TTD Donation: ತಿರುಮಲ ಶ್ರೀಗಳಿಗೆ ಬೆಂಗಳೂರಿನ ಭಕ್ತರಿಂದ ಭಾರೀ ದೊಡ್ಡ ಮೊತ್ತದ ದೇಣಿಗೆ
ತಿರುಮಲ ತಿರುಪತಿಗೆ ಸಾಕಷ್ಟು ಭಕ್ತರು ಪ್ರತಿದಿನ ಆಗಮಿಸುತ್ತಾರೆ. ಬೇಡಿದ ವರವನ್ನು ನೀಡುವ ತಿಮ್ಮಪ್ಪನಿಗೆ ಹರಕೆ ತೀರಿಸಿ ಕಾಣಿಕೆ ರೂಪದಲ್ಲಿ ಹಣವನ್ನು ನೀಡುತ್ತಾರೆ. ಹೀಗೆ ಶ್ರೀಮಂತ ದೇವರಾದ ಶ್ರೀವಾರಿ ಹೆಸರಿನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ಹಣ ದೇಣಿಗೆ ರೂಪದಲ್ಲಿ ಸಂಗ್ರಹವಾಗುತ್ತದೆ. ಅಂತೆಯೇ ತಿರುಮಲ ಶ್ರೀಗಳಿಗೆ ಬೆಂಗಳೂರಿನ ಭಕ್ತರೊಬ್ಬರು ಭಾರೀ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ.
ಬೆಂಗಳೂರಿನ ಎಬಿಯಮ್ ಇನ್‌ಫ್ರಾಟೆಕ್ ಎಸ್.ಎನ್.ಬಚ್ಚೇಗೌಡ ಅವರು ಟಿಟಿಡಿ ಎಸ್‌ವಿ ಅನ್ನಪ್ರಸಾದ ಟ್ರಸ್ಟ್‌ಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ತಿರುಮಲದ ಗೋಕುಲಂ ವಿಶ್ರಾಂತಿ ಗೃಹದಲ್ಲಿ ಟಿಟಿಡಿ ಇಒ ಜಯ್ ಶ್ಯಾಮಲಾ ರಾವ್ ಅವರಿಗೆ 10 ಲಕ್ಷ ರೂ.ಯ ಚೆಕ್ ಅನ್ನು ಬಚ್ಚೇಗೌಡ ಅವರು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಂದ್ರಗಿರಿ ಶಾಸಕ ಪುಲಿವರ್ತಿ ನಾಣಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್
ತಿರುಮಲದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ಶುದ್ಧೀಕರಣ ಆರಂಭಿಸಲಾಗಿದೆ. ಶುದ್ಧೀಕರಣ ಅಂದರೆ ದೇವಸ್ಥಾನವನ್ನು ಸ್ವಚ್ಚಗೊಳಿಸುವುದು ಎಂದಲ್ಲ. ಕ್ಷೇತ್ರ ಮಟ್ಟದಲ್ಲಿ ಅವಲೋಕಿಸಿ ಬದಲಾವಣೆ, ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯಗಳು ಆಗುತ್ತಿವೆ. ಸಿಎಂ ಸೂಚನೆಯಂತೆ ತಿರುಮಲ ಶ್ರೀಗಳ ದರ್ಶನಕ್ಕೆ ಬರುವ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ.
ಈ ನಡುವೆ ತಿರುಮಲ ಶ್ರೀವಾರಿ ಆನ್‌ಲೈನ್ ದರ್ಶನ ಟಿಕೆಟ್ ನೀಡುವ ವ್ಯವಸ್ಥೆಯಲ್ಲಿ ದೋಷಗಳಿವೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲೇ ಆನ್‌ಲೈನ್ ಟಿಕೆಟ್ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದು ಇವೋ ಶ್ಯಾಮಲಾ ರಾವ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಳ ದರ್ಶನಕ್ಕೆ ತೆರಳುವ ಭಕ್ತರ ಸರತಿ ಸಾಲುಗಳ ಮೇಲೆ ನಿಗಾ ಇಡಲು ವಿಶೇಷ ಅಧಿಕಾರಿಯನ್ನು ನೇಮಿಸಲಾಗುತ್ತದೆ.

ಅಲ್ಲದೆ ಅನ್ನ ಪ್ರಸಾದದ ಗುಣಮಟ್ಟ ಹೆಚ್ಚಿಸಲು ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಲಾಗಿದೆ. ಅಗತ್ಯ ಬದಲಾವಣೆ ಮಾಡಿ ಗುಣಮಟ್ಟ ಹೆಚ್ಚಿಸಲಾಗಿದೆ. ಸರತಿ ಸಾಲಿನಲ್ಲಿ ಭಕ್ತರಿಗೆ ಅನ್ನ ಪ್ರಸಾದ ಹಾಗೂ ಕುಡಿಯುವ ನೀರನ್ನು ನಿರಂತರವಾಗಿ ವಿತರಿಸಲಾಗುತ್ತಿದೆ. ಸರತಿ ಸಾಲಿನಲ್ಲಿ ಹೊಸದಾಗಿ ಮೂರು ಅನ್ನಪ್ರಸಾದ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತಿರುಮಲದ ತರಿಗೊಂಡ ವೆಂಗಮಾಂಬ ಅನ್ನಪ್ರಸಾದ ಸಮುದಾಯದಲ್ಲಿ ನಿತ್ಯ ಎರಡು ಲಕ್ಷ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಗುತ್ತಿದೆ ಎಂದು ಟಿಟಿಡಿ ಇಒ ತಿಳಿಸಿದ್ದಾರೆ.
ಇನ್ನೂ ಲಡ್ಡು ಪ್ರಸಾದದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಗುಣಮಟ್ಟದ ತುಪ್ಪ ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಕಚ್ಚಾ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಡಿಯಲ್ಲಿ ಲ್ಯಾಬ್ ಅನ್ನು ಸಹ ಸ್ಥಾಪಿಸಲಾಗುತ್ತಿದೆ.
ಇಷ್ಟು ಮಾತ್ರವಲ್ಲದೆ ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ಕೊಟ್ಟಿದೆ. ಸರ್ವದರ್ಶನ ಭಕ್ತರಿಗೆ ವಾರಕ್ಕೆ 1.65 ಲಕ್ಷ ದರ್ಶನ ಟೋಕನ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಟಿಟಿಡಿಯ ಐಟಿ ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ.












Click it and Unblock the Notifications