ನಾನು ಸೈನಿಕ.. ಹುಟ್ಟಿದ್ದೇ ಸಾಯುವುದಕ್ಕಾಗಿ! ಯೋಧನ ಭಾವುಕ ನುಡಿ

ಪುಲ್ವಾಮದಲ್ಲಿ ನಮ್ಮ 44 ಯೋಧರು ಹುತಾತ್ಮರಾದರು ಎಂಬ ಸುದ್ದಿ ಕೇಳಿ ದೇಶದ ಪ್ರತಿ ಪ್ರಜೆಯ ಕಣ್ಣೂ ಅರಿವಿಲ್ಲದೆ ಒದ್ದೆಯಾಗಿದೆ. ಅವರೆಲ್ಲರ ಕುಟುಂಬಸ್ಥರ ಸ್ಥಿತಿ ಕಂಡು ಕರುಳು ಕಿವುಚಿದೆ. ಅವರಿಗೆಲ್ಲ ನಮ್ಮಿಂದ ಏನೂ ಮಾಡಲಾಗುವುದಿಲ್ಲವಲ್ಲ ಎಂಬ ಅಸಹಾಯಕತೆ ನಮ್ಮನ್ನು ನೋಯಿಸಿದೆ...

ಇಂಥ ದುಃಖದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯೋಧನೊಬ್ಬನ ಸ್ವಗತದಂತೆ ತೋರುವ ಪದ್ಯವೊಂದು ಹರಿದಾಡಿ ಗಂಟಲನ್ನು ಕಟ್ಟಿಹಾಕಿದೆ. ನಮಗಾಗಿ ನಿಮ್ಮ ಪ್ರಾಣ ತೆರುವ ನೀವಲ್ಲವೆ ದೇವರು ಎಂದು ಹೃದಯದಾಳದಲ್ಲಿ ಕೃತಜ್ಞತೆಯ ಒರತೆಯೊಂದು ಒಸರಿದೆ...

ನಾನು ಯೋಧ, ಹುಟ್ಟಿದ್ದೇ ಸಾಯುವುದಕ್ಕಾಗಿ...

I am a soldier born to die emotional lines by a soldier

ನಾನು ಯುದ್ಧದಲ್ಲಿ ಮಡಿದರೆ ಪೆಟ್ಟಿಗೆಯಲ್ಲಿ ನನ್ನನ್ನಿಟ್ಟು ಮನೆಗೆ ಕಳಿಸಿ...
ನನ್ನ ಎದೆಯ ಮೇಲೆ ನನ್ನೆಲ್ಲ ಪದಕಗಳನ್ನೂ ಇಡಿ
ನನ್ನಮ್ಮನಿಗೆ ಹೇಳಿ, ನಾನು ಸಾಧ್ಯವಾದಷ್ಟು ಪ್ರಯತ್ನಿಸಿದ್ದೇನೆ ಎಂದು
ನಮ್ಮಪ್ಪನಿಗೆ ಹೇಳಿ ಬಾಗಬೇಡ ಎಂದು,
ಅವರಿಗೆ ಇನ್ನುಮುಂದೆ ನನ್ನಿಂದ ಯಾವುದೇ ತಲೆಬಿಸಿ ಇರೋಲ್ಲ...
ನನ್ನ ತಮ್ಮನಿಗೆ ಹೇಳಿ, ಚೆನ್ನಾಗಿ ಓದುವುದಕ್ಕೆ
ಇನ್ನುಮೇಲೆ ನನ್ನ ಬೈಕ್ ಕೀ ಅವನದೇ!
ನನ್ನ ತಂಗಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿ
ಅವಳ ಅಣ್ಣ ದೀರ್ಘ ನಿದ್ದೆಗೆ ಜಾರಿದ್ದಾನೆ...
ನನ್ನ ದೇಶಕ್ಕೆ ಹೇಳಿ, ಅಳಬೇಡ ಎಂದು
ಏಕೆಂದರೆ ನಾನು ಯೋಧ, ಹುಟ್ಟಿದ್ದೇ ಸಾಯುವುದಕ್ಕಾಗಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+