ಐಐಟಿ ಮದ್ರಾಸ್, ಐಐಎಂ ಬೆಂಗಳೂರು ದೇಶಕ್ಕೆ ಉತ್ತಮ ಶಿಕ್ಷಣ ಸಂಸ್ಥೆಗಳು
ನವದೆಹಲಿ, ಏಪ್ರಿಲ್ 8: ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮದ್ರಾಸ್ ಟಾಪ್ ಒನ್ ಸ್ಥಾನದಲ್ಲಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಸ್ಥಾನದಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ ಸಿ) ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಐಐಟಿ ಡೆಲ್ಲಿ ಮೂರನೇ ಸ್ಥಾನದಲ್ಲಿ ಇದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಎನ್ ಐಆರ್ ಎಫ್ ನಿಂದ ಈ ಶ್ರೇಯಾಂಕಕ್ಕಾಗಿ ನಿಯಮ ರೂಪಿಸಲಾಗಿದೆ. ಆ ನಿಯಮಗಳನ್ನು ಶಿಕ್ಷಣ ಸಚಿವಾಲಯವು ಮಾನ್ಯ ಮಾಡಿದೆ. ಈ ಮಾದರಿಯಲ್ಲಿ ಮೊದಲ ಬಾರಿಗೆ ಪಟ್ಟಿ ಬಿಡುಗಡೆ ಮಾಡಿದ್ದು ಮೂರು ವರ್ಷದ ಹಿಂದೆ. ಇನ್ನು ಈ ವರ್ಷ ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಉತ್ತಮ ಶಿಕ್ಷಕಾ ಸಂಸ್ಥೆಗಳ ಪಟ್ಟಿಯಲ್ಲಿ ಏಳು ಐಐಟಿಗಳು ಸ್ಥಾನ ಪಡೆದಿವೆ. ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಏಳನೇ ಸ್ಥಾನದಲ್ಲಿದೆ.

ವೈದ್ಯಕೀಯ ಸಂಸ್ಥೆಗಳ ಪೈಕಿ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮೊದಲ ಸ್ಥಾನದಲ್ಲಿದೆ. ಕಾನೂನು ಕಾಲೇಜುಗಳ ಪೈಕಿ ಬೆಂಗಳೂರಿನಲ್ಲಿ ಇರುವ ನ್ಯಾಷನಲ್ ಲಾ ಸ್ಕೂಲ್ ಮೊದಲ ಸ್ಥಾನದಲ್ಲಿದೆ. ಫಾರ್ಮಸಿ ಇನ್ ಸ್ಟಿಟ್ಯೂಟ್ ಗಳ ಪೈಕಿ ದೆಹಲಿಯ ಹೊರಗಿರುವ ಜಾಮಿಯಾ ಹಮ್ ದರ್ದ್ ಮೊದಲ ಸ್ಥಾನದಲ್ಲಿದ್ದರೆ, ಐಐಎಂ ಬೆಂಗಳೂರು ಮ್ಯಾನೇಜ್ ಮೆಂಟ್ ಇನ್ ಸ್ಟಿಟ್ಯೂಟ್ ನಲ್ಲಿ ಅಗ್ರ ಸ್ಥಾನದಲ್ಲಿದೆ.
ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?
ರಾಷ್ಟ್ರ ಮಟ್ಟದ ಕಾಲೇಜುಗಳ ಶ್ರೇಯಾಂಕದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಿರಾಂಡ ಹೌಸ್ ಅಗ್ರ ಸ್ಥಾನದಲ್ಲಿದ್ದರೆ, ಸೇಂಟ್ ಸ್ಟೀಫನ್ಸ್ ನಾಲ್ಕನೇ ಸ್ಥಾನದಲ್ಲಿದೆ.












Click it and Unblock the Notifications