ಕಾರವಾರ ತೀರದಲ್ಲಿ ಮುಳುಗುತ್ತಿದ್ದ ವ್ಯಾಪಾರಿ ಹಡಗು ರಕ್ಷಣೆ

ಕಾರವಾರ/ಮುಂಬೈ, ಜೂನ್, 09: ಕಾರವಾರ ಮತ್ತು ಗೋವಾ ತೀರದ ಸಮೀಪ ಅಪಾಯಕ್ಕೆ ಸಿಲುಕಿದ್ದ ವ್ಯಾಪಾರಿ ಹಡಗನ್ನು ಭಾರತೀಯ ನೌಕಾದಳ ಮತ್ತು ಕೋಸ್ಟಲ್ ಗಾರ್ಡ್ ಪಡೆ ಬುಧವಾರ ರಾತ್ರಿ ರಕ್ಷಣೆ ಮಾಡಿದೆ.

83 ಮೀಟರ್ ಉದ್ದದ ವ್ಯಾಪಾರಿ ಹಡಗು " ಎಂವಿ ಇನ್ಫಿನಿಟಿ ಒನ್" ಸಮುದ್ರ ತೀರದಿಂದ 20 ಮೈಲಿ ದೂರದಲ್ಲಿ ಮುಳುಗಲು ಆರಂಭಿಸಿತ್ತು. ಹಡಗಿನಲ್ಲಿ 14 ಜನ ಭಾರತೀಯ ಸಿಬ್ಬಂದಿ ಇದ್ದರು.[ಮಂಗಳೂರು: ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಪಡೆ]

india

ಮಾಹಿತಿ ತಿಳಿದು ಕಾರ್ಯನಿರತರಾದ ನೌಕಾದಳದ ಸಿಬ್ಬಂದಿ ಅತ್ಯಾಧುನಿಕ ವಾಟರ್ ಪಂಪ್ ಬಳಕೆ ಮಾಡಿ ನೀರನ್ನು ಹೊರಹಾಕಿ ಯಾವುದೇ ಅಪಾಯ ಸಂಭವಿಸದಂತೆ ನೋಡಿಕೊಂಡರು. ಹೆಲಿಕಾಪ್ಟರ್ ಗಳ ಬಳಕೆಗೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು.[ಭಾರತೀಯ ನೌಕಾಪಡೆ ಸಂಭ್ರಮದ ಮಧುರ ಕ್ಷಣಗಳು]

-

-

-

-

ನೌಕೆಯ ಎರಡು ಮತ್ತು ಕೋಸ್ಟಲ್ ಗಾರ್ಡ್ ನ ಒಂದು ಹಡಗಿನಿಂದ ಕಾರ್ಯರೂಪಕ್ಕೆ ಇಳಿದ ಸೈನಿಕರು ಯಾವ ಅಪಾಯ ಎದುರಾಗದಂತೆ ನೋಡಿಕೊಂಡರು. ಗುಜರಾತ್ ನ ಕಾಂಡ್ಲಾದಿಂದ ಹೊರಟ ವ್ಯಾಪಾರಿ ಹಡಗು ಕಾರವಾರ ಬಂದರನ್ನು ತಲುಪುವುದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+