ರೈಲ್ವೆ ರಿಸರ್ವೇಷನ್ ಚಾರ್ಟ್ ಆನ್ ಲೈನ್ ನಲ್ಲೇ ನೋಡಿ

ನವದೆಹಲಿ, ಜನವರಿ 12: ಅನ್​ಲೈನ್ ಮೂಲಕ ರೈಲ್ವೆ ಟಿಕೆಟ್​ ಕಾಯ್ದಿರಿಸುವ ಸೌಲಭ್ಯಕ್ಕೆ ಇನ್ನಷ್ಟು ಮಾಹಿತಿಯನ್ನು ಸೇರಿಸಲಾಗಿದೆ. ಈಗ ಭಾರತೀಯ ರೈಲ್ವೇಯು ಹೊಸ ಅನುಕೂಲತೆಯನ್ನು ಪ್ರಯಾಣಿಕರು ಬಳಸಿಕೊಳ್ಳುವಂತೆ ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಟ್ವೀಟ್ ಮಾಡಿದ್ದಾರೆ.

ಐಆರ್​ಸಿಟಿಸಿ ಮೂಲಕ ಟಿಕೆಟ್ ಬುಕ್ ಮಾಡಿಸುವ ಪ್ರಯಾಣಿಕರು ಇನ್ಮುಂದೆ ವೆಬ್​ ಮತ್ತು ಮೊಬೈಲ್​ಗಳಲ್ಲಿ ರಿಸರ್ವೇಷನ್ ಚಾರ್ಟ್ ಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇದರಿಂದ ಟಿಕೆಟ್​ ಬುಕ್​ ಮಾಡಿದ ಪ್ರಯಾಣಿಕರಿಗೆ ಖಾಲಿ ಇರುವ ಬರ್ತ್​ಗಳ ಮಾಹಿತಿ ದೊರೆಯಲಿದೆ.

ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಟ್ವೀಟ್: ಇನ್ನು ಕಿರಿಕಿರಿ ರಹಿತ ಪ್ರಯಾಣ. ಪ್ರಯಾಣಿಕರು ಖಾಲಿ ಇರುವ, ಬುಕ್​ ಆಗಿರುವ ಸೀಟುಗಳ ಮಾಹಿತಿ ಇರುವ ಚಾರ್ಟ್​ನ್ನು ನೋಡಬಹುದು ಎಂದು ಟ್ವೀಟಿಸಿದ್ದಾರೆ.

How to check your train reservation chart online

ರೈಲು ಹೊರಡುವ ನಾಲ್ಕು ತಾಸುಗಳ ಮೊದಲು ಚಾರ್ಟ್​ ಸಿದ್ಧವಾಗಲಿದೆ. ಕೊನೆಯ ಚಾರ್ಟ್​ನ್ನು ರೈಲು ಹೊರಡುವ ಮೂವತ್ತು ನಿಮಿಷಗಳ ಮೊದಲು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ, ಎರಡು ಪಟ್ಟಿಯನ್ನು ವೀಕ್ಷಿಸಬಹುದು.

ಆನ್ ಲೈನ್ ನಲ್ಲಿ ರಿಸರ್ವೇಷನ್ ಚಾರ್ಟ್ ಪರಿಶೀಲಿಸುವುದು ಹೇಗೆ?

* ಐಆರ್​ಸಿಟಿಸಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಲಾಗಿನ್​ ಆಗಿ. ಚಾರ್ಟ್​/ವೆಕೆನ್ಸಿ ಆಯ್ಕೆ ಮಾಡಿಕೊಂಡರೆ ಇನ್ನೊಂದು ​ಪುಟ ತೆರೆಯುತ್ತದೆ.
* ನಿಮ್ಮ ಪ್ರಯಾಣದ ವಿವರ ಅಂದರೆ, ಟ್ರೈನ್ ಸಂಖ್ಯೆ, ಪ್ರಯಾಣದ ದಿನಾಂಕ, ಇಳಿಯುವ ಸ್ಥಳಗಳನ್ನು ನೀಡಿದರೆ ನಿಮಗೆ Get Train Chart ವಿವರ ದೊರೆಯುತ್ತದೆ.
*ನಿಮ್ಮ ಪ್ರಯಾಣದ ಪಟ್ಟಿ ಕಂಡ ತಕ್ಷಣ, ಅದರಲ್ಲಿ ಯಾವ ಕ್ಲಾಸ್​, ಕೋಚ್​ ನಂಬರ್​ಗಳ ವಿವರಗಳನ್ನು ಪಡೆದುಕೊಳ್ಳಬಹುದು, ಇದರಲ್ಲಿ ಖಾಲಿ ಇರುವ ಬರ್ತ್ ಕೂಡಾ ಸಿಗಲಿದೆ.
* ನಿಮಗೆ ನಿಗದಿಗೊಳಿಸಿದ ಕೋಚ್​ ನಂಬರ್​ ಮೇಲೆ ಕ್ಲಿಕ್​ ಮಾಡಿದರೆ ಅಲ್ಲಿನ ಎಲ್ಲ ವಿವರಗಳು ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+