Imd Weather Forecast: ಚಂಡಮಾರುತ ಪ್ರಸರಣ ಪ್ರಭಾವ: ಈ ಭಾಗಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಐಎಂಡಿ ರಿಪೋರ್ಟ್
Imd Weather Forecast: ಚಂಡಮಾರುತ ಪ್ರಸರಣ ಹಾಗೂ ವಾಯುಭಾರ ಕುಸಿತದಿಂದ ಭಾರತದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನು ದೆಹಲಿ - ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಮಾನ್ಸೂನ್ ಪ್ರವೇಶವಾಗಿದೆ. ಇದರಿಂದ ಭಾರತದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಇದರೊಂದಿಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲೂ ಮಳೆ ಆರ್ಭಟ ಮುಂದುವರಿದಿದೆ. ದೆಹಲಿಗೆ ಮಾನ್ಸೂನ್ ಪ್ರವೇಶವಾಗಿದ್ದು, ಭಾರೀ ಮಳೆ ಮುಂದುವರಿದಿದೆ. ವಾಯುವ್ಯ ಭಾರತದ ವಿವಿಧ ಪ್ರದೇಶಗಳಿಗೆ ಮಾನ್ಸೂನ್ ಪ್ರವೇಶವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರ, ಗೋವಾ, ಕೊಂಕಣ, ಗುಜರಾತ್ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ. ನೈಋತ್ಯ ಮಾನ್ಸೂನ್ ಪ್ರವೇಶದಿಂದ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದೆ. ಮುಂದುವರಿದು ದೆಹಲಿ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್, ಗುಜರಾತ್ ಭಾಗದಲ್ಲೂ ಮಳೆ ಪ್ರಾರಂಭವಾಗಿದೆ. ಇದರೊಂದಿಗೆ ರಾಜಸ್ಥಾನದ ಕೆಲವು ಭಾಗಗಳಲ್ಲೂ ಮಳೆ ಆರ್ಭಟ ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.

ದಕ್ಷಿಣ ಭಾರತದ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಜುಲೈ 8ರ ವರೆಗೆ ಭಾರೀ ಮಳೆ ಇರಲಿದೆ. ಐಎಂಡಿ ಪ್ರಕಾರ, ಮುಂದಿನ ಎರಡು ಮೂರು ದಿನಗಳಲ್ಲಿ ಗುಜರಾತ್, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ಉಳಿದ ಭಾಗಗಳಿಗೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ. ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ತೀವ್ರ ಶಾಖದ ಅಲೆ ಇತ್ತು. ಪೂರ್ವ ಮಾನ್ಸೂನ್ ಗುಡುಗು ಸಹಿತ ಮಳೆಯ ನಂತರ ಮಾನ್ಸೂನ್ ಆಗಮನವು ದೆಹಲಿಗೆ ಗಮನಾರ್ಹ ಹವಾಮಾನ ಬದಲಾವಣೆಯನ್ನು ತಂದಿದೆ.
ಐಎಂಡಿ ಪ್ರಕಾರ 2021ರಿಂದ ನೈಋತ್ಯ ಮಾನ್ಸೂನ್ ಜುಲೈನಲ್ಲಿ ದೆಹಲಿಯನ್ನು ತಲುಪಿದ್ದು ಇದೇ ಮೊದಲು. 2021ರಲ್ಲಿ ಮಾನ್ಸೂನ್ ಜುಲೈ 13ಕ್ಕೆ ಬಂದಿತ್ತು. ದೆಹಲಿ-ಎನ್‌ಸಿಆರ್ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ರಾಜಧಾನಿಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಭಾರತದಾದ್ಯಂತ ಮಾನ್ಸೂನ್ ಮಳೆ
ಇನ್ನು ಉತ್ತರ ಭಾರತಕ್ಕೆ ಮಾನ್ಸೂನ್ ಪ್ರವೇಶವಾಗಿದ್ದು, ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನೈಋತ್ಯ ಮಾನ್ಸೂನ್ ಉತ್ತರ ಭಾರತದಾದ್ಯಂತ ವಿಸ್ತರಿಸಿದೆ. ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಉಳಿದ ಭಾಗಗಳಲ್ಲಿಯೂ ಮಳೆ ಬರುತ್ತಿದೆ. ಹರಿಯಾಣ ಮತ್ತು ಪಂಜಾಬ್ ಹಾಗೂ ರಾಜಸ್ಥಾನದ ವಿವಿಧ ಭಾಗಗಳಲ್ಲಿ ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ತಿಳಿಸಿದೆ.
ಹಿರಿಯ IMD ವಿಜ್ಞಾನಿ ಡಾ. ನರೇಶ್ ಯಾದವ್ ಅವರು ಹವಾಮಾನ ವ್ಯವಸ್ಥೆಯು ಉತ್ತರದ ಕಡೆಗೆ ಚಲಿಸುವುದನ್ನು ಮುಂದುವರಿಸುತ್ತದೆ ಮತ್ತು ಹಲವಾರು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತದೆ ಎಂದು ಹೇಳಿದರು. ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ಕೊಂಕಣ ಪ್ರದೇಶ, ಗೋವಾ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಪ್ರದೇಶಗಳಿಗೆ IMD ರೆಡ್ ಅಲರ್ಟ್ ನೀಡಿದೆ. ಒಡಿಶಾ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿಯೂ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
Imd Weather Forecast: ದಕ್ಷಿಣ ಭಾರತದಲ್ಲೂ ಭಾರೀ ಮಳೆ
ಇನ್ನು ದಕ್ಷಿಣ ಭಾರತದ ವಿವಿಧ ಭಾಗಗಳಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಕರ್ನಾಟಕವು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ. ದಕ್ಷಿಣ ಮತ್ತು ಈಶಾನ್ಯ ಭಾರತದ ಮೇಲೆ ಸಕ್ರಿಯ ಮಾನ್ಸೂನ್ ಪರಿಣಾಮ ಬೀರುತ್ತಲೇ ಇದೆ. ಕರ್ನಾಟಕದಲ್ಲಿಯೂ ಮುಂದಿನ ಮೂರು ದಿನಗಳ ಅವಧಿಗೆ ಮಳೆ ಇರಲಿದೆ. ಮಂಗಳೂರಿನಲ್ಲಿಯೂ ಭಾರೀ ಮಳೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.












Click it and Unblock the Notifications