ನನ್ನನ್ನು ಹಿಂಸಿಸಲಾಯಿತು, ಬೆದರಿಸಲಾಯಿತು: ಉಜ್ಮಾ ಕಹಿ ನೆನಪು

ತಾಹಿರ್ ಜತೆಗೆ ಪಾಕಿಸ್ತಾನಕ್ಕೆ ಹೋಗಿದ್ದಾಗ ಆತ ನನ್ನನ್ನು ಬಲವಂತವಾಗಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಮದುವೆಗೆ ನಿರಾಕರಿಸಿದ್ದಕ್ಕೆ ತನ್ನನ್ನು ಹಿಂಸಿಸಿದರು ಎಂದು ಉಜ್ಮಾ ಹೇಳಿದ್ದಾಳೆ

ನವದೆಹಲಿ, ಮೇ 25: ''ನಾನು ಪ್ರೀತಿಯಿಂದಲೇ ತಾಹಿರ್ ನನ್ನು ನೋಡಲು ಪಾಕಿಸ್ತಾನಕ್ಕೆ ಹೋಗಿದ್ದೆ. ಆದರೆ, ಅಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಬಲವಂತವಾಗಿ ನನ್ನನ್ನು ತಾಹಿರ್ ಗೆ ಮದುವೆ ಮಾಡಲಾಯಿತಲ್ಲದೆ, ನನ್ನನ್ನು ಹೊಡೆದು, ಬಡಿದು ಹಿಂಸಿಸಲಾಯಿತು'' - ಇದು ಗುರುವಾರ , ಪಾಕಿಸ್ತಾನದಿಂದ ಭಾರತಕ್ಕೆ ಬಂದ ನವದೆಹಲಿ ಮೂಲದ ಉಜ್ಮಾ ಎಂಬಾಕೆಯ ಕಹಿ ನೆನಪುಗಳು.

ಇದೇ ತಿಂಗಳು ಪಾಕಿಸ್ತಾನದಲ್ಲಿ ತಮ್ಮನ್ನು ಗನ್ ಪಾಯಿಂಟ್ ನಡಿ ಪಾಕಿಸ್ತಾನದ ಯುವಕನೊಬ್ಬನಿಗೆ ಮದುವೆ ಮಾಡಿಕೊಟ್ಟಿದ್ದಾಗಿ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಧೂತಾವಾಸ ಕಚೇರಿಗೆ ದೂರು ಸಲ್ಲಿಸಿದ್ದ ಈಕೆ, ಇದೀಗ ಅಲ್ಲಿ ಕಾನೂನು ಸಮರ ಗೆದ್ದು ಭಾರತಕ್ಕೆ ಹಿಂದಿರುಗಿದ್ದಾಳೆ.[ನರಕದಿಂದ ತಪ್ಪಿಸಿಕೊಂಡು ತವರಿಗೆ ಬಂದ ತಂಗಿ]

I was Tortured in Pak, says Uzma

ಗುರುವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ವಾಘಾ ಗಡಿಯ ಮೂಲಕ ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ಬಂದಿಳಿದ ಈಕೆ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದಲ್ಲಿ ತಾನು ಅನುಭವಿಸಿದ ನರಕ ಯಾತನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಳು.

ತಾಹಿರ್ ಜತೆಗೆ ಪ್ರೇಮಾಂಕುರವಾಗಿದ್ದು ನಿಜವಾದರೂ, ಆತನನ್ನು ನೋಡಿಕೊಂಡು ಬರಲು ನಾನು ಪಾಕಿಸ್ತಾನಕ್ಕೆ ಹೋಗಿದ್ದೆ. ಆದರೆ, ಅಲ್ಲಿ ಆತ ನನ್ನನ್ನು ಬಲವಂತವಾಗಿ ಮದುವೆ ಮಾಡಿಕೊಳ್ಳಲು ಮುಂದಾದ. ನಾನು ಪ್ರತಿಭಟಿಸಿದ್ದಕ್ಕೆ ನನ್ನನ್ನು ಹೊಡೆದು ಹಿಂಸಿಸಲಾಯಿತು. ಕೊಲ್ಲುವ ಬೆದರಿಕೆಯನ್ನೂ ಒಡ್ಡಲಾಯಿತು ಎಂದು ತಿಳಿಸಿದರು.

ಮೊದಲಿಗೆ ತನಗೆ ಮದುವೆಯಾಗಿಲ್ಲ ಎಂದು ಹೇಳಿದ್ದ ತಾಹಿರ್ ಗೆ ಈ ಮೊದಲೇ ಮದುವೆಯಾಗಿ ಆತನಿಗೆ ನಾಲ್ಕು ಜನ ಮಕ್ಕಳಿದ್ದಾರೆಂಬ ಸತ್ಯ ನನಗೆ ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು ಎಂದು ಆಕೆ ಹೇಳಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+