ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಗ್ರಹಣದಿಂದ ಇನ್ನಷ್ಟು ತೀವ್ರಗೊಳ್ಳಲಿದೆ ಯಾಸ್ ಚಂಡಮಾರುತ; ಭಾರೀ ಮಳೆ ಎಚ್ಚರಿಕೆ ಕೊಟ್ಟ ಐಎಂಡಿ

|
Google Oneindia Kannada News

ನವದೆಹಲಿ, ಮೇ 26: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ಯಾಸ್ ಚಂಡಮಾರುತದ ಪ್ರಭಾವ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಲ್ಲಿ ತೀವ್ರ ಸ್ವರೂಪ ಪಡೆಯಲಿರುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಇಂದು ಚಂದ್ರಗ್ರಹಣ ಕೂಡ ಘಟಿಸಲಿದ್ದು, ಚಂಡಮಾರುತದ ಪ್ರಭಾವವನ್ನು ಇದು ಇನ್ನಷ್ಟು ಹೆಚ್ಚಿಸಲಿದೆ. ಗರಿಷ್ಠ ಹಾನಿಗೂ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಹಾಗೂ ದಕ್ಷಿಣ 24 ಪರಗಣ ಕರಾವಳಿ ಜಿಲ್ಲೆಗಳಲ್ಲಿ ಹಾನಿ ಗರಿಷ್ಠವಾಗಿರುತ್ತದೆ ಎಂದು ಐಎಂಡಿ ಕೋಲ್ಕತ್ತಾ ಉಪನಿರ್ದೇಶಕ ಸಂಜೀವ್ ಬ್ಯಾನರ್ಜಿ ಎಚ್ಚರಿಕೆ ರವಾನಿಸಿದ್ದಾರೆ. ಮುಂದೆ ಓದಿ...

ತೀವ್ರಗೊಳ್ಳಲಿದೆ ಯಾಸ್ ಚಂಡಮಾರುತ; ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆ ಸೂಚನೆತೀವ್ರಗೊಳ್ಳಲಿದೆ ಯಾಸ್ ಚಂಡಮಾರುತ; ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆ ಸೂಚನೆ

 ಅಲೆಗಳ ಅಬ್ಬರ ಇನ್ನಷ್ಟು ಹೆಚ್ಚುತ್ತದೆ

ಅಲೆಗಳ ಅಬ್ಬರ ಇನ್ನಷ್ಟು ಹೆಚ್ಚುತ್ತದೆ

ಚಂದ್ರಗ್ರಹಣದ ಸಂದರ್ಭ ಅಲೆಗಳ ಅಬ್ಬರ ಹೆಚ್ಚಾಗಿರುತ್ತದೆ. ಚಂದ್ರ ಭೂಮಿಗೆ ಸಮೀಪಿಸುವುದರಿಂದ ಅಲೆಗಳ ಆರ್ಭಟ ಹೆಚ್ಚಿರುತ್ತವೆ. ಸಮುದ್ರದಲ್ಲಿ ನೀರಿನ ಮಟ್ಟ ಒಂದು ಮೀಟರ್ ಹೆಚ್ಚಲಿದೆ. ಈಗ ಯಾಸ್ ಚಂಡಮಾರುತವೂ ಇರುವುದರಿಂದ ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಹೀಗಾಗಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಬಹುದು ಎಂದು ತಿಳಿಸಿದೆ.

 ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್

ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್

ಪೂರ್ವ ಮಿಡ್ನಾಪುರದಲ್ಲಿ ಚಂಡಮಾರುತದಿಂದಾಗಿ ಅಲೆಗಳು ಭೀಕರ ರೂಪ ತಳೆಯಲಿವೆ. ಈ ಅಲೆಗಳ ಎತ್ತರ 2-4 ಮೀಟರ್ ಇದ್ದರೆ, ದಕ್ಷಿಣ ಪರಗಣದಲ್ಲಿ 1-2 ಮೀಟರ್ ಇರುತ್ತದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಹೀಗಾಗಿ ಪೂರ್ವ ಮಿಡ್ನಾಪುರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಪರಗಣ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಯಾಸ್ ಚಂಡಮಾರುತ : 90 ರೈಲುಗಳ ಸಂಚಾರ ಸ್ಥಗಿತಯಾಸ್ ಚಂಡಮಾರುತ : 90 ರೈಲುಗಳ ಸಂಚಾರ ಸ್ಥಗಿತ

 ತಗ್ಗು ಪ್ರದೇಶದ ಜನರ ಸ್ಥಳಾಂತರ

ತಗ್ಗು ಪ್ರದೇಶದ ಜನರ ಸ್ಥಳಾಂತರ

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಯಾಸ್ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಗಳನ್ನು ದಾಟುವ ಮುನ್ನ ತೀವ್ರವಾಗುವ ಸಾಧ್ಯತೆಯಿದೆ ಎಂದು ಭಾರತದ ಪ್ರಕಾರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಮೇ 26 ರ ಮುಂಜಾನೆ ಬಾಲಾಸೋರ್‌ನಲ್ಲಿ ಚಂಡಮಾರುತ ಪ್ರಭಾವ ತೀವ್ರಗೊಳ್ಳಲಿದೆ ಎಂದು ಇಲಾಖೆ ಹೇಳಿದ್ದು, ಯಾಸ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

 ಚಂಡಮಾರುತ ಪ್ರಭಾವ ಎದುರಿಸಲು ಸಕಲ ಸಿದ್ಧತೆ

ಚಂಡಮಾರುತ ಪ್ರಭಾವ ಎದುರಿಸಲು ಸಕಲ ಸಿದ್ಧತೆ

ಯಾಸ್ ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ವಾಯುಪಡೆ (ಐಎಎಫ್) 11 ಸಾರಿಗೆ ವಿಮಾನಗಳು ಮತ್ತು 25 ಹೆಲಿಕಾಪ್ಟರ್‌ಗಳು ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಚಂಡಮಾರುತವನ್ನು ನಿಭಾಯಿಸಲು ಐಎಎಫ್ 21 ಟನ್ ಪರಿಹಾರ ಸಾಮಗ್ರಿಗಳು ಮತ್ತು 334 ರಾಷ್ಟ್ರೀಯ ವಿಪತ್ತು ಪಡೆ (ಎನ್‌ಡಿಆರ್‌ಎಫ್) ಯೊಂದಿಗೆ ಸರ್ಕಾರವು ಸರಣಿ ಕ್ರಮಗಳನ್ನು ಕೈಗೊಂಡಿದೆ.

English summary
Indian meteorological department officials warns that full moon could increase damage of yaas cyclone in odisha and west bengal,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X