತವು ಸುಝುಕಿಯ ಜಾಗತಿಕ ಇವಿ ತಾಣವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ "ಮೇಕ್ ಇನ್ ಇಂಡಿಯಾ' ಉಪಕ್ರಮವು ಭಾರತದ ಆಟೋ ವಲಯವನ್ನು ಪರಿವರ್ತಿಸಿದೆ. ದೇಶೀಯ ಉತ್ಪಾದನೆ, ರಫ್ತುಗಳನ್ನು ಹೆಚ್ಚಿಸಿ, ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ. ಸದ್ಯ ಆಟೋ ವಲಯವು ಭಾರತದ ಒಟ್ಟು ದೇಶಿಯ ಉತ್ಪನ್ನಕ್ಕೆ (ಜಿಡಿಪಿ) ಕೊಡುಗೆ ನೀಡುತ್ತಿದೆ. ಅದು ಹೇಗೆ? ಅಂಕಿ ಸಂಖ್ಯೆಗಳ ವಿವರ ಇಲ್ಲಿದೆ.

EV ನೋಂದಣಿ, ಮಾರಾಟ, ರಫ್ತಿನಲ್ಲಿ ಭಾರತ ದಾಖಲೆ
ಆಟೋ ಮೊಬೈಲ್ ವಲಯದಲ್ಲಿ ದೇಶೀಯ ಉತ್ಪಾದನೆ, ರಫ್ತು ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗಿರುವ ಕಾರಣಕ್ಕೆ ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ)ಕ್ಕೆ ಕೊಡುಗೆ ಇದರಿಂದ ಅಪಾರ ಎನ್ನಲಾಗಿದೆ. ಇದೇ 2025 ರಲ್ಲಿ ದೇಶದ್ಲಲಿ EV ಮಾರಾಟವು 56.75 ಲಕ್ಷ ಯೂನಿಟ್‌ಗಳಷ್ಟಿದೆ. ರಫ್ತುಗಳು 24 ರಿಂದ 25ರಷ್ಟು ರಷ್ಟು ಏರಿಕೆ ಆಗಿ ಮೈಲಿಗಲ್ಲು ಸಾಧನೆ ಆಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು 11.49 ಲಕ್ಷ ಯೂನಿಟ್‌ಗಳಿಗೆ ತಲುಪಿದೆ.
2014 ರಲ್ಲಿ ಪ್ರಾರಂಭವಾದ ಮೇಕ್ ಇನ್ ಇಂಡಿಯಾ, ಆಟೋ ಉದ್ಯಮವನ್ನು ದೇಶದ ಪ್ರಮುಖ ಆರ್ಥಿಕ ಚಾಲಕನನ್ನಾಗಿ ಮಾಡಿದೆ. ದೇಶದ ಜಿಡಿಪಿಗೆ 7.1ರಷ್ಟು ಕೊಡುಗೆ ಆಟೋ ಮೊಬೈಲ್ ವಲಯದ್ದಿದೆ. ಈ ವಲಯದಿಂದಲೇ ಸುಮಾರು 37 ಮಿಲಿಯನ್ ಜನರಿಗೆ ಉದ್ಯೋಗ ಸಿಕ್ಕಿದೆ. 2025 ಹಬ್ಬದ ಬೇಡಿಕೆ ಮತ್ತು EV ವೇಗವರ್ಧನೆಯ ನಡುವೆ ಅಕ್ಟೋಬರ್‌ನಲ್ಲಿ 40ರಷ್ಟು ರಷ್ಟು ದಾಖಲೆಯ ಮಾರಾಟವಾಗಿದೆ ಎಂದು ವರದಿ ಆಗಿದೆ.
ಸರಕು ಸೇವಾ ತೆರಿಗೆಯಲ್ಲಿನ (GST) ಬದಲಾವಣೆಗಳು ಮತ್ತು 5ಜಿ-ಸಕ್ರಿಯಗೊಳಿಸಿದ ವಾಹನಗಳಂತಹ ಸುಧಾರಣೆಗಳ ಮೂಲಕ ಭಾರತವು ಐದು ವರ್ಷಗಳಲ್ಲಿ ವಿಶ್ವದ ಅಗ್ರ ಆಟೋ ಉತ್ಪಾದಕ ರಾಷ್ಟ್ರವಾಗಬೇಕೆಂಬ ಗುರಿ ಇದೆ. ಆದರೂ KPMG ಮತ್ತು NITI ಆಯೋಗ್ ವರದಿಗಳಲ್ಲಿ ಗಮನಿಸಿದಂತೆ, US ಸುಂಕಗಳು ಮತ್ತು ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಸವಾಲುಗಳಾಗಿ ಭಾರತದ ಮುಂದಿವೆ.












Click it and Unblock the Notifications