ರೈಲ್ವೇ ಬಜೆಟ್ 2017: ಏನುಂಟು.. ಏನಿಲ್ಲ..
ಈ ಬಾರಿ ಕೇಂದ್ರ ಬಜೆಟ್ ಜತೆ ರೈಲ್ವೆ ಬಜೆಟನ್ನು ಒಟ್ಟಾಗಿ ಮಂಡಿಸಲಾಯಿತು. ಅರುಣ್ ಜೇಟ್ಲಿ ಮಂಡಿಸಿದ ಬಜೆಟಿನಲ್ಲಿ ಹೇಳಿಕೊಳ್ಳುವಂತ ಯಾವುದೆ ಹೊಸ ರೈಲ್ವೇ ಘೋಷಣೆಗಲೂ ಕಾಣಿಸಲಿಲ್ಲ.
ನವದೆಹಲಿ, ಫೆಬ್ರವರಿ 1: ಈ ಬಾರಿ ರೈಲ್ವೇ ಬಜೆಟ್ ಮತ್ತು ಕೇಂದ್ರ ಬಜೆಟನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಒಟ್ಟಾಗಿ ಮಂಡಿಸಿದ್ದಾರೆ. ಬಜೆಟಿನಲ್ಲಿ ರೈಲ್ವೇಗಾಗಿ ಒಂದಷ್ಟು ಘೋಷಣೆಗಳನ್ನು ಅರುಣ್ ಜೇಟ್ಲಿ ಹೊರಡಿಸಿದ್ದಾರೆ. ಆದರೆ ಹೇಳಿಕೊಳ್ಳುವಂತ ಯಾವ ಘೋಷಣೆಗಳನ್ನೂ ಬಜೆಟಿನಲ್ಲಿ ಕಾಣಿಸಿಕೊಂಡಿಲ್ಲ.

2017ರ ರೈಲ್ವೇ ಬಜೆಟಿನ ಪ್ರಮುಖ ಅಂಶಗಳು ಹೀಗಿವೆ, [ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]
*ತೀರ್ಥಯಾತ್ರೆ ಮತ್ತು ಪ್ರವಾಸಗಳಿಗಾಗಿ ವಿಶೇಷ ರೈಲಿನ ವ್ಯವಸ್ಥೆ.
*IRCTC ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡುವಾಗ ವಿಧಿಸಲಾಗುತ್ತಿದ್ದ ಸೇವಾ ತೆರಿಗೆ ರದ್ದು[ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ]
*ರೈಲ್ವೇಗೆ ಸಂಬಂಧಿಸಿದ ಸರಕಾರಿ ಪ್ರಾಯೋಜಿತ ಕಂಪೆನಿಗಳಾದ IRCON ಮತ್ತು IRCTC ಷೇರು ಮಾರುಕಟ್ಟೆಗೆ ಪ್ರವೇಶ.
*ರೈಲ್ವೇ ಬಜೆಟ್ ಗಾತ್ರದಲ್ಲಿ ಶೇಕಡಾ 22 ಹೆಚ್ಚಳವಾಗಿದ್ದು 1.31 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಕೇಂದ್ರ ಸರಕಾರ 55,000 ಕೋಟಿ ನೀಡಲಿದೆ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]
*2019ರ ಒಳಗೆ ದೇಶದಲ್ಲಿರುವ ಎಲ್ಲಾ ರೈಲುಗಳಲ್ಲಿಯೂ ಬಯೋ ಟಾಯ್ಲೆಟ್ ಅಳವಡಿಕೆ
*ಖಾಸಗಿ ಪಾಲುದಾರಿಕೆಯೊಂದಿಗೆ ನಿರ್ಧಿಷ್ಟ ಸ್ಥಳಗಳ ನಡುವೆ ಸರಕು ಸಾಗಣೆಗೆ ವ್ಯವಸ್ಥೆ
*ದೇಶದಲ್ಲಿ ಹೊಸ ಮೆಟ್ರೋ ರೈಲು ನೀತಿ ಜಾರಿ. ಈ ಮೂಲಕ ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಠಿ.
*2017-18ರಲ್ಲಿ 3,500 ಕಿಲೋಮೀಟರ್ಗಳ ರೈಲ್ವೆ ಹಳಿ ನಿರ್ಮಾಣ.
*ಕನಿಷ್ಟ 25 ರೈಲ್ವೇ ನಿಲ್ದಾಣಗಳ ಪುನರ್ ನಿರ್ಮಾಣ.
*500 ರೈಲ್ವೇ ನಿಲ್ದಾಣಗಳಲ್ಲಿ ಹಿರಿಯರು ಮತ್ತು ವಿಶೇಷ ಚೇತನರಿಗೆ ಅನುಕೂಲವಾಗಲು ಎಸ್ಕಲೇಟರ್ ಮತ್ತು ಲಿಫ್ಟ್ ಗಳ ಅಳವಡಿಕೆ.
*7,000 ರೈಲ್ವೇ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಕೆ.
*ಎಸ್.ಎಂ.ಎಸ್ ಕಳುಹಿಸಿದರೆ ಬೋಗಿಗಳನ್ನು ಕ್ಲಿನ್ ಮಾಡುವ 'ಕ್ಲೀನ್ ಮೈ ಕೋಚ್' ಯೋಜನೆಗೆ ಚಾಲನೆ.
*'ಕೋಚ್ ಮಿತ್ರ' ಎಂಬ ಏಕಗವಾಕ್ಷಿ ವ್ಯವಸ್ಥೆ ಮೂಲಕ ಬೋಗಿಗಳಿಗೆ ಸಂಬಂಧಿಸಿದ ಬೇಡಿಕೆ ಮತ್ತು ದೂರುಗಳನ್ನು ಸಲ್ಲಿಸಲು ಅವಕಾಶ.[ಬಜೆಟ್ 2017ರ ಪ್ರಮುಖ ಘೋಷಣೆಗಳು]
*ಮುಂದಿನ 5 ವರ್ಷಗಳಲ್ಲಿ ರೈಲ್ವೇ ಸುರಕ್ಷಾ ನಿಧಿ 1 ಲಕ್ಷ ಕೋಟಿಗೆ ಏರಿಕೆ[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]












Click it and Unblock the Notifications