ಮಾಂಸಾಹಾರ ಕೇಳಿದ್ದಕ್ಕೆ ಇಟ್ಟಿಗೆಯಿಂದ ಪತಿ ಜೀವ ತೆಗೆದ ಪತ್ನಿ.! ಸಾಲದ್ದಕ್ಕೆ ಅದನ್ನೂ ಕಿತ್ತುಕೊಳ್ಳಲು ಮುಂದಾದ್ರು..
ಉತ್ತರಪ್ರದೇಶ, ಆಗಸ್ಟ್, 10: ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಹುತೇಕ ಮಂದಿ ಮಾಂಸಾಹಾರ ಸೇವೆನೆ ಮಾಡುವುದಿಲ್ಲ. ಒಂದು ವೇಳೆ ತಿಂದರೆ, ಮನೇಲಿ ಬೈಗಳ ಪೂಜೇ ಗ್ಯಾರಂಟಿ ಹೊರತು ಹೊಡೆಯುವ ಹಂತಕ್ಕೆ ಹೋಗುವುದಿಲ್ಲ. ಆದರೆ, ಮಾಂಸಹಾರ ಕೇಳಿದ್ದಕ್ಕೆ ಪತ್ನಿ ಪತಿಯನ್ನು ಮರ್ಡರ್ ಮಾಡಿ ಪೊಲೀಸರ ಮುಂದೆಯೇ ಮಿದುಳು ತೆಗೆಯುವ ಹಂತಕ್ಕೆ ಇಳಿದಿರುವ ಘಟನೆಯೊಂದು ನಡೆದಿದೆ.
ಕೆಲವೇ ಮಂದಿ ಮಾತ್ರ ಶ್ರಾವಣದಲ್ಲೂ ಕೂಡ ಮಾಂಸಹಾರ ಸೇವನೆ ಮಾಡುತ್ತಾರೆ. ಇನ್ನು ಇದೀಗ ಶ್ರಾವಣ ಮಾಸ ಆರಂಭವಾಗಿದ್ದು, ಇದೇ ವೇಳೆ ಪತಿ ಮಾಂಸಹಾರ ಕೇಳಿದ್ದಕ್ಕೆ ಪತ್ನಿಗೆ ಪತಿ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಂದ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

ಸತ್ಯಪಾಲ್ (42) ಮೃತ ವ್ತಕ್ತಿಯಾಗಿದ್ದಾರೆ. ಇವರು ಮಾಂಸಹಾರ ಪ್ರಿಯರಾಗಿದ್ದು, ಅದು ಇಲ್ಲದಿದ್ದರೆ ಪ್ರಾಣವೇ ಹೋಗುತ್ತದೆ ಅನ್ನುವ ರೀತಿಯಲ್ಲಿ ಅಭ್ಯಾಸ ಮಾಡಿಕೊಂಡಿದ್ದರಂತೆ. ಇನ್ನೂ ಶ್ರಾವಣ ಮಾಸ ಆಗಿದ್ದರಿಂದ ಮಾಂಸಹಾರ ಮಾಡಿಕೊವುದಕ್ಕೆ ಪತ್ನಿ ನಿರಾಕರಿಸಿದ್ದಳು. ಬಳಿಕ ಸಿಟ್ಟಿನಿಂದ ಯಂಡ ಕುಡಿದ ಅಮಲಿನಲ್ಲಿ ಸತ್ಯಾಪಾಲ್ ಪತ್ನಿಯ ಮೇಲೆ ಹಲ್ಲೆ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
VIDEO | A woman allegedly killed her husband by crushing his head by bricks following a dispute in UP's #Shahjahanpur.
— Press Trust of India (@PTI_News) August 10, 2024
"There was a dispute between husband and wife over some issue following which the woman attacked her husband with a brick outside their house. He died on the… pic.twitter.com/gl8HKK15t9
ತನ್ನ ಮೇಲೆ ಹಲ್ಲೆ ಮಾಡಲು ಮುಂದಾದಾಗ ರೊಚ್ಚಿಗೆದ್ದ ಪತ್ನಿ ಪತಿಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದು, ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನುವ ಪುತ್ರನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪತಿಯ ಸಾವಿನ ಬಳಿಕ ಪತ್ನಿಯು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅಲ್ಲದೆ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ಸಮ್ಮುಖದಲ್ಲೇ ಪತಿಯ ತಲೆಯೊಳಗೆ ಕೈಹಾಕಿ ಮಿದುಳು ತೆಗೆಯಲು ಮುಂದಾಗಿದ್ದಾಳೆ. ಬಳಿಕ ಪೊಲೀಸರು ತಡೆದಿದ್ದಾರೆ. ಅಲ್ಲದ, ಆಕೆಯ ಮಾನಸಿಕ ಆರೋಗ್ಯದ ಸ್ಥಿತಿ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಲಿದ್ದಾರೆ. ಇನ್ನು ಇವರು ವಿವಾಹವಾಗಿ 20 ವರ್ಷ ಕಳೆದಿವೆ ಎಂದು ತಿಳಿದುಬಂದಿದೆ.
ಆಹತ್ಮಹತ್ಯೆ ಮಾಡಿಕೊಂಡ ಯುವಕ: ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ಮೂಲಕ ಮೆಟ್ರೋ ಸುದ್ದಿಯಾಗುತ್ತಲೇ ಇದೆ. ಇನ್ನು ಇದೀಗ 49 ವರ್ಷದ ವ್ಯಕ್ತಿಯೊಬ್ಬರು ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಇಂದು (ಆಗಸ್ಟ್ 08) ಮಧ್ಯಾಹ್ನ ನಡೆದಿದೆ.
ಅದರಲ್ಲೂ ಬೆಂಗಳೂರಿನ ನಮ್ಮ ಮಟ್ರೋ ಭಾರೀ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ನಗರದಲ್ಲಿ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಅಷ್ಟೇ ಅಲ್ಲದೆ, ಈ ಹಿಂದೆಯೂ ಸಹ ಹಲವರು ಆಹತ್ಮಹತ್ಯೆಗೆ ಯತ್ನಿಸಿದ ಘಟನೆಗಳು ಕೂಡ ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ನಡೆದಿವೆ. ಹಾಗೆಯೇ ಇಂತಹಹದ್ದೇ ಘಟನೆಯೊಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿನ್ನೆ (ಆಗಸ್ಟ್ 08) ನಡೆದಿದೆ.
ಸೂರಜ್ಮಲ್ ಮೆಟ್ರೋ ನಿಲ್ದಾಣದಲ್ಲಿ ನಿನ್ನೆ ಮಧ್ಯಾಹ್ನದ ವೇಳಗೆ ಫ್ಲಾಟ್ಫಾರ್ಮ್ 1ರಿಂದ ರಸ್ತೆಗೆ ಜಿಗಿದು 49 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿದ್ದು, ಈ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹರೀಶ್ ಎಂದು ಗುರುತಿಸಲಾಗಿದ್ದು, ಈತ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಿದೆ.
ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭದ್ರತಾ ಸಿಬ್ಬಂದಿಗಳು ವ್ಯಕ್ತಿಯನ್ನು ರಕ್ಷಿಸಲು ಮುಂದಾದರೂ ಕೂಡ ನಿರಾಕರಿಸಿ ರಸ್ತೆಗೆ ಜಿಗಿದಿದ್ದು, ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications