ಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿ 8 ತಿಂಗಳ ನಂತರ ಪತ್ತೆ

Recommended Video

      ನಾಪತ್ತೆಯಾಗಿದ್ದ ಹೈದರಾಬಾದ್ ಮೂಲದ ಟೆಕ್ಕಿ 8 ತಿಂಗಳ ನಂತರ ಪತ್ತೆ | Oneindia Kannada

      ಬೆಂಗಳೂರು, ಜೂನ್ 25: ಕಾಣಿಯಾಗಿದ್ದಾರೆ ಎಂದು ಭಾವಿಸಲಾಗಿದ್ದ‌ ಅಮೇರಿಕದಲ್ಲಿನ‌ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪಿ. ರಾಘವೇಂದ್ರ ರಾವ್ ಸುರಕ್ಷಿತವಾಗಿದ್ದು, ತಮ್ಮ ಕುಟುಂಬದ ಸದಸ್ಯರ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.

      36 ವರ್ಷದ ಟೆಕ್ಕಿ ಅಮೇರಿಕಾದಲ್ಲಿ ವಾಸ ಮಾಡುತ್ತಿದ್ದರು, ಅವರು ಕಳೆದ 8 ತಿಂಗಳ ಹಿಂದೆ ಕಾಣೆಯಾಗಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು, ಆದರೆ ಅಲ್ಲಿ ನಡೆದಿದ್ದೇ ಬೇರೆ, ಅವರು ಕಾಣೆಯಾಗಿರಲಿಲ್ಲ ಬದಲಾಗಿ ಕುಟುಂಬದಿಂದ ಅವರೇ ದೂರ ಉಳಿದಿದ್ದರು.

      ಸಾಮಾಜಿಕ ಜಾಲತಾಣದಲ್ಲಿ ಕಾಣೆಯಾಗಿರುವ ಸುದ್ದಿ ಹಾರಿದಾಡುತ್ತಿದ್ದ ಕಾರಣ ಎಂಟು ತಿಂಗಳ ನಂತರ ನಾನು ಸುರಕ್ಷಿತವಾಗಿದ್ದೇನೆ ಎಂದು ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರಾಘವೇಂದ್ರ ಅವರು ಕಳೆದ ಮೂರು ವರ್ಷಗಳ ಹಿಂದೆ ತಮ್ಮ ಕೆಲಸವನ್ನು ಕಳೆದುಕೊಂಡಿದ್ದರು, ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು ಹಾಗಾಗಿ ಅವರು ತಮ್ಮ ಕುಟುಂಬದವರ ಬಳಿ ಅವರು ಸಂಪರ್ಕಸಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

      Hyderabad software engineer missing in US contacts family after 8 months

      ಅವರು ಪೋಷಕರಿಗೆ ಕರೆ ಮಾಡಿ ಮೊದಲು ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನಂತರ ಇಂಟೆಲ್‌ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ ನಂತರ ಕೌಟುಂಬಿಕ ಕಲಹದಿಂದಾಗಿ ಕೆಲಸವನ್ನು ಕಳೆದುಕೊಂಡೆ ಎಂದು ತಿಳಿಸಿದ್ದಾರೆ. ರಾಘವೇಂದ್ರ ಅವರ ತಂದೆ ಬಂಗಾರಮ್‌ ಹೇಳುವ ಪ್ರಕಾರ ರಾಘವೇಂದ್ರ ಅವರ ವೀಸಾ ಮತ್ತು ಪಾಸ್‌ಪೋರ್ಟ್‌ ಇದೀಗ ಎಕ್ಸ್‌ಪೈರ್‌ ಆಗಿದೆ.

      ಎಲ್ಲರ ಸಹಕಾರದಿಂದಾಗಿ ರಾಘವೇಂದ್ರ ಮತ್ತೆ ನಮ್ಮನ್ನು ಸಂಪರ್ಕಿಸುವಂತಾಗಿದೆ, ಕೆಲವು ಕೌಟುಂಬಿಕ ಸಮಸ್ಯೆಯಿಂದ ನಮ್ಮಿಂದ ದೂರವಾಗಿದ್ದ, ಅವನು ಸುರಕ್ಷಿತವಾಗಿದ್ದಾನೆ ಎನ್ನುವುದು ನಮಗೆ ಸಂತಸ ತಂದಿದೆ. ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ತಿಳಿಸಲಾಗಿದೆ ಎಂದು ಬಂಗಾರಮ್‌ ಮಾಹಿತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+