ವೈರಲ್ ವಿಡಿಯೋ; ಸೆಕೆಂಡ್‌ನಲ್ಲಿ ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯಿರಿ
ಬೆಂಗಳೂರು, ಜನವರಿ 09 : ಸಸ್ಯಹಾರಿ ಮತ್ತು ಮಾಂಸಹಾರಿಗಳ ನೆಚ್ಚಿನ ಆಹಾರ ಮೊಟ್ಟೆ. ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂಬ ಮಾತುಗಳ ಚಾಲ್ತಿಯಲ್ಲಿದೆ. ಅಪಾರ ಪೌಷ್ಠಿಕಾಂಶಗಳ ಕಣಜ ಮೊಟ್ಟೆ, ಪ್ರತಿದಿನ ಬೇಯಿಸಿದ ಮೊಟ್ಟೆ ತಿನ್ನುವ ಸಾಕಷ್ಟು ಜನರಿದ್ದಾರೆ.
ಬೇಯಿಸಿದ ಮೊಟ್ಟೆ ತಿನ್ನುವುದು ಹಲವರಿಗೆ ಇಷ್ಟ. ಆದರೆ, ಮೊಟ್ಟೆಯನ್ನು ಎಷ್ಟು ಹೊತ್ತು ಬೇಯಿಸಬೇಕು. ಅದರ ಸಿಪ್ಪೆಯನ್ನು ನಾಜೂಕಾಗಿ ಹೇಗೆ ಸುಲಿಯಬೇಕು? ಎಂಬುದು ಹಲವರ ಮುಂದಿರುವ ಸವಾಲು. ಸುಲಭವಾಗಿ ಮೊಟ್ಟೆ ಸಿಪ್ಪೆ ಬಿಡಿಸುವ ವಿಡಿಯೋ ಈಗ ವೈರಲ್ ಆಗಿದೆ.
ಕೇವಲ 10 ಸೆಕೆಂಡ್‌ಗಳ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. 3.76 ಮಿಲಿಯನ್ ಜನರು ವಿಡಿಯೋ ನೋಡಿದ್ದಾರೆ. 75.1 ಸಾವಿರ ಜನರು ವಿಡಿಯೋ ಇಷ್ಟಪಟ್ಟಿದ್ದಾರೆ. 27.9 ಸಾವಿರ ಜನರು ಮೊಟ್ಟೆ ಸಿಪ್ಪೆ ತೆಗೆಯುವ ಸುಲಭ ವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ.

ಅಷ್ಟಕ್ಕೂ ವಿಡಿಯೋದಲ್ಲಿರುವುದು ಹಲವು ಜನರಿಗೆ ಗೊತ್ತಿರುವ ಸುಲಭವಾದ ತಂತ್ರವೇ. ವ್ಯಕ್ತಿಯೊಬ್ಬರು ಬೇಯಿಸಿದ ಮೊಟ್ಟೆಯನ್ನು ಗಾಜಿನ ಲೋಟಕ್ಕೆ ಹಾಕಿ, ಅದಕ್ಕೆ ನೀರು ತುಂಬಿ ಕೆಲವು ಸೆಕೆಂಡ್ ಅಲ್ಲಾಡಿಸುತ್ತಾರೆ. ಬಳಿಕ ಮೊಟ್ಟೆಯ ಸಿಪ್ಪೆ ಸುಲಭವಾಗಿ ಬಿಡುತ್ತದೆ.
ಈ ವಿಡಿಯೋ ನೋಡಿ ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯಲು ಹೋಗಿ ಹಲವರು ವಿಫಲವಾಗಿದ್ದಾರೆ. ಅವರು ಆ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿ ಒಂದು ಮೊಟ್ಟೆಯ ಕಥೆ ಕುರಿತ ಚರ್ಚೆಯನ್ನು ಮುಂದುವರೆಸಿದ್ದಾರೆ.
ವೈರಲ್ ಆಗಿರುವ ಟ್ವೀಟ್
Apparently, I've been cracking open hard boiled eggs wrong my entire life. Genius...
— Rex Chapman🏇🏼 (@RexChapman) January 5, 2020
pic.twitter.com/fcCIU5Oa9i












Click it and Unblock the Notifications