ಚಿತ್ರಗಳಲ್ಲಿː ಕಣ್ಮನ ಸೆಳೆದ ಸೈನಿಕರ ತಾಲೀಮು
ನವದೆಹಲಿ, ಅ. 7 : ದೆಹಲಿ ಸಮೀಪದ ಗಜಿಯಾಬಾದ್ ಬಳಿ ಸೋಮವಾರ ಲೋಹದ ಹಕ್ಕಿಗಳ ಕಲರವ. ಸೈನಿಕರ ಶಿಸ್ತಿನ ಪ್ರದರ್ಶನ. ವಾಯುಸೇನಾ ದಿನಾಚರಣೆ ಪೂರ್ವಭಾವಿಯಾಗಿ ಮೂಡಿಬಂದ ಸೈನಿಕರ ವಿವಿಧ ತಾಲೀಮು ರಾಷ್ಟ್ರದ ಸೈನಿಕ ಶಕ್ತಿಯನ್ನು ತಿಳಿಸಿಕೊಟ್ಟಿತು.
ಭಾರತೀಯ ವಾಯುಸೇನೆ ಸಿಬ್ಬಂದಿ ದೆಹಲಿ ಸಮೀಪದ ಹಿಂಡೋನ್‌ನಲ್ಲಿ ಸೋಮವಾರ ಪ್ರದರ್ಶಿಸಿದ ಯುದ್ಧ ತಾಲೀಮು ಗಮನ ಸೆಳೆಯಿತು. ಅತ್ಯಾಧುನಿಕ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ತಮ್ಮ ಶಕ್ತಿ ದರ್ಶನ ಮಾಡಿಸಿದವು.[ಸೇನೆಗೆ ಸೆಲ್ಯೂಟ್ ಹೊಡೆದ ಕಾಶ್ಮೀರ ಪ್ರವಾಹ ಪೀಡಿತರು]
ವಾಯು ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಪ್ರದರ್ಶನದಲ್ಲಿ ಸಮವಸ್ತ್ರಧಾರಿಗಳಾಗಿ ಪರೇಡ್ ನಡೆಸಿದ ಸೈನಿಕರು ಭಾರತದ ಸೇನಾ ಶಕ್ತಿಯನ್ನು ತಿಳಿಸಿದರು. ರೈಪಲ್‌ಗಳನ್ನು ಹಿಡಿದು ವಿವಿಧ ರೀತಿಯ ಯುದ್ಧ ಕಲೆ ಪ್ರದರ್ಶಿಸಿದರು.
ಸೈನಿಕರ ತಾಲೀಮಿಗೆ ಅನೇಕ ಹಿರಿಯ ಅಧಿಕಾರಿಗಳು, ನಾಗರಿಕರು ಸಾಕ್ಷಿಯಾದರು. ವಾಯು ಸೇನೆ ಸೈನಿಕರ ಪ್ರದರ್ಶನದ ಕೆಲ ನೋಟ ನಿಮಗಾಗಿ...

ಶಿಸ್ತು ಪ್ರದರ್ಶನ
ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದು ಶಿಸ್ತು ಪ್ರದರ್ಶಿಸಿದ ಸಿಪಾಯಿಗಳು.

ಏಕ್ ದೋ ತೀನ್...
ಲಯಬದ್ಧ ಡ್ರಮ್ಸ್ ಶಬ್ದಕ್ಕೆ ಹೆಜ್ಜೆ ಹಾಕಿದ ಸೈನಿಕರು.

ಲೋಹದ ಹಕ್ಕಿಗಳ ಕಲರವ
ಭಾರತೀಯ ವಾಯುಸೇನೆಯ ಶಕ್ತಿ ತಿಳಿಸಿದ ಯುದ್ಧವಿಮಾನಗಳ ಹಾರಾಟ.

ಸೈನಿಕರಿಗೆ ಸೈನಿಕರೆ ಸಾಟಿ
ಯೋಧರ ಪ್ರದರ್ಶನದ ಅತ್ಯಾಕರ್ಷಕ ಭಂಗಿ.

ಪ್ಯಾರಾಚೂಟ್ ಏರಿದ ಸೈನಿಕರು
ತ್ರಿವರ್ಣ ಧ್ವಜವನ್ನು ಬಿಂಬಿಸಿದ ಪ್ಯಾರಾಚೂಟ್ ಹಾರಾಟ.

ಲೋಹದ ಹಕ್ಕಿಗಳ ಆಕಾಶ ಚುಂಬನ
ಆಕಾಶದಲ್ಲಿ ರಕ್ಷಣಾ ವಲಯ ನಿಮರ್ಮಿಸಿದ ವಾಯುಸೇನೆ ಯುದ್ಧನೌಕೆಗಳು.












Click it and Unblock the Notifications