ಆಹಾರ ಸುರಕ್ಷತೆಗೆ ಒಂದೇ ಬ್ಯಾಚನ 2 IAS ಅಧಿಕಾರಿಗಳ ಕಮಾಲ್‌: 3 ತಿಂಗಳಲ್ಲಿ 531 ಕಡೆ ತಪಾಸಣೆ ಮಾಡಿದ ಕುಮಾರ್ ರವಿ ದಿಟ್ಟ ಹೆಜ್ಜೆ

ನಾವು ಪ್ರತಿದಿನ ಕುಡಿಯುವ ಚಹಾದಲ್ಲಿರುವ ಹಾಲು, ಮನೆಗೆ ತರುವ ಸಿಹಿ ತಿನಿಸುಗಳು ಅಥವಾ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುವ ಸ್ವಾದಿಷ್ಟ ಊಟ... ಇವೆಲ್ಲವೂ ನಿಮ್ಮ ತಟ್ಟೆ ಸೇರುವ ಮುನ್ನ ಎಷ್ಟು ಸುರಕ್ಷಿತವಾಗಿವೆ ಎಂದು ಎಂದಾದರೂ ಯೋಚಿಸಿದ್ದೀರಾ? ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಆಹಾರದ ಹಾವಳಿ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಬಿಹಾರದಲ್ಲಿ ಐಎಎಸ್ ಅಧಿಕಾರಿ ಕುಮಾರ್ ರವಿ ( ಈ ಪ್ರಶ್ನೆಗೆ ನೇರ ಹಾಗೂ ದಿಟ್ಟ ಉತ್ತರ ನೀಡಲು ಮುಂದಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ತಮ್ಮ ಕಟ್ಟುನಿಟ್ಟಿನ ಆಡಳಿತಕ್ಕೆ ಹೇಗೆ ಹೆಸರಾಗಿದ್ದಾರೋ, ಅದೇ ಬ್ಯಾಚ್‌ನ ಮತ್ತೊಬ್ಬ ಖಡಕ್ ಅಧಿಕಾರಿ ಕುಮಾರ್ ರವಿ ಈಗ ಬಿಹಾರದಲ್ಲಿ ಆಹಾರ ಮಾಫಿಯಾ ವಿರುದ್ಧ ಸಮರ ಸಾರಿದ್ದಾರೆ.

IAS Kumar Ravi Leads Massive Food Safety Drive In Bihar 531 Inspections Conducted In 3 Months

ಒಂದೇ ಬ್ಯಾಚ್‌ನ ಈ ಇಬ್ಬರು ಅಧಿಕಾರಿಗಳು ಇಂದು ಎರಡು ವಿಭಿನ್ನ ರಾಜ್ಯಗಳಲ್ಲಿ ಮಹತ್ವದ ಬದಲಾವಣೆಗೆ ಕಾರಣರಾಗಿದ್ದಾರೆ. ಬಿಹಾರದಾದ್ಯಂತ ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡುವವರ ವಿರುದ್ಧ ಕುಮಾರ್ ರವಿ ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಿಹಾರದಲ್ಲಿ ಆಹಾರ ಸುರಕ್ಷತಾ ಅಭಿಯಾನ

ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುವವರ ವಿರುದ್ಧ ಸಮರ ಸಾರಿರುವ ಕುಮಾರ್ ರವಿ ಅವರು, ಕೇವಲ ಮೂರು ತಿಂಗಳ ಅವಧಿಯಲ್ಲಿ ಬಿಹಾರದ ಎಲ್ಲಾ 38 ಜಿಲ್ಲೆಗಳಲ್ಲಿ ಬರೋಬ್ಬರಿ 531 ಕಡೆ ಆಹಾರ ಸುರಕ್ಷತಾ ತಪಾಸಣೆಗಳನ್ನ ನಡೆಸಿದ್ದಾರೆ.

ಈ ಮೂಲಕ ಆಹಾರ ಸುರಕ್ಷತಾ ನಿಯಮಗಳನ್ನ ಉಲ್ಲಂಘಿಸುವ ಮತ್ತು ಗುಣಮಟ್ಟವನ್ನ ಕಡೆಗಣಿಸುವ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ನಡೆಯುತ್ತಿರುವ ಈ ದಾಳಿಗಳು ಕಲಬೆರಕೆದಾರರ ಎದೆಯಲ್ಲಿ ನಡುಕ ಹುಟ್ಟಿಸಿವೆ.

17 ಲಕ್ಷ ರೂ. ಮೌಲ್ಯದ ಕಲಬೆರಕೆ ಆಹಾರ ಜಪ್ತಿ

ಈ ಕಾರ್ಯಾಚರಣೆ ಕೇವಲ ಎಚ್ಚರಿಕೆಗೆ ಸೀಮಿತವಾಗಿಲ್ಲ. ದಾಳಿಯ ವೇಳೆ ಕಳಪೆ ಗುಣಮಟ್ಟ ಸಾಬೀತಾದ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿಯವರೆಗೆ, ನಿಯಮ ಬಾಹಿರವಾಗಿ ತಯಾರಿಸಲಾದ ಹಾಗೂ ಆರೋಗ್ಯಕ್ಕೆ ಹಾನಿಕರವಾದ ಸುಮಾರು 17.32 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನ ಜಪ್ತಿ ಮಾಡಲಾಗಿದೆ.

ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾದ 15 ವಾಣಿಜ್ಯ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ನಿಯಮ ಉಲ್ಲಂಘಿಸಿದ 2 ಸಂಸ್ಥೆಗಳ ಪರವಾನಗಿಯನ್ನ ಅಮಾನತುಗೊಳಿಸಲಾಗಿದೆ.

ಹೋಟೆಲ್, ಸ್ವೀಟ್ ಸ್ಟಾಲ್ ಮೇಲೆ ಹದ್ದಿನ ಕಣ್ಣು

ನಮ್ಮ ದೈನಂದಿನ ಬಳಕೆಯ ಆಹಾರ ಪದಾರ್ಥಗಳೇ ಈ ಅಭಿಯಾನದ ಪ್ರಮುಖ ಗುರಿಯಾಗಿವೆ. ಡೇರಿ ಘಟಕಗಳು, ಹಾಲಿನ ಕೇಂದ್ರಗಳು, ಸ್ವೀಟ್ ಶಾಪ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ಸೇವೆಗಳು ಹಾಗೂ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಗಳ ಮೇಲೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ನಾವು ದುಡ್ಡು ಕೊಟ್ಟು ತಿನ್ನುವ ಪ್ರತಿಯೊಂದು ತುತ್ತು ಕೂಡ ಶುದ್ಧವಾಗಿರಬೇಕು ಎಂಬುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.

ಸಾರ್ವಜನಿಕರ ಸಹಭಾಗಿತ್ವ ಮತ್ತು ಅಧಿಕಾರಿಗಳಿಗೆ ತರಬೇತಿ

ಕೇವಲ ದಾಳಿ ಮಾಡುವುದರಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಐಎಎಸ್ ಕುಮಾರ್ ರವಿ, ಸಾರ್ವಜನಿಕರನ್ನು ಈ ಅಭಿಯಾನದಲ್ಲಿ ಕೈಜೋಡಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಎಲ್ಲಾದರೂ ಕಳಪೆ ಆಹಾರ ಮಾರಾಟವಾಗುತ್ತಿರುವುದು ಕಂಡುಬಂದರೆ ದೂರು ನೀಡುವಂತೆ ಜನರಿಗೆ ಕರೆ ನೀಡಲಾಗಿದೆ.

ಇದರ ಜೊತೆಗೆ, ಆಹಾರ ಸುರಕ್ಷತಾ ಅಧಿಕಾರಿಗಳಿಗೂ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಕಾನೂನು ಜಾರಿಯನ್ನ ಮತ್ತಷ್ಟು ಬಲಪಡಿಸಲಾಗುತ್ತಿದೆ.

ದಾಳಿಗಳು ಕೇವಲ ಆರಂಭವಷ್ಟೇ. ವ್ಯಾಪಾರಸ್ಥರು ನಿಯಮಗಳನ್ನು ನಿರಂತರವಾಗಿ ಪಾಲಿಸುವಂತೆ ಮಾಡುವುದು ಹಾಗೂ ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡುವುದು ಸುದೀರ್ಘ ಬದಲಾವಣೆಗೆ ನಾಂದಿ ಹಾಡಲಿದೆ. ಶುದ್ಧ ಹಾಗೂ ಸುರಕ್ಷಿತ ಆಹಾರ ಎನ್ನುವುದು ಕೇವಲ ಶ್ರೀಮಂತರ ಸವಲತ್ತಲ್ಲ, ಅದು ಪ್ರತಿಯೊಂದು ಕುಟುಂಬದ ಮೂಲಭೂತ ಹಕ್ಕು. ಈ ಹಕ್ಕನ್ನು ಒದಗಿಸುವ ನಿಟ್ಟಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ತಮ್ಮದೇ ಆದ ರೀತಿಯಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+