ಕೇರಳ ಸಿಎಂ ಗಾದಿಗೆ ಹಕ್ಕು ಸ್ಥಾಪಿಸಿದ ವಿಜಯನ್

ನವದೆಹಲಿ, ಮೇ, 20: ಕೇರಳದ ಮುಖ್ಯಮಂತ್ರಿ ಹುದ್ದೆಗೆ ಉಂಟಾಗಿದ್ದ ಗೊಂದಲಗಳಿಗೆ ಸಿಪಿಐಎಂ ಅಂತ್ಯ ಹಾಡಿದೆ. ಪಿಣರಾಯಿ ವಿಜಯನ್(72ವರ್ಷ) ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವುದು ಪಕ್ಕಾ ಆಗಿದೆ.

ಚುನಾವಣೆ ಆರಂಭದಲ್ಲಿ ವಿಜಯನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಬಂದಾಗ ಕೊನೆ ಘಳಿಗೆಯಲ್ಲಿ 'ನಾನು ರೇಸ್ ನಲ್ಲಿ ಇದ್ದೇನೆ' ಎಂದು ಹೇಳುವ ಮೂಲಕ ಅಚ್ಯುತಾನಂದನ್ ಕುತೂಹಲ ಹುಟ್ಟುಹಾಕಿದ್ದರು. ಈ ಬಾರಿಯೂ 92ವರ್ಷದ ಅಚ್ಯುತಾನಂದನ್ ಅವರಿಗೆ ಸಿಎಂ ಪಟ್ಟ ಎಂದು ಹೇಳಲಾಗಿತ್ತು. ಇದೀಗ ವಿಜಯನ್ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಲಾಗಿದೆ.[ಕೇರಳ ಎಡರಂಗದ ಕೈ ಸೇರಿದ್ದು ಹೇಗೆ?]

kerala

ಅಚ್ಯುತಾನಂದನ್ ಅಸಮಾಧಾನ:
ಆದರೆ ಈ ನಿರ್ಧಾರಕ್ಕೆ ಅಚ್ಯುತಾನಂದನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ಆರು ತಿಂಗಳು ತನಗೆ ಮುಖ್ಯಮಂತ್ರಿ ಹುದ್ದೆ ನೀಡಿ ನಂತರ ಅಧಿಕಾರ ಹಸ್ತಾಂತರ ಮಾಡಿ ಎಂಬ ಇರಾದೆಯನ್ನು ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. [ಪಂಚರಾಜ್ಯಗಳ ಚುನಾವಣೆಯಲ್ಲಿ ಗೆದ್ದವರು-ಬಿದ್ದವರು]

ಇಬ್ಬರು ನಾಯಕರ ನಡುವೆ ಹಿಂದೆಯೂ ಭಿನ್ನಾಭಿಪ್ರಾಯಗಳು ಉದ್ಘವವಾಗಿದ್ದವು. 2006 ರಿಂದ 2011 ರ ಅವಧಿಯಲ್ಲಿ ಅಚ್ಯುತಾನಂದನ್ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದಲ್ಲಿ ಅನೇಕ ಸಾರಿ ಆಂತರಿಕ ಸಂಘರ್ಷ ಎದುರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+