Cyclone Alert: ಮೇ 24ರಂದು ವಾಯುಭಾರ ಕುಸಿತ: ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಅಬ್ಬರ, ಎಚ್ಚರಿಕೆ
ಭುವನೇಶ್ವರ, ಮೇ 22: ಬಂಗಾಳಕೊಲ್ಲಿಯಲ್ಲಿ ಸದ್ಯ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶವು ನಾಳೆ, ಇಲ್ಲವೇ ನಾಡಿದ್ದು ಸ್ಪಷ್ಟ ವಾಯುಭಾರ ಕುಸಿತವಾಗಿ ಬದಲಾಗಲಿದೆ. ಇದರ ಪ್ರಭಾವದಿಂದ ಭಾರೀ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಆರ್ಭಟಿಸಲಿದೆ.
ಬಂಗಾಳಕೊಲ್ಲಿಯಲ್ಲಿನ ಈ ವೈಪರಿತ್ಯವು ಮೇ 24 ರ ಬೆಳಗ್ಗೆ ವಾಯುಭಾರ ಕುಸಿತವಾಗಿ ಮಾರ್ಪಡಲಿದೆ ಬದಲಾಗುವ ಸಾಧ್ಯತೆ ಇದೆ. ಇದು ಉತ್ತರ ತಮಿಳುನಾಡು ಹಾಗೂ ದಕ್ಷಿಣ ಆಂಧ್ರ ಪ್ರದೇಶ ಕರಾವಳಿಯತ್ತ ಹಾಗೂ ಈಶಾನ್ಯ ದಿಕ್ಕಿನತ್ತ ಚಲಿಸಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಹಲವು ದಿನಗಳಿಂದ ಚಂಡಮಾರುತದ ಪರಿಚಲನೆ ಇದೆ. ಇಲ್ಲಿ ತೀವ್ರ ರೂಪದ ಕಡಿಮೆ ಒತ್ತಡದ ಪ್ರದೇಶ ಮಾರ್ಪಾಡಾಗಿದೆ. ಇದೇ ನಾಡಿದ್ದು ಉಲ್ಬಣಗೊಳ್ಳಲಿದೆ. ಉತ್ತರ ತಮಿಳುನಾಡು-ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ಈ ಹವಾಮಾನ ವೈಪರಿತ್ಯದಿಂದ ಒಂದಷ್ಟು ಮಳೆ ಅವಾಂತರಗಳು ಸಂಭವಿಸಲಿದೆ ಎಂದು ಐಎಂಡಿ ಬುಧವಾರ ತಿಳಿಸಿದೆ.
ಒಡಿಶಾದಲ್ಲಿ ಭಾರೀ ಮಳೆ ಆರ್ಭಟ
ಉತ್ತರ ಒಡಿಶಾದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮೇ 24 ರಿಂದ ಸಾಧಾರಣದಿಂದ ಮಳೆ ಆಗಲಿದೆ. ಬಾಲಸೋರ್ ಜಿಲ್ಲೆ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗುವ ನಿರೀಕ್ಷೆ ಇದೆ ಎಂದು ಹಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ಸಮುದ್ರದ ಮೇಲ್ಮೈನ ಸ್ಥಿತಿಯು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಮತ್ತೊಂದೆ ಜೋರಾದ ಗಾಳಿ ಬೀಸುವ ಲಕ್ಷಣಗಳು ಇರುವ ಕಾರಣ ಈ ವೇಳೆ ಮೀನುಗಾರರು ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿಯದಂತೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಗುರುವಾರದೊಳಗೆ ಸಮುದ್ರದಲ್ಲಿರುವ ಮೀನುಗಾರರು ದಡಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ.

ಗಾಳಿಯ ಗರಿಷ್ಠ ರಭಸ ಗಂಟೆಗೆ 60 ಕಿಮೀ
ಬಂಗಾಳಕೊಲ್ಲಿಯಲ್ಲಿ ದಕ್ಷಿಣ ಭಾಗದಲ್ಲಿ ಬುಧವಾರ ಪ್ರತಿ ಗಂಟೆಗೆ ಗಾಳಿ ವೇಗ ಗರಿಷ್ಠ 45 ಕಿಮೀ ಇದೆ. ಇದು ಮುಂದಿನ ಒಂದು ದಿನದಲ್ಲಿ 55 ಕಿಮೀ ವೇಗದವರೆಗೂ ತಲುಪುವ ಸಾಧ್ಯತೆ ಇದೆ. ಕೆಲವೊಂದು ಪ್ರದೇಶಗಳಲ್ಲಿ ಮಧ್ಯ ಮತ್ತು ಪಕ್ಕದ ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಕರಾವಳಿ ಕಡೆಗಳಲ್ಲಿ ಪ್ರತಿ ಗಂಟೆಗೆ 60 ಕಿಲೋ ಮೀಟರ್ ವರೆಗೂ ಗಾಳಿಯು ವೇಗ ಪಡೆದುಕೊಳ್ಳಲಿದೆ.
ನಾಡಿದ್ದು (ಮೇ 24) ಸ್ಪಷ್ಟ ವಾಯುಭಾರ ಕುಸಿತವಾಗಿ ಇನ್ನಷ್ಟು ತೀವ್ರಗೊಳ್ಳುವುದರಿಂದ ಅಂದು ಪ್ರತಿ ಗಂಟೆಗೆ ಬೆಳಗ್ಗೆ ವೇಳೆ 50-60 ಕಿ.ಮೀ ವೇಗದಿಂದ 70 ಕಿ.ಮೀ ವರೆಗೆ ಗಾಳಿ ಬೀಸಲಿದೆ. ಗಾಳಿಯ ವೇಗವು ಉತ್ತರ ಬಂಗಾಳ ಕೊಲ್ಲಿಯ ಪಕ್ಕದ ಪ್ರದೇಶಗಳಿಗೆ ವಿಸ್ತರಿಸುತ್ತದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಒಡಿಶಾ ಸರ್ಕಾರ, ಜಿಲ್ಲಾಡಳಿತ ಹೈ ಅಲರ್ಟ್
ಸದ್ಯ ಈ ಮೇಲಿನ ಎಲ್ಲ ಬೆಳವಣಿಗೆ ನೋಡಿಕೊಂಡಿರುವ ಒಡಿಶಾದ ರಾಜ್ಯದ ಸರ್ಕಾರದ ಮುಖ್ಯಸ್ಥರು, ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡಿವೆ. ಎಂತದ್ದೆ ಸಂದರ್ಭ ಎದುರಾದರೂ ಎದುರಿಸಲು ಸಿದ್ಧವಿರುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳು ಹವಾಮಾನ ಮುನ್ಸೂಚನೆ ಬಗ್ಗೆ ಮೇಲಿಂದ ಮೇಲೆ ಸಭೆ ಮಾಡಿವೆ ಎಂದು ತಿಳಿದು ಬಂದಿದೆ. ಒಟ್ಟಾರೆ ಒಡಿಶಾ ಹಾಗೂ ಬಂಗಾಳಕೊಲ್ಲಿ ಕರಾವಳಿಯ ಒಂದೆರಡು ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ.












Click it and Unblock the Notifications