ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ, ಸ್ಮೃತಿ ಇರಾನಿ ಟ್ವಿಟ್ವರ್ ವಾರ್!

|
Google Oneindia Kannada News

ಬೆಂಗಳೂರು, ಮೇ 30 : ಮದ್ರಾಸ್ ಐಐಟಿಯ ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್‌ ವಿದ್ಯಾರ್ಥಿ ಸಂಘಟನೆ ಮೇಲೆ ಈ ನಿರ್ಬಂಧ ಹೇರಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಮತ್ತು ಸಚಿವೆ ಸ್ಮೃತಿ ಇರಾನಿ ಅವರ ನಡುವೆ ಟ್ವಿಟ್ವರ್ ವಾರ್ ನಡೆಯುತ್ತಿದೆ.

ಅನಾಮಿಕ ವ್ಯಕ್ತಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆಯ ವಿರುದ್ಧ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವಾಲಯದ ಸೂಚನೆ ಮೇರೆಗೆ ಐಐಟಿ ಮದ್ರಾಸ್‌ ನಿರ್ಬಂಧದ ಕ್ರಮ ಕೈಗೊಂಡಿತ್ತು. ಈ ಕುರಿತು ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆದಿತ್ತು. [ಮೋದಿ ವಿರುದ್ಧ ದನಿ ಎತ್ತಿದ್ದಕ್ಕೆ ವಿದ್ಯಾರ್ಥಿಗಳಿಗೆ ನಿಷೇಧ?]

ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದು, 'ಮೋದಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ವಿದ್ಯಾರ್ಥಿ ಸಂಘಟನೆ ನಿಷೇಧಿಸಲಾಗಿದೆ. ವಾಕ್‌ ಸ್ವಾತಂತ್ರ್ಯ ನಮ್ಮ ಹಕ್ಕು. ಇದನ್ನು ಹತ್ತಿಕ್ಕುವ ವಿರುದ್ಧ ಹೋರಾಟಕ್ಕೆ, ಚರ್ಚೆಗೆ ಸಿದ್ಧ' ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್‌ ಮಾಡಿದ್ದು, 'ಮುಂದೆ ನೀವು ನಿಮ್ಮ ಬಗ್ಗೆಯೇ ಹೋರಾಟ ಮಾಡಬೇಕು. ಕಾಂಗ್ರೆಸ್‌ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಹಿಂದೆ ಅಡಗಿ ಕೂರಬೇಡಿ. ನಾನು ಅಮೇಥಿಗೆ ಶೀಘ್ರ ಬರುತ್ತಿದ್ದು, ಅಲ್ಲಿ ಸಿಗೋಣ' ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಹೇಗಿದೆ ಟ್ವಿಟ್ವರ್ ವಾರ್ ನೋಡಿ.....

ಇಬ್ಬರ ನಡುವೆ ಜಟಾಪಟಿ ಏಕೆ?

ಇಬ್ಬರ ನಡುವೆ ಜಟಾಪಟಿ ಏಕೆ?

ಮದ್ರಾಸ್ ಐಐಟಿಯ ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್‌ ವಿದ್ಯಾರ್ಥಿ ಸಂಘಟನೆ ಮೇಲೆ ಈ ನಿರ್ಬಂಧ ಹೇರಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಮತ್ತು ಸಚಿವೆ ಸ್ಮೃತಿ ಇರಾನಿ ಅವರ ನಡುವೆ ಟ್ವಿಟ್ವರ್ ವಾರ್ ನಡೆಯುತ್ತಿದೆ.

ರಾಹುಲ್ ಹೇಳುವುದೇನು?

ಮೋದಿ ಟೀಕಿಸಿದ್ದಕ್ಕೆ ವಿದ್ಯಾರ್ಥಿ ಸಂಘಟನೆ ಬ್ಯಾನ್ ಮುಂದೇನು?

ವಾಕ್‌ ಸ್ವಾತಂತ್ರ್ಯ ನಮ್ಮ ಹಕ್ಕು

'ವಾಕ್‌ ಸ್ವಾತಂತ್ರ್ಯ ನಮ್ಮ ಹಕ್ಕು. ಇದನ್ನು ಹತ್ತಿಕ್ಕುವ ವಿರುದ್ಧ ಚರ್ಚೆಗೆ ಸಿದ್ಧ'

ಸ್ಮೃತಿ ಇರಾನಿ ತಿರುಗೇಟು

'ಚರ್ಚೆಗೆ ನಾನು ಸಿದ್ಧ, ಸ್ಥಳ ದಿನಾಂಕ, ಸಮಯ ಹೇಳಿ, ಚರ್ಚೆ ಮಾಡೋಣ'

ಅಮೇಥಿಯಲ್ಲಿಯೇ ಭೇಟಿಯಾಗೋಣ

'ಅಮೇಥಿಯಲ್ಲಿಯೇ ಭೇಟಿಯಾಗೋಣ'

ಟ್ವಿಟ್ವರ್ ವಾರ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ

ಟ್ವಿಟರ್ ಫೈಟ್ ಬಗ್ಗೆ ಚರ್ಚೆ

ಸ್ಮೃತಿ ಇರಾನಿ ಅಮೇಥಿಗೆ ಹೋಗಲಿದ್ದಾರೆ

ಸ್ಮೃತಿ ಇರಾನಿ ಅಮೇಥಿಗೆ ಹೋಗಲಿದ್ದಾರೆ

ರಾಹುಲ್ ವಿರುದ್ಧ ಸ್ಪರ್ಧಿಸಿದ್ದ ಸ್ಮೃತಿ ಇರಾನಿ

ರಾಹುಲ್ ವಿರುದ್ಧ ಸ್ಪರ್ಧಿಸಿದ್ದ ಸ್ಮೃತಿ ಇರಾನಿ

ಅಂದಹಾಗೆ ಸ್ಮೃತಿ ಇರಾನಿ ಅವರು 2014ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಯುವರಾಜ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಬಿಜೆಪಿಯ ಸ್ಮೃತಿ ಇರಾನಿ, ಆಮ್ ಆದ್ಮಿ ಕುಮಾರ್ ವಿಶ್ವಾಸ್ ಕಣದಲ್ಲಿದ್ದರು.

ಗೆದ್ದ ರಾಹುಲ್ ಗಾಂಧಿ

ಗೆದ್ದ ರಾಹುಲ್ ಗಾಂಧಿ

2014ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಗೆಲುವು ಸಾಧಿಸಿದರು. [ಮಾಹಿತಿ : ಇಂಡಿಯಾ ವೋಟ್ಸ್]

ಸೋತರು ಸಚಿವೆಯಾದ ಇರಾನಿ

ಸೋತರು ಸಚಿವೆಯಾದ ಇರಾನಿ

ಅಮೇಥಿಯಲ್ಲಿ ಸೋತರು ಸ್ಮೃತಿ ಇರಾನಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾದರು. ಗುಜರಾತ್‌ನಿಂದ ರಾಜ್ಯಸಭೆಗೆ ಆರಿಸಿ ಬಂದರು.

English summary
Congress vice-president Rahul Gandhi and HRD minister Smriti Irani were locked in a war of words on Twitter on Friday over IIT-Madras’s ban on a student organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X