ನೂತನ ಸಂಸತ್ ಉದ್ಘಾಟನೆಯಲ್ಲಿ ಭಾಗಿಯಾಗಿದವರು ಯಾರು, ಗೈರಾಗಿದ್ದು ಎಷ್ಟು ಮಂದಿ?; ವಿವರಗಳು
ನವದೆಹಲಿ, ಮೇ. 28: ಭಾನುವಾರದ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ನಡೆದಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ಸುಮಾರು 25 ರಾಜಕೀಯ ಪಕ್ಷಗಳ ಸದಸ್ಯರು ಭಾಗವಹಿಸಿದ್ದಾರೆ. ಮತ್ತೊಂದೆಡೆ, ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಇತರ 19 ಸಮಾನ ಮನಸ್ಕ ವಿರೋಧ ಪಕ್ಷಗಳು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.
ಸಂಸದ ಅಸಾದುದ್ದೀನ್ ಓವೈಸಿಯ ಎಐಎಂಐಎಂ ಕೂಡ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸಿದೆ. ಆದರೆ, ಸಂಸತ್ ಉದ್ಘಾಟನೆ ಸಮಾರಂಭವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪ್ರಕಟಿಸುವ ಜಂಟಿ ಪತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಎಐಎಂಐಎಂ ಪಕ್ಷವನ್ನು ಸೇರಿಸಿಲ್ಲ.

ಸಂಸತ್ ಭವನ ಉದ್ಘಾಟನೆಗೆ ಬಹಿಷ್ಕಾರ ಏಕೆ?
ಈ ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕಿತ್ತು, ಪ್ರಧಾನಿ ನರೇಂದ್ರ ಮೋದಿ ಅವರಲ್ಲ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿವೆ. ವಿಪಕ್ಷಗಳ ಪ್ರಕಾರ, ರಾಷ್ಟ್ರಪತಿಗಳು ಸೇಶದ ಮೊದಲ ಪ್ರಜೆಯಾಗಿದ್ದು, ಈ ಗೌರವ ಅವರಿಗೆ ಸಲ್ಲಿಕೆಯಾಗಬೇಕು. ಅವರನ್ನು ಆಹ್ವಾನಿಸದ ಕಾರಣ, ನರೇಂದ್ರ ಮೋದಿ ಸರ್ಕಾರವು ಅಧ್ಯಕ್ಷರ ಸ್ಥಾನಕ್ಕೆ ಅಗೌರವ ತೋರುತ್ತಿದೆ ಎಂದು ಆರೋಪಿಸಿ ಪಕ್ಷಗಳು ಸಮಾರಂಭವನ್ನು ಭಹಿಷ್ಕರಿಸಲು ನಿರ್ಧರಿಸಿದವು. ಬಿಜೆಪಿ ಆರೋಪವನ್ನು ತಳ್ಳಿಹಾಕಿದೆ.
ಉದ್ಘಾನಟನೆಗೆ ಹಾಜರಾದವರು ಯಾರು?
ಹಾಜರಿರುವ 25 ಪಕ್ಷಗಳ ಪೈಕಿ ಹಲವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಪಕ್ಷಗಳಲ್ಲ. ಅವುಗಳೆಂದರೆ ಬಿಜು ಜನತಾ ದಳ (ಬಿಜೆಡಿ), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಶಿರೋಮಣಿ ಅಕಾಲಿದಳ (ಎಸ್‌ಎಡಿ), ಜಾತ್ಯತೀತ ಜನತಾ ದಳ, ತೆಲುಗು ದೇಶಂ ಪಕ್ಷ (ಟಿಡಿಪಿ), ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಕಾರ್ಯಕ್ರಮದಲ್ಲಿ ಭಾಗವಹಿಸಿವೆ.

ಕಾಂಗ್ರೆಸ್ ಮತ್ತು ಎಐಎಂಐಎಂ ಹೊರತುಪಡಿಸಿ ಹಾಜರಾಗದ ಇತರರು
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಆಮ್ ಆದ್ಮಿ ಪಕ್ಷ (ಎಎಪಿ), ಶಿವಸೇನೆ (ಯುಬಿಟಿ), ಸಮಾಜವಾದಿ ಪಕ್ಷ (ಎಸ್‌ಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕೇರಳ ಕಾಂಗ್ರೆಸ್ (ಮಣಿ), ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜನತಾ ದಳ (ಯುನೈಟೆಡ್), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಮತ್ತು ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ).
539 ಲೋಕಸಭಾ ಸದಸ್ಯರ ಪೈಕಿ ಬಿಜೆಪಿಯ 301 ಸದಸ್ಯರು ಸೇರಿದಂತೆ 382 ಮಂದಿ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ಮತ್ತೊಂದೆಡೆ 238 ಸ್ಥಾನಗಳ ರಾಜ್ಯಸಭೆಯಿಂದ 131 ಮಂದಿ ಹಾಜರಾಗಿದ್ದಾರೆ. ಅವರಲ್ಲಿ 93 ಮಂದಿ ಬಿಜೆಪಿಯವರೇ ಆಗಿದ್ದಾರೆ.
ರಾಜ್ಯಸಭೆಯ 131 ಸದಸ್ಯರಲ್ಲಿ 5 ನಾಮನಿರ್ದೇಶಿತ ಸದಸ್ಯರಿದ್ದಾರೆ. ರಂಜನ್ ಗೊಗೊಯ್ (ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ), ಪಿಟಿ ಉಷಾ (ನಿವೃತ್ತ ಅಥ್ಲೆಟಿಕ್ಸ್), ಇಳಯರಾಜ (ಪ್ರಸಿದ್ಧ ಸಂಗೀತಗಾರ), ಧರ್ಮಸ್ಥಳ ವೀರೇಂದ್ರ ಹೆಗ್ಗಡೆ , ಮತ್ತು ವಿ ವಿಜಯೇಂದ್ರ ಪ್ರಸಾದ್.
ಗೈರುಹಾಜರಾದ ಪಕ್ಷಗಳ ಒಟ್ಟು ಸಂಸತ್ತಿನ ಸಾಮರ್ಥ್ಯ:
| ಕ್ರ.ಸಂಖ್ಯೆ | ಪಕ್ಷ | ಲೋಕಸಭೆ | ರಾಜ್ಯಸಭೆ |
| 1 | ಕಾಂಗ್ರೆಸ್ | 51 | 31 |
| 2 | ಡಿಎಂಕೆ | 24 | 10 |
| 3 | ಎಎಪಿ | 1 | 10 |
| 4 | ಶಿವಸೇನೆ (UBT) | 6 | 3 |
| 5 | ಎಸ್ಪಿ | 3 | 3 |
| 6 | ಸಿಪಿಐ | 2 | 2 |
| 7 | ಸಿಪಿಐ (ಎಂ) | 3 | 5 |
| 8 | ಜೆಎಂಎಂ | 1 | 2 |
| 9 | ಕೇರಳ ಕಾಂಗ್ರೆಸ್ | 1 | 1 |
| 10 | ವಿಸಿಕೆ | 1 | 0 |
| 11 | ಆರ್‌ಎಲ್‌ಡಿ | 0 | 1 |
| 12 | ಆರ್‌ಜೆಡಿ | 0 | 6 |
| 13 | ಟಿಎಂಸಿ | 23 | 12 |
| 14 | ಜೆಡಿಯು | 16 | 5 |
| 15 | ಎನನಸಿಪಿ | 5 | 4 |
| 16 | ಐಯುಎಂಎಲ್ | 3 | 1 |
| 17 | ಬಿಆರ್‌ಎಸ್ | 9 | 7 |
| 18 | ಎನ್‌ಸಿ | 3 | 0 |
| 19 | ಆರ್‌ಎಸ್‌ಪಿ | 1 | 0 |
| 20 | ಎಂಡಿಎಂಕೆ | 1 | 1 |
| 21 | AIMIM** | 2 | 0 |
| 22 | ಒಟ್ಟು | 156 | 104 |
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications