ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗು ರಂಗಿನ ಚುನಾವಣಾ ಪ್ರಚಾರ ಚಿತ್ರಗಳು

By Mahesh
|
Google Oneindia Kannada News

ಬೆಂಗಳೂರು, ಮಾ.23: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾರಣಾಸಿಯಲ್ಲಿ ಹರ್ ಹರ್ ಮೋದಿ ಘರ್ ಘರ್ ಮೋದಿ ಎಂದು ಭಜನೆ ಆರಂಭಿಸಿದೆ. ಆಮ್ ಆದ್ಮಿ ಪಕ್ಷ ದೇಶದೆಲ್ಲೆಡೆ ಪೊರಕೆ ಹಿಡಿದು ಭ್ರಷ್ಟಾಚಾರ ತೊಲಗಿಸುವ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಕಳೆದ ಹತ್ತು ವರ್ಷದ ಸಾಧನೆಯ ಪಟ್ಟಿಯನ್ನು ಜನರ ಮುಂದಿಡುತ್ತಿದೆ.

ಕರ್ನಾಟಕ, ನವದೆಹಲಿ, ಸಾಂಗ್ಲಿ, ಚಂದೀಗಢ, ಜಮ್ಮು ಮತ್ತು ಕಾಶ್ಮೀರ,ಪಾಟ್ನ, ಜೈಪುರ, ಚೆನ್ನೈ, ಗುರ್ ಗಾಂವ್, ಮುರ್ಷಿದಾಬಾದ್ ಸೇರಿದಂತೆ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ನಡೆದಿರುವ ಚುನಾವಣಾ ಪ್ರಚಾರದ ಚಿತ್ರಗಳನ್ನು ಇಲ್ಲಿ ತಪ್ಪದೆ ನೋಡಿ..[ಚುನಾವಣಾ ಪ್ರಚಾರ ಗ್ಯಾಲರಿ ನೋಡಿ]

ಬಣ್ಣ ಬಣ್ಣದ ಟೀ ಶರ್ಟ್ ಗಳಲ್ಲಿ ನಾಯಕರು

ಬಣ್ಣ ಬಣ್ಣದ ಟೀ ಶರ್ಟ್ ಗಳಲ್ಲಿ ನಾಯಕರು

ಕೋಲ್ಕತ್ತಾ: ಬಣ್ಣ ಬಣ್ಣದ ಟೀ ಶರ್ಟ್ ಗಳಲ್ಲಿ ವಿವಿಧ ಪಕ್ಷದ ವಿವಿಧ ನಾಯಕರು ಕಂಗೊಳಿಸುತ್ತಿದ್ದಾರೆ. PTI Photo by Swapan Mahapatra

ಗೋಪಿನಾಥ್ ಮುಂಡೆ ಪ್ರಚಾರದ ವೈಖರಿ

ಗೋಪಿನಾಥ್ ಮುಂಡೆ ಪ್ರಚಾರದ ವೈಖರಿ

ಸಾಂಗ್ಲಿ: ಬಿಜೆಪಿ ನಾಯಕ ಗೋಪಿನಾಥ್ ಮುಂಡೆ, ಆರ್ ಪಿಐ ಅಧ್ಯಕ್ಷ ರಾಮದಾಸ್ ಆಥಾವಳೆ ಅವರು ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಕಂಡು ಬಂದಿದ್ದು ಹೀಗೆ

ಚಂದೀಗಢದಲ್ಲಿ ನಟಿ ಕಿರಣ್ ಖೇರ್ ಪ್ರಚಾರ

ಚಂದೀಗಢದಲ್ಲಿ ನಟಿ ಕಿರಣ್ ಖೇರ್ ಪ್ರಚಾರ

ಚಂದೀಗಢದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಅವರು ಪಕ್ಷದ ನಾಯಕರಾದ ಸಂಜಯ್ ಥಂಡನ್ ಮತ್ತು ಸತ್ಪಾಲ್ ಜೈನ್ ಜತೆ ಸುದ್ದಿಗೋಷ್ಠಿಯಲ್ಲಿ...
.ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರು ಕೊಳೆತ ಮೊಟ್ಟೆ ಎಸೆದು ಕಿರಣ್ ಅವರನ್ನು ಸ್ವಾಗತಿಸಿದ್ದರು

ಡಿಕೆ ಸುರೇಶ್ ಅಭಿಮಾನಿಗಳ ಸಾಗರ

ಡಿಕೆ ಸುರೇಶ್ ಅಭಿಮಾನಿಗಳ ಸಾಗರ

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿಕೆ ಸುರೇಶ್ ಅವರು ಅಭಿಮಾನಿಗಳ ಸಾಗರದ ನಡುವೆ ಕಳೆದ ವಾರ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾಗೆ ಸ್ವಾಗತ

ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾಗೆ ಸ್ವಾಗತ

ಬಿಹಾರದ ಪಾಟ್ನದ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾಗೆ ಅಭಿಮಾನಿಗಳಿಂದ ಸಿಕ್ಕ ಸ್ವಾಗತ

ಆಮ್ ಆದ್ಮಿ ಗುಲ್ ಪನಾಗ್ ಸವಾರಿ

ಆಮ್ ಆದ್ಮಿ ಗುಲ್ ಪನಾಗ್ ಸವಾರಿ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗುಲ್ ಪನಾಗ್ ಅವರು ಬೈಸಿಕಲ್ ಹತ್ತಿ ಅಭಿಮಾನಿಗಳ ಜತೆ ಪ್ರಚಾರ ನಿರತರಾಗಿದ್ದಾರೆ

ಆರ್ ಎಲ್ ಡಿ ನಾಯಕಿ ಜಯಪ್ರದಾ

ಆರ್ ಎಲ್ ಡಿ ನಾಯಕಿ ಜಯಪ್ರದಾ

ಮುಜಾಫರ್ ನಗರದಲ್ಲಿ ಚುನಾವಣಾ ಪ್ರಚಾರ ನಿರತ ಆರ್ ಎಲ್ ಡಿ ನಾಯಕಿ ಜಯಪ್ರದಾ

English summary
Indian political parties campaigning for general elections in April and May 2014. Some 814 millions are eligible to vote at more than 930,000 polling station this time. parties are using colourful campaign technique to reach out to voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X