PM Modi: ದಕ್ಷಿಣ ಆಫ್ರಿಕಾ ಮಣಿಸಿ ವಿಶ್ವಕಪ್‌ ಗೆದ್ದ ರೋಹಿತ್‌ ಬಳಗಕ್ಕೆ ಪ್ರಧಾನಿ ಮೋದಿ ವಿಶೇಷ ಶುಭಾಶಯ-ವಿಡಿಯೋ ವೈರಲ್‌

ICC T20 World Cup 2024: ಐಸಿಸಿ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಅಮೋಘ ಗೆಲುವು ಸಾಧಿಸಿ ಕಪ್‌ ತನ್ನದಾಗಿಸಿಕೊಂಡಿತು. 7 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅವರು ಟ್ವೀಟ್‌ ಮೂಲಕ ವಿಶೇಷ ಶುಭಾಷಯ ಕೋರಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ನಮ್ಮ ಭಾರತ ತಂಡ 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಮನೆಗೆ ತಂದಿತು ಮತ್ತು 2011ರ ನಂತರ ಭಾರತದ ಮೊದಲ ವಿಶ್ವಕಪ್ ಗೆಲುವಾಗಿದೆ. ಟಿ20 ಕಪ್ ಅನ್ನು ತಮ್ಮದೇ ಶೈಲಿಯಲ್ಲಿ ಮನೆಗೆ ತಂದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಂಡವನ್ನು ಜೂನ್‌ 29ರ ಮಧ್ಯರಾತ್ರಿಯೇ ಅಭಿನಂದಿಸಿದರು.

ICC T20 World Cup 2024 Win PM Modi special wishes for India team video viral

ತಂಡವನ್ನು ಅಭಿನಂದಿಸಿದ ವೀಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ, "ನಮ್ಮ ಭಾರತ ತಂಡವು ವಿಶ್ವಕಪ್ ಗೆದ್ದಿದೆ ಮತ್ತು ಈ ಮೂಲಕ ಕೋಟ್ಯಂತರ ಭಾರತೀಯರ ಹೃದಯವಾಗಿದೆ. ಅದು ಒಂದೇ ಒಂದು ಪಂದ್ಯವನ್ನು ಸೋಲಲಿಲ್ಲ ಎಂಬುದು ಸಣ್ಣ ಸಾಧನೆಯಲ್ಲ," ಎಂದು ಹೇಳಿದ್ದಾರೆ.

ವೆಸ್ಟ್‌ ಇಂಡೀಸ್‌ನ ಕೆನ್ಸಿಂಗ್ಟನ್ ಓವನ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸುವ ಮೂಲಕ ಭಾರತ 176 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಬಳಿಕ ಈ ಬೃಹತ್‌ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್‌ಗಳ ನಷ್ಟಕ್ಕೆ 169 ರನ್‌ಗಳನ್ನು ಗಳಿಸುವ ಮೂಲಕ ಭಾರತಕ್ಕೆ ಶರಣಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+