IMD Cyclone Alert: ಹವಾಮಾನ ವೈಪರೀತ್ಯ: ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಮುನ್ನೆಚ್ಚರಿಕೆ

IMD Weather Forecast: ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಮುಂಗಾರು ಮಳೆ ಎಲ್ಲೆಡೆ ವ್ಯಾಪ್ತಿಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಕಳೆದ ಮೂರು ಮೂರು ವಾರಗಳಲ್ಲಿ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಅಬ್ಬರಿಸುತ್ತಿದೆ. ಇಷ್ಟು ಮಾತ್ರವಲ್ಲದೇ ನಾನಾ ಕಡೆಗಳಲ್ಲಿ ಹವಾಮಾನ ವೈಪರೀತ್ಯಗಳು ಸಂಭವಿಸಿವೆ. ಗಂಟೆಗೆ 65 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಸೋಮವಾರ ಭಾರತೀಯ ಹವಾಮಾನ ಇಲಾಖೆ (IMD) ಬಿಗ್ ಅಪ್ಡೇಟ್ ನೀಡಿದೆ.

ಕೇರಳ, ಕರ್ನಾಟಕ ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ, ಪೂರ್ವ-ಮಧ್ಯ ಅರಬ್ಬಿ ಸಮುದ್ರ ಮತ್ತು ಪಕ್ಕದ ಹಲವು ಭಾಗಗಳು, ಪಶ್ಚಿಮ-ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳಲ್ಲಿ ಹವಾಮಾನ ತೀವ್ರ ಸ್ವರೂಪದಲ್ಲಿ ಬದಲಾಗಿದೆ. ಅಷ್ಟೇ ಅಲ್ಲದೇ ಅರಬ್ಬಿ ಸಮುದ್ರದ ಆಗ್ನೇಯ ಮತ್ತು ಉತ್ತರ ಭಾಗಗಳು, ಅರಬ್ಬಿ ಸಮುದ್ರ ನೈಋತ್ಯ ಪ್ರದೇಶ ಸೇರಿ ಮೇಲಿನ ಈ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಾಗಲಿದೆ.

IMD Issues Cyclone Alert Heavy Rain and Strong Winds Expected Across Multiple States

ಲಕ್ಷದ್ವೀಪ, ಮಾಲ್ಡೀವ್ಸ್, ಕೊಮೊರಿನ್ ಪ್ರದೇಶಗಳು, ದಕ್ಷಿಣ ಬಂಗಾಳ ಕೊಲ್ಲಿಯ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಅನೇಕ ಭಾಗಗಳು, ಮನ್ನಾರ್ ಕೊಲ್ಲಿಯ ಮೇಲೆ, ಶ್ರೀಲಂಕಾ ಕರಾವಳಿ ಭಾಗ, ಅಂಡಮಾನ್ ಸಮುದ್ರದ ಮೇಲೆ ಗಂಟೆಗೆ 45-55 ಕಿಮೀ ವೇಗದಲ್ಲಿ ಗಂಟೆಗೆ 65 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಗಳು ಇವೆ. ಅಂದರೆ ಸಮುದ್ರ ಮೇಲ್ಮೈನಲ್ಲಿ ಸ್ಟ್ರಫ್, ವಾಯುಭಾರ ಕುಸಿತ ಉಂಟಾಗಿದೆ. ಈಗಾಗಲೇ ಜಾರ್ಖಂಡ್‌ನಿಂದ ಮಧ್ಯ ಪ್ರದೇಶ, ಪಶ್ಚಿಮ ಬಂಗಾಳವರೆಗೆ ಒಂದು ಚಂಡಮಾರುತ ಪ್ರಸರಣ ಗಾಳಿ ಬೀಸಿದೆ. ಇದರಿಂದ ಆ ಭಾಗ ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರಿದೆ. ಇನ್ನೂ 05 ದಿನಗಳ ಕಾಲ ಅದೇ ರೀತಿ ಮಳೆ ಆಗಲಿದೆ ಎಂದು ತಿಳಿಸಲಾಗಿದೆ.

05 ದಿನ ಭಾರೀ ಮಳೆ ಮುನ್ನೆಚ್ಚರಿಕೆ

ಚಂಡಮಾರುತದ ಪ್ರಸರಣದ ತೀವ್ರತೆಯಿಂದಾಗಿ ಮುಂಗಾರು ಮಳೆ ಈ ವಾರ ಕೇವಲ ಉತ್ತರ ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದ ರಾಜ್ಯಗಳಿಗೂ ವಿಸ್ತರಣೆ ಆಗುತ್ತಿದೆ. ಹೀಗಾಗಿ ಮುಂದಿನ 02 ದಿನ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಬಲೂಚಿಸ್ತಾನ್ ಮತ್ತು ಲಡಾಕ್ ಪ್ರದೇಶಗಳು, ಆಂಧ್ರ ಪ್ರದೇಶ, ದೆಹಲಿ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಪಂಜಾಬ್, ತಮಿಳುನಾಡು, ಹರಿಯಾಣ ರಾಜ್ಯಗಳಲ್ಲಿ ಅಲ್ಲಲ್ಲಿ ಭಾರೀ ಮಳೆ, ಕೆಲವೆಡೆ ಅತ್ಯಧಿಕ ಭಾರೀ ಮಳೆ ಆಗಲಿದೆ. ಈ ರಾಜ್ಯಗಳಿಗೆ ಜುಲೈ 21 & 22ರಂದು 'ಆರೆಂಜ್ ಅಲರ್ಟ್' ಮತ್ತು 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ನಿರಂತರ ಮಳೆಗೆ ಮಧ್ಯ ಪ್ರದೇಶ, ಗುಜರಾತ್, ದೆಹಲಿ, ಆಂಧ್ರ ಪ್ರದೇಶ, ಮಣಿಪುರ, ಅಸ್ಸಾಂ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಿದೆ. ಮಳೆ ಸಾಕಪ್ಪ ಎಂದು ದೇವರಲ್ಲಿ ಪ್ರಾರ್ಥಿಸುವ ಸ್ಥಿತಿ ಜನರದ್ದಾಗಿದೆ. ಸದ್ಯಕ್ಕೆ ಮುಂಗಾರು ಮಳೆ ದುರ್ಬಲಗೊಳ್ಳುವ ಯಾವ ಲಕ್ಷಣಗಳು ಇಲ್ಲ. ಈ ವಾರದ ಪೂರ್ತಿ ಮುನ್ಸೂಚನೆ ಪ್ರಕಾರ, ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+