India Rain Alert: ಸೈಕ್ಲೋನ್ ಸರ್ಕುಲೇಷನ್ ಎಫೆಕ್ಟ್: ಸೆಪ್ಟೆಂಬರ್ 16ರವರೆಗೆ ಭಾರೀ ಮಳೆ ಎಚ್ಚರಿಕೆ
IMD Weather Forecast: ದೇಶಾದ್ಯಂತ ಮತ್ತೆ ಮುಂಗಾರು ಮಳೆ ಅಬ್ಬರ ಮುಂದುವರಿಸಿದೆ. ಮೊದಲು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಕೊಂಚ ಬ್ರೇಕ್ ನೀಡಿದ್ದ ಮಳೆಯು ಇದೀಗ ದೇಶವ್ಯಾಪಿ ಸಕ್ರಿಯವಾಗುತ್ತಿದೆ. ಕರ್ನಾಟಕದ ಉತ್ತರ ಭಾಗ, ಮಹಾರಾಷ್ಟ್ರ, ಗೋವಾ, ಕೊಂಕಣ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ. ಹವಾಮಾನ ವೈಪರೀತ್ಯಗಳ ಪ್ರಭಾವ, ಹೆಚ್ಚಾದ ತೀವ್ರಯಿಂದ ಮಳೆ ಆರ್ಭಟವು ಹೆಚ್ಚಾಗುತ್ತಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ಅರಬ್ಬಿ ಸಮುದ್ರದ ವಾಯವ್ಯ ಭಾಗದಲ್ಲಿದ್ದ ಕಡಿಮೆ ಒತ್ತಡದ ಪ್ರದೇಶವು ದುರ್ಬಲವಾಗಿದೆ. ಆದರೆ ಚಂಡಮಾರುತ ಪ್ರಸರಣವು ಅದೇ ಭಾಗದಲ್ಲಿ ಸೃಷ್ಟಿಯಾಗಿದ್ದು, ಇದು 5.8 ಕಿ.ಮೀ ಎತ್ತರದವರೆಗೆ ವಿಸ್ತರಿಸಿದೆ. ಮುಂಗಾರು ಸ್ಟ್ರಫ್ ಪಶ್ಚಿಮ ಬಂಗಾಳ ಬರೇಲಿ, ಪಾಟ್ನಾ ಮತ್ತು ಈಶಾನ್ಯ ಬಂಗಾಳ ಕೊಲ್ಲಿವರೆಗೆ ವಿಸ್ತರಣೆ ಆಗಿದೆ.

ದಕ್ಷಿಣ ಒಡಿಶಾ ಮತ್ತು ಉತ್ತರ ಆಂಧ್ರ ಕರಾವಳಿಯ ಭಾಗದಲ್ಲಿದ್ದ ಚಂಡಮಾರುತ ಪ್ರಸರಣವು ಇದು ವಾಯುವ್ಯ ಬಂಗಾಳಕೊಲ್ಲಿವರೆಗೆ ಪಸರಿಸಿದೆ. ಇದು ಮುಂದಿನ 48 ಗಂಟೆಗಳಲ್ಲಿ ಆಂಧ್ರ ಪ್ರದೇಶ ಕರಾವಳಿ, ಒಡಿಶಾ ಕರಾವಳಿಯಲ್ಲಿ ಹೊಸದಾಗಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಗೆ ಕಾರಣವಾಗಲಿದೆ ಎಂದು ಊಹಿಸಲಾಗಿದೆ. ಹಿಮಾಚಲ ಪ್ರದೇಶದ ಸುತ್ತಮುತ್ತಲಿನ ಭಾಗದಲ್ಲೂ ಕಡಿಮೆ ಒತ್ತಡದ ಪ್ರದೇಶ ಇದೆ. ಇದೆಲ್ಲವುಗಳ ತೀವ್ರತೆ, ಆಗಾಗ ಉಂಟಾಗುವ ಬದಲಾವಣೆ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ಮುಂದಿನ ಸೆಪ್ಟಂಬರ್ 16ರವರೆಗೆ ಅತ್ಯಧಿಕ ಮಳೆ ಆಗಲಿದೆ.
ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ರಣಮಳೆ
ಸೆಪ್ಟೆಂಬರ್ 16ರವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ 13 ಮತ್ತು 14ರಂದು ಅರುಣಾಚಲ ಪ್ರದೇಶದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ನಿರೀಕ್ಷೆ ಇದೆ. ಇನ್ನೂ ಒಡಿಶಾ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ-ಸಿಕ್ಕಿಂ, ವಿದರ್ಭ, ಮಧ್ಯಪ್ರದೇಶ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣ ಮಳೆ ಆಗಲಿದೆ.
ಮಹಾರಾಷ್ಟ್ರ, ಕೊಂಕಣ-ಗೋವಾ ಹಾಗೂ ಗುಜರಾತ್ ಭಾಗಗಳಲ್ಲಿ ಸೆಪ್ಟೆಂಬರ್ 12ರಿಂದ 17ರವರೆಗೆ ಸಾಧಾರಣದಿಂದ ಭಾರೀ ಮಳೆಯ ಲಕ್ಷಣಗಳು ಇವೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸೆಪ್ಟೆಂಬರ್ 13ರಿಂದ ಮಳೆ ಮತ್ತಷ್ಟು ಬಿರುಸುಗೊಳ್ಳಲಿದೆ. ಇನ್ನೂ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ಉತ್ತರ ಭಾಗ, ತೆಲಂಗಾಣದಲ್ಲಿ ಸೆಪ್ಟೆಂಬರ್ 15ರವರೆಗೆ ಕೆಲವೆಡೆ ಹಗುರ ಮಳೆ, ಹಲವೆಡೆ ಭಾರೀ ಮಳೆ ಆಗಲಿದೆ, ಗಾಳಿಯ ವೇಗ ಪ್ರತಿ ಗಂಟೆಗೆ 40 ಕಿ.ಮೀ. ವೇಗದಲ್ಲಿರಲಿದೆ ಎಂದು ಶುಕ್ರವಾರ ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications