IIT-IIMನಲ್ಲಿ ಓದಿದ ಕೂಡಲೇ ಲೈಫ್ ಸೆಟಲಾ? ಸ್ಟ್ರೆಸ್ ಕೊಡೋ ಡಿಗ್ರಿ ನಿಜಕ್ಕೂ ಬೇಕಾ? ಐಐಎಂ ಗ್ರಾಜ್ಯುಯೇಟ್ ಪೋಸ್ಟ್ ವೈರಲ್

IIT-IIM Admission: ಮಕ್ಕಳು ಯಾವ ಶಾಲೆಯಲ್ಲಿ ಓದಬೇಕು, ಯಾವ ಕಾಲೇಜಿಗೆ ಸೇರಬೇಕು ಎನ್ನುವುದನ್ನ ಪೋಷಕರು ಮಕ್ಕಳು ಹುಟ್ಟುವ ಮುನ್ನವೇ ಲೆಕ್ಕ ಹಾಕುವುದಕ್ಕೆ ಶುರು ಮಾಡುತ್ತಾರೆ. ಮಕ್ಕಳ ಭವಿಷ್ಯ ಅವರ ಶಾಲೆಯಲ್ಲೇ ಅಡಗಿದೆ ಅಂದುಕೊಳ್ಳುವವರೇ ಹೆಚ್ಚು. ಅದರಲ್ಲೂ ಐಐಟಿ-ಐಐಎಂನಲ್ಲಿ ಮಕ್ಕಳಿಗೆ ಅಡ್ಮಿಶನ್ ಸಿಕ್ಕರೆ ಸಾಕು ಅವರ ಲೈಫ್ ಸೆಟಲ್ ಎನ್ನುವುದು ಎಲ್ಲಾ ಪೋಷಕರ ಅಭಿಪ್ರಾಯ. ಕರಿಯೆರ್ ಚೆನ್ನಾಗಿ ಇರಬೇಕಾದರೆ ಪ್ರತಿಷ್ಠಿತ ಪದವಿ ಬೇಕು. ಹಾಗಾಗಿ ಮಕ್ಕಳು ಹೇಗಾದರೂ ಮಾಡಿ ಐಐಟಿ-ಐಐಎಂನಲ್ಲಿ ಸೀಟು ಗಿಟ್ಟಿಸಿಕೊಂಡರೆ ಸಾಕು ಎನ್ನುವ ಯೋಚನೆ. ಇದೇ ಕಾರಣಕ್ಕೆ ಕೆಲವು ಮಕ್ಕಳು ಕೂಡಾ ಹಗಲು ರಾತ್ರಿ ಒಂದು ನಿಮಿಷವೂ ವೇಸ್ಟ್ ಮಾಡದೆ ಓದ್ತಾ ಇರ್ತಾರೆ.

Man Graduated From IIM Ahmedabad Does Not Want His Kids To Join IIT IIM Parents Must Know The Reason

ಜೀವನ ಸಂತೋಷವೇ ಮುಖ್ಯ :

ಇದರ ನಡುವೆ ಈಗ ಐಐಎಂ ಅಹಮದಾಬಾದ್ ನಲ್ಲಿ ಓದಿದ ವ್ಯಕ್ತಿಯ ಯೋಚನೆ ಹೊಸ ಚರ್ಚೆ ಹುಟ್ಟು ಹಾಕಿದೆ. ಸೋಶಿಯಲ್ ಮಿಡಿಯಾದಲ್ಲಿ ( social media) ಇದೇ ವಿಷಯದ ಬಗ್ಗೆ ಮಾತುಕತೆ. ಬರೀ ಸಮಾಜದ ನಿರೀಕ್ಷೆಯನ್ನು ಪೂರೈಸಲು ಐಐಟಿ ಅಥವಾ ಐಐಎಂನಲ್ಲಿ ಓದುವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದಿಲ್ಲ ಎನ್ನುವುದು ಅವರ ವಾದ. ಅವರ ಪ್ರಕಾರ, ಜೀವನ ಅಂದರೆ ಕೆಲಸ ಮಾಡಬೇಕು ಸಂತೋಷವಾಗಿಬೇಕು. ಜೀವನದಲ್ಲಿ ಇದು ಬಹಳ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಲಕ್ಷಾಂತರ ವಿದ್ಯಾರ್ಥಿಗಳು ಓದಿನಲ್ಲೇ ಮುಳುಗಿರ್ತಾರೆ. ಅವರ ಮನೆಯವರು ಕೂಡಾ ಆ ಮಕ್ಕಳಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರ್ತಾರೆ. ಇಂಥಹ ಸಮಯದಲ್ಲಿ ಈ ವ್ಯಕ್ತಿಯ ಹೇಳಿಕೆ ಚರ್ಚೆ ಹುಟ್ಟು ಹಾಕಿರೋದ್ರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಒತ್ತಡಕ್ಕಿಂತ ಖುಷಿಯೇ ಆಯ್ಕೆಯಾಗಿರಲಿ :

ಅಬಿದ್ ಹಸನ್ ಎನ್ನುವವರು ಐಐಎಂ ಅಹಮದಾಬಾದಿನಲ್ಲಿ ಅಧ್ಯಯನ ಮಾಡಿದ ಸ್ನೇಹಿತನೊಂದಿಗೆ ನಡೆಸಿದ ಸಂಭಾಷಣೆಯನ್ನು ಸೋಶಿಯಲ್ ಮಿಡೀಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಐಐಟಿ ಅಥವಾ ಐಐಎಂಗೆ ಸೇರುವುದೇ ತಮ್ಮ ಜೀವನದ ಗುರಿ ಎಂದು ತಮ್ಮ ಮಕ್ಕಳು ಬದುಕುವುದು ತಮ್ಮ ಸ್ನೇಹಿತನಿಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ. ಈ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ಬದಲು ತಮ್ಮ ಜೀವನದ ಪ್ರತೀ ಕ್ಷಣವನ್ನು ಖುಷಿಯಿಂದ ಕಳೆಯುವುದನ್ನು ಆರಿಸಿಕೊಳ್ಳಲಿ ಎನ್ನುವುದು ಅವರ ಅಭಿಪ್ರಾಯವಂತೆ.

ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ :

ಅಬಿದ್ ಹಸನ್ ಪ್ರಕಾರ ಈ ಚಿಂತನೆ ಶಿಕ್ಷಣ ಮತ್ತು ವೃತ್ತಿಜೀವನದ (career) ಯಶಸ್ಸಿಗೆ ವಿಭಿನ್ನ ವಿಧಾನ. ಅವರ ಪ್ರಕಾರ, ಒಬ್ಬ ವ್ಯಕ್ತಿಗೆ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳಲು ಯಾವುದೇ ಪದವಿ ಅಥವಾ ಸಾಮಾಜಿಕ ಗುರುತಿನ ಅಗತ್ಯ ಇರಬಾರದು. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವುದರ ನಿಜವಾದ ಪ್ರಯೋಜನ ಇದಾಗಿರಬೇಕು. ಇಲ್ಲವಾದರೆ ಆ ಸಂಸ್ಥೆಗಳಲ್ಲಿ ಓದುವುದು, ಪದವಿ ಪಡೆಯುವುದು ಎಲ್ಲವೂ ವೇಸ್ಟ್.

ದೊಡ್ಡ ಪದವಿ ಜೊತೆಗೆ ಸಕ್ಸಸ್ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ:

ಮತ್ತೊಬ್ಬ ಐಐಎಂ ಪದವೀಧರ ಕೂಡಾ ಈ ಡಿಗ್ರಿ ಬಗ್ಗೆ ತಮ್ಮ ಅಭಿಪ್ರಾಯ ಶೇರ್ ಮಾಡಿದ್ದಾರೆ. ತಮ್ಮ ಮಕ್ಕಳು ಪ್ರತಿಷ್ಠಿತ ಸಂಸ್ಥೆಗಳಲ್ಲಿಯೇ ಓದಬೇಕು ಎಂದು ನಾನು ಯಾವತ್ತೂ ಒತ್ತಾಯ ಮಾಡಲ್ಲ ಎಂದಿದ್ದಾರೆ. ಪ್ರಾಯೋಗಿಕ ಅನುಭವ, ಕೌಶಲ್ಯ ಮತ್ತು ಒಬ್ಬರ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಸ್ವಾತಂತ್ರ್ಯ ಇರುವುದು ಎಷ್ಟು ಮುಖ್ಯ ಎನ್ನುವುದನ್ನು ಅವರು ಒತ್ತಿ ಹೇಳಿದ್ದಾರೆ. ಅವರ ಪ್ರಕಾರ, ತುಂಬಾ ಸಲ ಪೋಷಕರು ಮಕ್ಕಳ ಆಸಕ್ತಿ ಏನು ಎನ್ನುವುದನ್ನೇ ತಿಳಿದುಕೊಳ್ಳಲು ಹೋಗುವುದಿಲ್ಲ. ಮಕ್ಕಳ ಇಷ್ಟ ಕಷ್ಟಗಳನ್ನು ಬದಿಗಿಟ್ಟು ತಮಗೆ ಬೇಕಾದ ದಾರಿಯನ್ನು ಆರಿಸಿಕೊಳ್ಳುವಂತೆ ಹೇಳುತ್ತಾರೆ.

ಆರ್ಥಿಕ ಭದ್ರತೆಯು ಕನಸುಗಳಿಗೆ ಹಾರಾಟ ನೀಡಬಹುದು :

ಅನೇಕ ಪ್ರಭಾವಿ ಕವಿಗಳು, ಬರಹಗಾರರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಶ್ರೀಮಂತ ಕುಟುಂಬಗಳಿಂದ ಬಂದವರು ಎನ್ನುವುದನ್ನು ಒಬ್ಬರು ಹೇಳಿದ್ದಾರೆ. ಹಾಗಾಗಿ ಆರ್ಥಿಕ ಭದ್ರತೆ ಇಲ್ಲಿ ಬಹಳ ಮುಖ್ಯವಾಗಿರುತ್ತದೆ. ಇದು ಜನರಿಗೆ ಸೃಜನಶೀಲ ಮತ್ತು ಬೌದ್ಧಿಕ ಆಸಕ್ತಿ ಮುಂದುವರಿಸಲು ಹೆಚ್ಚಿನ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಅವರ ಸ್ನೇಹಿತರ (friends) ಜೊತೆಗೆ ಮಾತನಾಡುವಾಗ ಅವರು ಅರಿತುಕೊಂಡ ಒಂದು ಮುಖ್ಯ ವಿಷಯವೆಂದರೆ ಅವರ್ಯಾರೂ ತಮ್ಮ ಮಕ್ಕಳು ಐಐಟಿ ಅಥವಾ ಐಐಎಂ ಸೇರಲಿ ಎಂದು ಇಷ್ಟ ಪಟ್ಟಿಲ್ಲ. ಒಂದು ವೇಳೆ ಮಕ್ಕಳಿಗೆ ಅದು ಇಷ್ಟವಿಲ್ಲ ಎಂದಾದರೆ ಅವರಿಗೆ ಇಷ್ಟವಿರುವ ಹಾದಿಯಲ್ಲಿ ಮುಂದುವರಿಯಲಿ. ಅವರಿಗೆ ಬೇಕಾಗಿರುವ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಸಂತೋಷವಾಗಿರಲಿ ಎಂದು ಬಯಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+