18 ಲಕ್ಷ ರೂ. ಉದ್ಯೋಗ ಬಿಟ್ಟು IAS ಕನಸು ಬೆನ್ನಟ್ಟಿದ 23ರ ಯುವಕ ಯೋಗೇಶ್ ಸಾಹು: ಇದು ಬಡತನದ ವಿರುದ್ಧ ಹೋರಾಟದ ಕಥೆ

ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ಘಟ್ಟ ಬರತ್ತದೆ, ಅಲ್ಲಿ ಅತ್ಯಂತ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ. 23 ವರ್ಷದ ಯೋಗೇಶ್ ಸಾಹು ಅವರ ಜೀವನದಲ್ಲೂ ಕೂಡ ಇಂತಹದ್ದೇ ಒಂದು ಸವಾಲು ಎದುರಾಗಿತ್ತು. ಕೈಗೆ ಬಂದಿದ್ದ ಉತ್ತಮ ಉದ್ಯೋಗದ ಅವಕಾಶವನ್ನ ಸ್ವೀಕರಿಸಿ ಕುಟುಂಬದ ಆರ್ಥಿಕ ಕಷ್ಟಗಳನ್ನ ದೂರ ಮಾಡುವುದಾ.. ಅಥವಾ ಐಎಎಸ್ ಅಧಿಕಾರಿಯಾಗಬೇಕು ಎಂಬ ತನ್ನ ಬಹುದಿನದ ಕನಸನ್ನ ಬೆನ್ನಟ್ಟುವುದೋ ಎಂಬ ದೊಡ್ಡ ಗೊಂದಲ ಅವರಲ್ಲಿತ್ತು.

ಆದರೆ, ಯೋಗೇಶ್ ಎರಡನೇ ಆಯ್ಕೆಯನ್ನ ಆರಿಸಿಕೊಂಡರು. ಇದು ಕೇವಲ ಒಬ್ಬ ಯುವಕನ ಕಥೆಯಲ್ಲ, ಬದಲಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ದೊಡ್ಡ ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಇದೊಂದು ಸ್ಫೂರ್ತಿದಾಯಕ ಕಥೆ.

IAS Success Story

ಚಾಲಕನ ಮಗನ ದೊಡ್ಡ ಕನಸು

ಯೋಗೇಶ್ ಸಾಹು ಅವರ ತಂದೆ ವೃತ್ತಿಯಲ್ಲಿ ಒಬ್ಬ ಚಾಲಕ. ತಿಂಗಳಿಗೆ 20 ಸಾವಿರ ರೂಪಾಯಿ ದುಡಿಯುವ ಅವರು, ಅದರಲ್ಲಿಯೇ ಸ್ವಲ್ಪ ಹಣವನ್ನ ತಮ್ಮ ಮಾಲೀಕರ ಬಳಿ ಉಳಿತಾಯ ಮಾಡುತ್ತಾ ಇಡೀ ಸಂಸಾರವನ್ನ ಕಷ್ಟಪಟ್ಟು ನಿಭಾಯಿಸುತ್ತಿದ್ದಾರೆ. ಇಂತಹ ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ಯೋಗೇಶ್, ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನ ಹತ್ತಿರದಿಂದ ನೋಡುತ್ತಾ ಬೆಳೆದವರು. ಅವರಿಗೆ ಒಂದು ಒಳ್ಳೆಯ ಉದ್ಯೋಗದ ಅವಕಾಶ ಒಲಿದುಬಂದಿತ್ತು. ಆ ಕೆಲಸಕ್ಕೆ ಸೇರಿಕೊಂಡಿದ್ದರೆ ಕುಟುಂಬಕ್ಕೆ ಒಂದು ಆರ್ಥಿಕ ಭದ್ರತೆ ಸಿಗುತ್ತಿತ್ತು. ಆದರೆ, ಈ ಐಐಟಿ ಬಾಂಬೆ ಟಾಪರ್‌ ಆ 18 ಲಕ್ಷ ಪ್ಯಾಕೇಜಿನ ಉದ್ಯೋಗವನ್ನಾ ಒಪ್ಪಿಕೊಂಡರೆ ತನ್ನ ಐಎಎಸ್ ಗುರಿಗೆ ಎಳ್ಳುನೀರು ಬಿಡಬೇಕಾಗುತ್ತದೆ ಎಂಬ ಭಯ ಯೋಗೇಶ್ ಅವರನ್ನ ಕಾಡತೊಡಗಿತು.

ಕುಟುಂಬದ ಬೆಂಬಲ

ತನ್ನ ಮನಸ್ಸಿನಲ್ಲಿದ್ದ ಗೊಂದಲವನ್ನ ಯೋಗೇಶ್ ತಮ್ಮ ತಂದೆಯ ಮುಂದೆ ಬಿಚ್ಚಿಟ್ಟರು. "ನಾನು ಈ ಕೆಲಸಕ್ಕೆ ಸೇರಿದರೆ ನೀವು ಬೇಗ ನಿವೃತ್ತಿ ಪಡೆಯಬಹುದು, ನಮ್ಮ ಎಲ್ಲ ಕಷ್ಟಗಳು ದೂರವಾಗುತ್ತವೆ" ಎಂದು ಯೋಗೇಶ್ ಭಾವುಕರಾಗಿ ಹೇಳಿದಾಗ, ಆ ತಂದೆ ನೀಡಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸುವಂತಿತ್ತು.

ಮಗನ ಮಾತಿಗೆ ಪ್ರತಿಕ್ರಿಯಿಸಿದ ತಂದೆ, "ನನ್ನ ನಿವೃತ್ತಿಯ ಬಗ್ಗೆ ನೀನು ಚಿಂತಿಸಬೇಡ. ನೀನು ನಿನ್ನ ಗುರಿಯ ಕಡೆಗೆ ಮಾತ್ರ ಗಮನ ಹರಿಸು. ನಿನ್ನ ಕನಸನ್ನ ಕೈಬಿಡಬೇಡ" ಎಂದು ಬೆಂಬಲವಾಗಿ ನಿಂತರು. ತಂದೆಯ ಈ ಮಾತುಗಳು ಯೋಗೇಶ್ ಅವರ ಯುಪಿಎಸ್‌ಸಿ ಸಿದ್ಧತೆಗೆ ಮತ್ತಷ್ಟು ಬಲ ತುಂಬಿತು.

ಸಿವಿಲ್ ಸರ್ವೀಸಸ್ ಗುರಿ: ಕೇವಲ ಹಣವಲ್ಲ, ಭವಿಷ್ಯ ಬದಲಾಯಿಸುವ ಹಂಬಲ

ಯೋಗೇಶ್ ಪಾಲಿಗೆ ಯಶಸ್ಸು ಎಂದರೆ ಕೇವಲ ಹೆಚ್ಚು ಹಣ ಸಂಪಾದಿಸುವುದಲ್ಲ. ತಲೆತಲಾಂತರಗಳಿಂದ ತಮ್ಮ ಕುಟುಂಬ ಅನುಭವಿಸುತ್ತಿರುವ ಬಡತನ, ಕಷ್ಟಗಳು ಮತ್ತು ಜೀವನ ಶೈಲಿಯನ್ನ ಸಂಪೂರ್ಣವಾಗಿ ಬದಲಾಯಿಸುವುದು ಅವರ ಮುಖ್ಯ ಗುರಿಯಾಗಿದೆ. ಸಿವಿಲ್ ಸರ್ವೀಸಸ್ ಮೂಲಕ ಸಮಾಜದಲ್ಲಿ ಒಂದು ಉನ್ನತ ಸ್ಥಾನಮಾನ ಗಳಿಸಿ, ತಮ್ಮ ತಂದೆ-ತಾಯಿಗೆ ಹೆಮ್ಮೆಯ ಮಗನಾಗಬೇಕು ಎಂಬ ಹಂಬಲ ಅವರಲ್ಲಿದೆ.

ಯುಪಿಎಸ್‌ಸಿ ಪರೀಕ್ಷೆಯೆಂದರೆ ಅದು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಲಕ್ಷಾಂತರ ವಿದ್ಯಾರ್ಥಿಗಳು ಹಗಲಿರುಳು ಈ ಪರೀಕ್ಷೆಗಾಗಿ ಶ್ರಮಿಸುತ್ತಾರೆ. ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬರೆಯುವುದು ಎಂದರೆ ಒಂದು ಕಡೆ ಆರ್ಥಿಕ ಸಮಸ್ಯೆ, ಮತ್ತೊಂದು ಕಡೆ ಭವಿಷ್ಯದ ಆತಂಕ ಇರುತ್ತದೆ.

ಇವೆಲ್ಲದರ ನಡುವೆಯೂ ಯೋಗೇಶ್ ತಮ್ಮ ಗುರಿಯಿಂದ ಸ್ವಲ್ಪವೂ ವಿಚಲಿತರಾಗಲಿಲ್ಲ. ತಮ್ಮ ಕನಸಿಗಾಗಿ ಸುಲಭವಾಗಿ ಸಿಗುತ್ತಿದ್ದ ಆರಾಮದಾಯಕ ಜೀವನವನ್ನು ತ್ಯಜಿಸಿ, ಹಗಲಿರುಳು ಕಷ್ಟಪಟ್ಟು ಓದುತ್ತಿರುವ ಯೋಗೇಶ್ ಸಾಹು ಅವರ ಈ ನಿರ್ಧಾರ ಅನೇಕ ಯುವಕರಿಗೆ ಮಾದರಿಯಾಗಿದೆ. ಪ್ರಸ್ತುತ ಅವರು ತಮ್ಮ ಸಂಪೂರ್ಣ ಶ್ರಮವನ್ನು ಪರೀಕ್ಷಾ ತಯಾರಿಗಾಗಿ ಮೀಸಲಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+