Chandrayaan-3: ಭಾರತದ ಚಂದ್ರಯಾನ ಸಕ್ಸಸ್, ಪಾಕಿಸ್ತಾನ ಹೇಳಿದ್ದೇನು?
ಭಾರತ ಚಂದ್ರಯಾನ ಯೋಜನೆ ಮೂಲಕ ಇಡೀ ಜಗತ್ತಿನ ಗೌರವ ಗಳಿಸಿದೆ. ಲ್ಯಾಂಡರ್‌ನ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿರುವ ಭಾರತ ಮಹತ್ವದ ಸಾಧನೆ ಮಾಡಿದೆ. ಆದರೆ ಈ ವಿಚಾರದಲ್ಲಿ ಪದೇ ಪದೆ ಭಾರತದ ಬಗ್ಗೆ ಹೇಳಿಕೆ ನೀಡುವ ಪಾಕಿಸ್ತಾನದ ಪ್ರತಿಕ್ರಿಯೆ ಏನು? ಭಾರತದ ಚಂದ್ರಯಾನ-3 ಯೋಜನೆ ಕುರಿತು ಪಾಕ್ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಪಾಕಿಸ್ತಾನಕ್ಕೆ ಗೊತ್ತಿರುವುದು ಒಂದೇ ಒಂದು ವಿಚಾರ, ಅದು ಬಾಂಬ್ ಅಥವಾ ಮಿಸೈಲ್ ಉಡಾಯಿಸುವುದು. ಇದನ್ನ ಬಿಟ್ಟು ಆಕಾಶಕ್ಕೆ ರಾಕೆಟ್ ಉಡಾಯಿಸುವ ಯತ್ನವನ್ನ ಪಾಕ್ ಎಂದೂ ಮಾಡಲಿಲ್ಲ. ಆದರೆ ಭಾರತ ಎಲ್ಲಾ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದೆ. ಇದು ಪಾಕ್ ರಾಜಕಾರಣಿಗಳಿಗೆ ತಡೆಯಲು ಆಗಲ್ಲ, ಹೀಗಾಗಿ ಆಗಾಗ ಭಾರತದ ಬಗ್ಗೆ ಕಮೆಂಟ್ ಮಾಡಿ ಕೆಂಗಣ್ಣಿಗೆ ಗುರಿಯಾಗುತ್ತಾರೆ ಪಾಕ್ ರಾಜಕಾರಣಿಗಳು. ಇದೀಗ ಇವರೆಲ್ಲರ ಬಾಯಿ ಬಂದ್ ಆಗಿದ್ದು, ಇಸ್ರೋ ಇಂದು ಮಾಡಿದ ಸಾಧನೆ ನೋಡಿ ತಣ್ಣಗಾಗಿದ್ದಾರೆ. ಆದರೂ ಒಬ್ಬೇ ಒಬ್ಬ ಪಾಕಿಸ್ತಾನದ ರಾಜಕಾರಣಿ ಭಾರತದ ಸಾಧನೆಯ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.

ಪಾಕಿಸ್ತಾನ ರಾಜಕಾರಣಿಯ ಮದಾಳದ ಮಾತು
ಹೌದು ಪಾಕಿಸ್ತಾನದ ಮಾಜಿ ಐಟಿ ಸಚಿವ ಫಾವದ್ ಚೌಧರಿ ಭಾರತದ ಚಂದ್ರಯಾನ ಸಾಧನೆ ಬಗ್ಗೆ ಹೊಗಳಿದ್ದಾರೆ. ಹಿಂದೆ ಭಾರತದ ಚಂದ್ರಯಾನ ಯೋಜನೆ ಕುರಿತು ಕಮೆಂಟ್ ಮಾಡಿ ಬಾಯಿಗೆ ಬಂದಂತೆ ಬೈಗುಳ ತಿಂದಿದ್ದರು ಫಾವದ್ ಚೌಧರಿ. ಅದರಲ್ಲೂ ಚಂದ್ರಯಾನ-2 ಸೋತು ಹೋದಾಗ ಇದೇ ಫಾವದ್ ಚೌಧರಿ ಬಾಯಿಗೆ ಬಂದಂತೆ ಟ್ವೀಟ್ ಮಾಡಿ, ಹೇಳಿಕೆ ನೀಡಿ ಬೈಯಿಸಿಕೊಂಡಿದ್ದರು. ಆದರೆ ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಇದೀಗ ಫಾವದ್ ಚೌಧರಿ ಭಾರತದ ಸಾಧನೆ ಬಗ್ಗೆ ಹಾಡಿ ಹೊಗಳಿದ್ದಾರೆ. ಹಾಗಾದರೆ ಇಸ್ರೋ ಬಗ್ಗೆ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು ಏನು?

ಇಸ್ರೋ ಗ್ರೇಟ್ ಎಂದ ಪಾಕ್ ರಾಜಕಾರಣಿ
ಟ್ವೀಟ್ ಮೂಲಕ ಫಾವದ್ ಚೌಧರಿ ಭಾರತಕ್ಕೆ ಶುಭ ಕೋರಿದ್ದು, ಇದು ಭಾರತಕ್ಕೆ ಎಂತಹ ಅದ್ಭುತ ಘಳಿಗೆ ಇಸ್ರೋ. ಚಂದ್ರಯಾನ-3 ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು, ಇಸ್ರೋದ ಅಧ್ಯಕ್ಷ ಸೋಮನಾಥ್ ಅವರ ಜೊತೆ ಯುವ ವಿಜ್ಞಾನಿಗಳು ಸಂಭ್ರಮಿಸಿದ್ದನ್ನು ನೋಡಿದೆ. ಕೇವಲ ಕನಸು ಕಾಣುವ ಯುವಕರು ಜಗತನ್ನು ಬದಲಾಯಿಸಲು ಸಾಧ್ಯ.. ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾರತದ ಚಂದ್ರಯಾನ ಸಾಧನೆ ಬಗ್ಗೆ ಪಾಕ್ ಸಲಾಂ ಹೊಡೆದಿದೆ. ಪಾಕಿಸ್ತಾನ ಮಾತ್ರವಲ್ಲ ಜಗತ್ತೇ ಭಾರತದ ಸಾಧನೆಗೆ ತಲೆಬಾಗಿದೆ.
What a great moment for #ISRO as #Chandrayaan3 lands on the Moon, I can see lots of young scientists celebrating this moment with Mr Somnat Chairman ISRO, only Younger generation with dreams can change the world … good luck
— Ch Fawad Hussain (@fawadchaudhry) August 23, 2023
ಆಡಿಕೊಂಡವರ ಬಾಯಲ್ಲೇ ಹೊಗಳಿಕೆ!
2019ರಲ್ಲಿ ಭಾರತದ 'ಚಂದ್ರಯಾನ-2' ಕೊನೇ ಕ್ಷಣದಲ್ಲಿ ಸೋತು ಹೋಗಿದ್ದಾಗ ಶತಕೋಟಿ ಭಾರತೀಯರು ಕಣ್ಣೀರು ಹಾಕಿದ್ದರು. ಅದರಲ್ಲೂ ಅಂದಿನ ಇಸ್ರೋ ಅಧ್ಯಕ್ಷರೇ ಅತ್ತುಬಿಟ್ಟರು. ಪರಿಸ್ಥಿತಿ ಹೀಗಿದ್ದಾಗ ಇಡೀ ಜಗತ್ತೇ ಭಾರತದ ಪ್ರಯತ್ನಕ್ಕೆ ನಮಿಸಿತ್ತು. ಆದ್ರೆ ಇದೇ ಹೊತ್ತಲ್ಲಿ ಆಗ ಪಾಕಿಸ್ತಾನ ಐಟಿ ಸಚಿವನಾಗಿದ್ದ ಫಾವದ್ ಚೌಧರಿ, ಇಸ್ರೋ ಬಗ್ಗೆ ಆಡಿಕೊಂಡಿದ್ದರು. ಇದೀಗ ಸ್ವಲ್ಪ ಬುದ್ಧಿ ಬಂದಂತೆ ಕಾಣುತ್ತಿದ್ದು, ವಾಸ್ತವದ ಬಗ್ಗೆ ಮಾತನಾಡಿದ್ದಾರೆ. ಈಗ ಪಾಕ್‌ನ ಮಾಜಿ ಸಚಿವ ಭಾರತವನ್ನು ಹೊಗಳಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಅಲ್ಲದೆ ಈ ಬುದ್ಧಿ ಹೀಗೆ ಇರಲಿ, ಯಾವಾಗಲೂ ವಾಸ್ತವದ ಬಗ್ಗೆ ಮಾತನಾಡಿ ಅಂತಿದ್ದಾರೆ ನೆಟ್ಟಿಗರು.

ಹೀಗೆ ಪಾಕಿಸ್ತಾನ ಕೂಡ ಭಾರತದ ಬಗ್ಗೆ ಹೆಮ್ಮೆಯ ಮಾತನ್ನು ಹೇಳಿದೆ. ಅಮೆರಿಕ, ರಷ್ಯಾ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳು ಮಾಡದ ಸಾಧನೆಯನ್ನು ಭಾರತ ಈಗ ಮಾಡಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ವಿಕ್ರಮ್ ಲ್ಯಾಂಡರ್ ಸರ್ಪ್ರೈಸ್ ಕೊಡಲಿದೆ. ವಿಕ್ರಮ್ ಲ್ಯಾಂಡರ್ ಹೊಟ್ಟೆಯ ಒಳಗಿಂದ 'ಪ್ರಗ್ಯಾನ್' ರೋವರ್ ಹೊರಗೆ ಬರಲಿದೆ. ನಂತರ ನಿಜವಾದ ಕೆಲಸವೂ ಶುರು ಆಗಲಿದೆ.












Click it and Unblock the Notifications