ಚಿತ್ರಗಳು : ಛತ್ತೀಸ್‌ಗಢದಲ್ಲಿ ಶಾಂತಿ ಸಂದೇಶ ಸಾರಿದ ಮೋದಿ
ನವದೆಹಲಿ, ಮೇ 09 : 'ಹಿಂಸಾಚಾರಕ್ಕೆ ಭವಿಷ್ಯವಿಲ್ಲ, ಭವಿಷ್ಯ ಇರುವುದು ಶಾಂತಿಯಲ್ಲಿ. ಛತ್ತೀಸ್‌ಗಢದಲ್ಲಿಯೇ ನಕ್ಸಲ್ ಸಮಸ್ಯೆ ಕಡಿಮೆಯಾಗುತ್ತಿದೆ. ಇದನ್ನು ಹೋರಾಟ ಮಾಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಛತ್ತೀಸ್‌ಗಢ ರಾಜ್ಯದ ನಕ್ಸಲ್ ಪೀಡಿತ ದಂತೇವಾಡಾಕ್ಕೆ ಭೇಟಿ ನೀಡಿದ್ದರು. 2,400 ಕೋಟಿ ರೂ. ವೆಚ್ಚದಲ್ಲಿನ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.[ಮೋದಿ ಭೇಟಿ, ನಕ್ಸಲರಿಂದ 300 ಗ್ರಾಮಸ್ಥರ ಒತ್ತೆ]
ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಬರಬೇಕಾಗಿದ್ದ ಗ್ರಾಮಸ್ಥರನ್ನು ನಕ್ಸಲರ ತಂಡ ಸುಕ್ಮಾ ಗ್ರಾಮದಲ್ಲಿ ಒತ್ತೆಯಾಳಾಗಿಟ್ಟುಕೊಂಡಿತ್ತು. ಆದರೆ, ನಕ್ಸಲರ ನೆಲದಿಂದಲೇ ಮೋದಿ ಶಾಂತಿಯ ಸಂದೇಶ ಸಾರಿದರು. ಹೆಗಲ ಮೇಲೆ ಬಂದೂಕು ಇಟ್ಟುಕೊಂಡರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಿ ಕೊಟ್ಟರು.
'ನಕ್ಸಲ್ ಹೋರಾಟದ ಜನ್ಮಭೂಮಿಯಾದ ನಕ್ಸಲ್ ಬಾರಿಯಲ್ಲೇ ಹಿಂಸೆ ಕೊನೆಗೊಂಡಿದೆ. ಹಿಂಸಾಚಾರವನ್ನು ನಿಲ್ಲಿಸಿ, ನಿಮ್ಮ ಹಿಂಸೆಯಿಂದ ತೊಂದರೆಗೊಳಗಾದ ಕುಟುಂಬಗಳನ್ನು ಭೇಟಿಯಾಗಿ. ಅದು ನಿಮ್ಮ ಹೃದಯದಲ್ಲಿ ಬದಲಾವಣೆ ತರುತ್ತದೆ' ಎಂದು ಮೋದಿ ಸಲಹೆ ನೀಡಿದರು. ಮೋದಿ ಛತ್ತೀಸ್‌ಗಢ ಭೇಟಿಯ ಚಿತ್ರಗಳು [ಪಿಟಿಐ ಚಿತ್ರಗಳು]

ಛತ್ತೀಸ್‌ಗಢಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ಶನಿವಾರ ಪ್ರಧಾನಿ ನರೇಂದ್ರ ಮೋದಿ ಛತ್ತೀಸ್‌ಗಢ ರಾಜ್ಯದ ನಕ್ಸಲ್ ಪೀಡಿತ ದಂತೇವಾಡಾಕ್ಕೆ ಭೇಟಿ ನೀಡಿದ್ದರು. 2,400 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಶಾಲೆಗೆ ಭೇಟಿ ನೀಡಿದ್ದ ಮೋದಿ
ವಿವಿಧ ಯೋಜನೆಗೆ ಚಾಲನೆ ನೀಡುವ ಮೊದಲು ದಾಂತೇವಾಡದ ಸಕ್ಷಮ್ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ
ದಾಂತೇವಾಡದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, 'ನಕ್ಸಲ್ ಹೋರಾಟದ ಜನ್ಮಭೂಮಿಯಾದ ನಕ್ಸಲ್ ಬಾರಿಯಲ್ಲೇ ಹಿಂಸೆ ಕೊನೆಗೊಂಡಿದೆ. ಹಿಂಸಾಚಾರವನ್ನು ನಿಲ್ಲಿಸಿ, ನಿಮ್ಮ ಹಿಂಸೆಯಿಂದ ತೊಂದರೆಗೊಳಗಾದ ಕುಟುಂಬಗಳನ್ನು ಭೇಟಿಯಾಗಿ. ಅದು ಹೃದಯದಲ್ಲಿ ಬದಲಾವಣೆ ತರುತ್ತದೆ' ಎಂದು ನಕ್ಸಲರಿಗೆ ಸಲಹೆ ನೀಡಿದರು.

ಹಿಂಸಾಚಾರಕ್ಕೆ ಭವಿಷ್ಯವಿಲ್ಲ
'ಹಿಂಸಾಚಾರಕ್ಕೆ ಭವಿಷ್ಯವಿಲ್ಲ, ಭವಿಷ್ಯ ಇರುವುದು ಶಾಂತಿಯಲ್ಲಿ. ಇದನ್ನು ಹೋರಾಟ ಮಾಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು' ಎಂದು ಮೋದಿ ಹೇಳಿದರು. 'ಹಿಂಸಾಚಾರ ಯಾವುದೇ ಸಮಸ್ಯೆಗಳಿಗೂ ಪರಿಹಾರವಲ್ಲ. ನಕ್ಸಲರು ಮಕ್ಕಳಿಗೆ ಬಂದೂಕು ಕೊಡುತ್ತಿದ್ದರು, ಆದರೆ ಸರ್ಕಾರ ಅವರ ಕೈಗಳಿಗೆ ಪೆನ್ ನೀಡಿದೆ'. ಎಂದರು.

ಇತಿಹಾಸ ನಿರ್ಮಾಣವಾಗಿದೆ
'ದಂತೇವಾಡಾದಲ್ಲಿ ಇಂದು ಇತಿಹಾಸ ನಿರ್ಮಾಣವಾಗಿದೆ. ಮೊದಲ ಬಾರಿ ಇಷ್ಟೊಂದು ದೊಡ್ಡ ಮಟ್ಟದ ಯೋಜನೆ ಉದ್ಘಾಟನೆಯಾಗುತ್ತಿದೆ. ಕೇವಲ ಒಂದು ಗಂಟೆಯೊಳಗೆ 24 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಹಿ ಹಾಕಲಾಗಿದೆ' ಎಂದರು.












Click it and Unblock the Notifications