ಐಐಟಿ ವಿದ್ಯಾರ್ಥಿಯಿಂದ ಅಧ್ಯಾಪಕಿ ನಗ್ನಚಿತ್ರ ಅಪ್ ಲೋಡ್
ಖರಗಪುರ,
ಫೆ.18: ಇಲ್ಲಿನ ಐಐಟಿ ವಿದ್ಯಾರ್ಥಿಯೊಬ್ಬ ಅಧ್ಯಾಪಕಿಯ ನಗ್ನಚಿತ್ರಗಳನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾನೆ. ಇತ್ತೀಚೆಗೆ IIT ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರ ಚಿತ್ರಗಳನ್ನು ಇಂಟರ್ನೆಟ್ ಗೆ ಅಪ್ ಲೋಡ್ ಮಾಡುತ್ತಿದ್ದಾನೆ ಎಂಬ ಗಾಳಿಸುದ್ದಿ ಐಐಟಿ ಕ್ಯಾಂಪಸ್ಸಿನಲ್ಲಿ ಸುಳಿದಾಡಿ ಭಾರಿ ಆತಂಕ ಸೃಷ್ಟಿಸಿದ್ದರ ಬೆನ್ನಿಗೇ ಈಗ ಅಧ್ಯಾಪಕಿಯ ನಗ್ನಚಿತ್ರಗಳನ್ನೂ ಅಪ್ ಲೋಡ್ ಮಾಡಿದ್ದಾನೆ ಎಂಬುದು ಮತ್ತಷ್ಟು ಆತಂಕ ಸೃಷ್ಟಿಸಿದೆ. id="toptextpromo">ಬಿಲಾಸಪುರದ
ಹದಿನೆಂಟರ ಯುವಕ ಸುರ್ಜಿತ್ ಕುಮಾರ್ ಜೈನ್ ಈ ಕುಕೃತ್ಯವೆಸಗಿರುವ ವಿದ್ಯಾರ್ಥಿ ಎನ್ನಲಾಗಿದೆ. ಈತ Electronics and Communications ವಿಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿ. ಈತ ತನ್ನ ಜಿಲ್ಲೆಯಲ್ಲಿಯೂ ಮಹಿಳೆಯರ ನಗ್ನಚಿತ್ರಗಳನ್ನು ಇಂಟರ್ನೆಟ್ ಗೆ ಅಪ್ ಲೋಡ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ತನ್ನ
ಚಿತ್ರಗಳನ್ನೂ ಸದರಿ ವಿದ್ಯಾರ್ಥಿ ಇಂಟರ್ನೆಟ್ ಗೆ ಅಪ್ ಲೋಡ್ ಮಾಡಿದ್ದಾನೆ ಎಂದು ಕಳೆದ ತಿಂಗಳು ಅಧ್ಯಾಪಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರಿಗೆ IP address ಸದರಿ ವಿದ್ಯಾರ್ಥಿಯ ಕಂಪ್ಯೂಟರಿನೆಂದು ತಿಳಿದುಬಂದಿದೆ. ಆರೋಪಿ ಸುರ್ಜಿತ್ ಕುಮಾರ್ ಜೈನ್ IIT Kharagpurನಲ್ಲಿ ತಂಗಿದ್ದು, ಅಲ್ಲಿನ ಕಂಪ್ಯೂಟರ್ ಬಳಸಿ, ಈ ಕುಕೃತ್ಯವೆಸಗಿದ್ದಾನೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.











Click it and Unblock the Notifications