Hyderabad Metro: ಉಚಿತ ಬಸ್ ಯೋಜನೆ ಎಫೆಕ್ಟ್: 2026ರಲ್ಲಿ 'ಮೆಟ್ರೋ' ಯೋಜನೆ ಮಾರಾಟ.!
ಹೈದರಾಬಾದ್, ಮೇ 13: ಹೈದರಾಬಾದ್ ಮಹಾನಗರದ ಮೆಟ್ರೋ ಯೋಜನೆಯಲ್ಲಿ ಬಹುಪಾಲು ಹೊಂದಿರುವ 'ಎಲ್ ಆಂಡ್ ಟಿ' ಕಂಪನಿಯು (L&T Company) ಮೆಟ್ರೋ ಯೋಜನೆಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಬಸ್ ಯೋಜನೆಯೇ ಕಾರಣ ಎಂದು ಕಂಪನಿ ಬೇಸರ ಹೊರ ಹಾಕಿದೆ.
ಹೌದು, ತೆಲಂಗಾಣ ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣದ 'ಮಹಾಲಕ್ಷ್ಮೀ ಯೋಜನೆ' ಪರಿಚಯಿಸಿದ ಬಳಿಕ ಮೆಟ್ರೋ ಸಾರಿಗೆ ಹಿನ್ನಡೆ ಆಗಿದೆ. ಪ್ರಯಾಣಿಕರು ಮೆಟ್ರೋ ಹತ್ತಲು ನಿರಾಸಕ್ತಿ ವಹಿಸಿದ್ದಾರೆ. ಈ ಕಾರಣದಿಂದ L&T 2026ರ ನಂತರ 'ಹೈದರಾಬಾದ್ ಮೆಟ್ರೋ' (Hyderabad Metro Project) ಯೋಜನೆಯನ್ನು ಮಾರಾಟ ಮಾಡಲು ಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥ ಆರ್.ಶಂಕರ್ ರಾಮನ್ ತಿಳಿಸಿದ್ದಾರೆ.

ಮೆಟ್ರೋದಲ್ಲಿ ಎಲ್ & ಟಿ ಕಂಪನಿಯದ್ದು ಶೇ.90 ಪಾಲು
ಹೈದರಾಬಾದ್ ಮೆಟ್ರೋ ಯೋಜನೆಯಲ್ಲಿ ಎಲ್ & ಟಿ ಕಂಪನಿಯು ಬಹುತೇಕ ಭಾಗ ಶೇಕಡಾ 90 ರಷ್ಟು ಪಾಲು ಹೊಂದಿದೆ. ಬಾಕಿ ಹತ್ತು ರಷ್ಟು ಪಾಲು ತೆಲಂಗಾಣ ಸರ್ಕಾರದ್ದು ಇದೆ. ಇಲ್ಲಿನ ಮೆಟ್ರೋ ಸಾರಿಗೆ ವ್ಯವಸ್ಥೆ ನಿರ್ವಹಣೆಗಾಗಿ ಕಂಪನಿಯು 65 ವರ್ಷಗಳ ರಿಯಾಯಿತಿ ಪಡೆದಿದೆ.
ಹೀಗಿದ್ದಲ್ಲಿ, ಸರ್ಕಾರ ಉಚಿತ ಬಸ್ ಯೋಜನೆಯಿಂದ ಮೆಟ್ರೋ ಸಂಚಾರಕ್ಕೆ ಹಿನ್ನಡೆಯಾಗಿದೆ. ಮೆಟ್ರೋಗೆ ಬರುವವರ ಸಂಖ್ಯೆಯಲ್ಲಿ ಭಾರೀ ಇಳಿ ಮುಖವಾಗಿದೆ. ಇದರಿಂದ ಕಂಪನಿಯಗೆ ನಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.
ಮೆಟ್ರೋ ಮೇಲೆ ಆಸಕ್ತಿ ಕಳೆದುಕೊಂಡ ಜನರು
ಈ ಕುರಿತು ಎಲ್ & ಟಿ ಅಧ್ಯಕ್ಷ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಆರ್.ಶಂಕರ್ ರಾಮನ್ ಅವರು ಬ್ಯುಸಿನೆಸ್ ಟುಡೆ ಟಿವಿ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಬಸ್‌ಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳ ಆಗಿಲ್ಲ. ಇರುವ ಬಸ್‌ಗಳಿಗೆ ಮಹಿಳೆಯರು ಹತ್ತುವ ಸಂಖ್ಯೆ ಭಾರೀ ಏರಿಕೆ ಆಗಿದೆ. ಇತ್ತ ಮೆಟ್ರೋದಲ್ಲಿ ಓಡಾಡುವ ಪುರುಷರ ಸಂಖ್ಯೆ ಅಷ್ಟಕಷ್ಟೆ. ಜನರು ಮೆಟ್ರೋ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಸದ್ಯ ಸಾರಿಗೆ ವ್ಯವಸ್ಥೆಯಲ್ಲಿ ಲಿಂಗಾಧಾರಿತ ಹಂಚಿಕೆ ಆಗುತ್ತಿದೆ. ಮಹಿಳೆಯರು ಬಸ್‌ಗಳಲ್ಲಿ ಟಿಕೆಟ್ ಶುಲ್ಕ ಇಲ್ಲದೇ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ನಾನ್ ಎಸಿ ಬಸ್‌ನಲ್ಲಿ ಉಚಿತ ಯೋಜನೆಯಡಿ ಮಹಿಳೆಯರು ಸಂಚಾರ ಹೆಚ್ಚಾಗಿದೆ. 35 ರೂಪಾಯಿ ಇರುವ ಮೆಟ್ರೋ ಪ್ರಯಾಣವನ್ನು ಪುರುಷರು ಮಾಡುತ್ತಿದ್ದಾರೆ.
3,000 ಕೋಟಿ ರೂ. ಬಡ್ಡಿ ರಹಿತ ಸಾಲ
ಈ ಕಾರಣಗಳಿಂದ ನಿತ್ಯ ಮೆಟ್ರೋ ದಲ್ಲಿ ಕೇವಲ 4. 80 ಲಕ್ಷ ಜನರು ಓಡಾಡುತ್ತಿದ್ದಾರೆ. ಇದರಿಂದ ಮೆಟ್ರೋ ಯೋಜನೆಯ ಹೊರೆ ಹಗುರಗೊಳಿಸಲು ಆಗುವುದಿಲ್ಲ. ಅಲ್ಲದೇ ತೆಲಂಗಾಣ ಸರ್ಕಾರದೊಂದಿಗೆ ಬಡ್ಡಿ ಇಲ್ಲದೇ ಮರಪಾವತಿಸಲು ಎಲ್ & ಟಿ ಕಂಪನಿಯು 3,000 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ಈ ಯೋಜನೆಗೆ ಅತ್ಯುತ್ತಮವಾಗಿದೆ. ಯೋಜನೆಗಳ ಬಳಿಕ ಸಾರ್ವಜನಿಕ ಸಾರಿಗೆಗೆ ಆದ್ಯತೆ ಸಿಕ್ಕಿದೆ. ಬಸ್ ಸಂಖ್ಯೆ ಹೆಚ್ಚಿಸದ ಕಾರಣ ಅಧಿಕ ಮಾಲಿನ್ಯ ಉಂಟಾಗುವುದನ್ನು ತಡೆಯಲಾಗಿದೆ ಎಂದು ಅವರು ಸರ್ಕಾರ ಯೋಜನೆಗೆ ಶ್ಲಾಘಿಸಿದರು.












Click it and Unblock the Notifications