ಡೇರಾ ಸಚ್ಚಾ ಸೌಧದ ಹಣಕಾಸು ನೀತಿ ಬಗ್ಗೆ ಗೊತ್ತೆ?

ಚಂಡೀಗಢ, ಆಗಸ್ಟ್. 28 : ಬಾಬಾ ರಾಮ್ ರಹೀಮ್ ಸಿಂಗ್ ಕುರಿತ ಒಂದೊಂದೇ ವಿಚಾರಗಳು ಈಗ ಬೆಳಕಿಗೆ ಬರುತ್ತಿವೆ. ಬಾಬಾ ತನ್ನ ಮುಖ್ಯ ಆಶ್ರಮವಿರುವ ಡೇರಾ ಸಚ್ಚಾ ಸೌಧದಲ್ಲಿ ಪತ್ಯೇಕ ಹಣಕಾಸು ನೀತಿಯನ್ನು ಜಾರಿಗೆ ತಂದಿರುವುದು ಬಯಲಾಗಿದೆ.

Recommended Video

      Ram Rahim Case Sentencing Today | Oneindia Kannada

      ಸುಮಾರು ಒಂದು ಸಾವಿರ ಎಕರೆ ಜಾಗದಲ್ಲಿ ರಾಮ್ ರಹೀಮ್ ಸಿಂಗ್ ಡೇರಾ ಸಚ್ಚಾ ಸೌಧ ಹರಡಿಕೊಂಡಿದೆ. ಇದರೊಳಗೆ ಶಾಲೆ, ಆಸ್ಪತ್ರೆ, ಕ್ರೀಡಾಂಗಣ, ಸಿನಿಮಾ ಹಾಲ್ ಮುಂತಾದ ಸೌಲಭ್ಯಗಳಿವೆ.

      In Dera headquarters, a monetary system introduced

      ಡೇರಾ ಸಚ್ಚಾ ಸೌಧ ಮತ್ತು ಸುತ್ತಮುತ್ತಲಿನ ಅಂಗಡಿಗಳಲ್ಲಿ ಪ್ರತ್ಯೇಕ ಹಣಕಾಸು ನೀತಿ ಇದೆ. ಭಾರತೀಯ ರೂಪಾಯಿಯಲ್ಲಿ ಇಲ್ಲಿ ಚಿಲ್ಲರೆ ಪಡೆಯಲು ಸಾಧ್ಯವಿಲ್ಲ. ಇಲ್ಲಿರುವ ಅಂಗಡಿಗಳಿಗೆ ಸಚ್ (ಸತ್ಯ) ಎಂಬ ಹೆಸರನ್ನು ಇಡಲಾಗಿದೆ.

      ಇಲ್ಲಿ ವಸ್ತುಗಳನ್ನು ಕೊಂಡರೆ ಚಿಲ್ಲರೆ ನೀಡುವುದಿಲ್ಲ ಬದಲಾಗಿ 10ಮತ್ತು 5 ರೂ.ಗಳ ಪ್ಲಾಸ್ಟಿಕ್ ಟೋಕನ್ ನೀಡಲಾಗುತ್ತದೆ. ಭಾರತೀಯ ರೂಪಾಯಿಗಳಲ್ಲಿ ಚಿಲ್ಲರೆ ನೀಡುವುದಿಲ್ಲ.

      ಈ ಟೋಕನ್‌ಗಳು 'ಧನ್ ಧನ್ ಸದ್ಗುರು', 'ಡೇರಾ ಸಚ್ಚಾ ಸೌಧ ಸಿರ್ಸಾ' ಎಂಬ ಘೋಷಣೆಯನ್ನು ಒಳಗೊಂಡಿರುತ್ತದೆ. ಈ ಟೋಕನ್‌ಗಳನ್ನು ಮುಂದಿನ ಬಾರಿ ಸಚ್ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬಳಕೆ ಮಾಡಬಹುದಾಗಿದೆ.

      ಉದಾಹರಣೆಗೆ ವ್ಯಕ್ತಿಯೊಬ್ಬ ಸಚ್ ಅಂಗಡಿಯಲ್ಲಿ 70 ರೂ. ವ್ಯಾಪಾರ ಮಾಡಿ 100 ರೂ. ಕೊಟ್ಟರೆ ಮೂವತ್ತು ರೂ.ಗಳಿಗೆ ಚಿಲ್ಲರೆ ಕೊಡುವುದಿಲ್ಲ. ಅವರಿಗೆ ಐದು ಮತ್ತು ಹತ್ತು ರೂ.ಗಳ ಟೋಕನ್ ನೀಡಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+