ಚಿತ್ರಗಳಲ್ಲಿ : ಸೋದರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಸಂಭ್ರಮ
ಬೆಂಗಳೂರು, ಆಗಸ್ಟ್ 26: ಭಾರತದಾದ್ಯಂತ ಸಹೋದರರಿಗೆ ರಾಖಿ ಕಟ್ಟಿ ಸಹೋದರಿಯರು ಅಣ್ಣಂದಿರ ಆಶಿರ್ವಾದ ಪಡೆದರು. ಗಡಿ ಕಾಯುವ ಯೋಧರಿಗೂ ರಾಖಿ ಕಟ್ಟಿದ ಮಹಿಳೆಯರು ದೇಶದ ಒಳಿತಿಗೆ ಪ್ರಾರ್ಥಿಸಿದರು. ಅಣ್ಣ-ತಂಗಿಯರ ಅನುಬಂಧವನ್ನು ಹೆಚ್ಚಿಸುವ ರಕ್ಷಾ ಬಂಧನ ಹಬ್ಬದ ಸಂಭ್ರಮಾಚರಣೆಯಲ್ಲಿ ಇಡೀ ದೇಶವೇ ತೊಡಗಿದೆ.
ರಕ್ಷಾ ಬಂಧನವನ್ನು ಆಚರಿಸುವ ರಾಖಿ, ಶ್ರಾವಣ ಹುಣ್ಣಿಮೆ ಭಾರತದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ರಾಖಿ ಕಟ್ಟುವುದರ ಜೊತೆಗೆ ಈ ಪೌರ್ಣಮಿಯಂದು ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಸಹ ಕರೆಯುತ್ತಾರೆ. ಈ ಸಮಯದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಬಿತ್ತಲಾಗುತ್ತದೆ ಮತ್ತು ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೂ ಮಕ್ಕಳು ರಾಖಿ ಕಟ್ಟಿ ಸಂಭ್ರಮಿಸಿದರು. ಈ ಮೊದಲು ಪ್ರಧಾನಿ ಹಾಗೂ ರಾಷ್ಟ್ರಪತಿಗಳು ಟ್ವಿಟ್ಟರ್ ಮೂಲಕ ದೇಶದ ಜನರಿಗೆ ರಕ್ಷಾಬಂಧನದ ಶುಭ ಕೋರಿದ್ದರು. ಪ್ರಧಾನಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಜನತೆಗೆ ಶುಭಾಶಯ ಹೇಳಿದರು.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದರು. ಸಾಮಾನ್ಯ ಜನರಿಂದ ಹಿಡಿದು ಗಣ್ಯಮಾನ್ಯರವರೆಗೆ ರಕ್ಷಬಂಧನವನ್ನು ಆನಂದದಿಂದ ಆಚರಿಸುತ್ತಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ರಾಖಿ ಕಟ್ಟಿದ ಮಕ್ಕಳು
ನವದೆಹಲಿ: ಪುಟ್ಟ ಮಕ್ಕಳೊಂದಿಗೆ ರಾಖಿ ಹಬ್ಬ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ.

ರಾಷ್ಟ್ರಪತಿ ಭವನದಲ್ಲಿ ರಕ್ಷಾ ಬಂಧನ ಸಂಭ್ರಮ
ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ್ ಆಚರಿಸಿಕೊಂಡರು.

ವೆಂಕಯ್ಯ ಅವರಿಗೆ ರಾಖಿ ಕಟ್ಟಿದ ಸುಷ್ಮಾ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದರು.

ಲಕ್ನೋದಲ್ಲಿ ವಿಶಿಷ್ಟ ಅಚರಣೆ
ಲಕ್ನೋ: ಮಹಾಂತ, ಮಂಕಮೇಶ್ವರ್ ದೇಗುಲದ ಶ್ರೀಮಂತ ದಿವ್ಯಾಗಿರಿ ಮಹಾರಾಜ್ ನೇತೃತ್ವದ ತಂಡವು ರಕ್ಷಾ ಬಂಧನದ ಅಂಗವಾಗಿ ಗೋಮತಿ ನದಿ ತೀರದಲ್ಲಿ 2075 ರಾಖಿಗಳನ್ನು ಕಟ್ಟಿ, ಸಂಭ್ರಮಿಸಿದೆ.

ಜಲಂಧರ್ ನಲ್ಲಿ ಬಿಎಸ್ ಎಫ್ ಯೋಧರು
ಜಲಂಧರ್ : ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ ಎಫ್) ಯೊಧರಿಗೆ ರಕ್ಷಾ ಬಂಧನ ಕಟ್ಟಿ, ಸಂಭ್ರಮಿಸಲಾಯಿತು.

ಮಮತಾ ಬ್ಯಾನರ್ಜಿ ಅವರ ಸಂಭ್ರಮಾಚರಣೆ
ಪಶ್ಚಿಮ ಬಂಗಾಲದ ರಾಜ್ಯಪಾಲರಿಗೆ ರಾಖಿ ಕಟ್ಟಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ದಿಲೀಪ್ ದಾಸ್ ಮಹರಾಜ್ ಗೆ ರಾಖಿ ಕಟ್ಟಿದ ಮುಸ್ಲಿಂ ಮಹಿಳೆ
ಅಹಮದಾಬಾದ್ : ಮುಸ್ಲಿಂ ಮಹಿಳೆಯೊಬ್ಬರು, ಜಗನ್ನಾಥ್ ದೇಗುಲದ ಪುರೋಹಿತ ದಿಲೀಪ್ ದಾಸ್ ಜೀ ಮಹರಾಜ್ ಗೆ ರಾಖಿ ಕಟ್ಟಿ ಸಂಭ್ರಮಿಸಿದರು.

ರಾಂಚಿಯಲ್ಲಿ ರಾಖಿ ಸಂಭ್ರಮ
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ರಘುಬೀರ್ ದಾಸ್ ಅವರಿಗೆ ರಕ್ಷೆ ಕಟ್ಟಿದ ಮಹಿಳೆ. ಪಿಟಿಐ ಚಿತ್ರಗಳು

ಬಿಹಾರದಲ್ಲಿ ಮರಕ್ಕೆ ರಾಖಿ ಕಟ್ಟಿದ ನಿತೀಶ್
ಬಿಹಾರದಲ್ಲಿ ಮರಕ್ಕೆ ರಾಖಿ ಕಟ್ಟಿದ ಜೆಡಿಯು ಮುಖಂಡ ನಿತೀಶ್ ಕುಮಾರ್.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications