2 ತಲೆಗಳ ಬದಲಿಗೆ ಎಷ್ಟು ತಲೆ ಉರುಳಿಸುತ್ತೀರಿ? ಮೋದಿಗೆ ಕಪಿಲ್ ಪ್ರಶ್ನೆ

ಪ್ರಧಾನಿ ಮೋದಿ ಅವರು 2 ತಲೆಗಳ ಬದಲಿಗೆ ಎಷ್ಟು ತಲೆಗಳನ್ನು ಹೊಡೆದುರಳಿಸುತ್ತಾರೆ? ಎಂದು ಮಾಜಿ ಸಚಿವ, ಕಾಂಗ್ರೆಸ್ಸಿನ ಹಿರಿಯ ನಾಯಕ ಕಪಿಲ್ ಸಿಬಾಲ್ ಪ್ರಶ್ನಿಸಿದ್ದಾರೆ.

ನವದೆಹಲಿ, ಮೇ 02: ಜಮ್ಮು ಮತ್ತು ಕಾಶ್ಮೀರದ ಪೂಂಛ್ ನಲ್ಲಿ ಇಬ್ಬರು ಭಾರತೀಯ ಸೈನಿಕರ ಶಿರವನ್ನು ಪಾಕಿಸ್ತಾನಿ ಪಡೆ ಕತ್ತರಿಸುವುದರ ಬಗ್ಗೆ ಕೇಂದ್ರ ಸರ್ಕಾರ ಮೌನದ ಉತ್ತರ ನೀಡುತ್ತಿದೆ ಏಕೆ? ಪ್ರಧಾನಿ ಮೋದಿ ಅವರು 2 ತಲೆಗಳ ಬದಲಿಗೆ ಎಷ್ಟು ತಲೆಗಳನ್ನು ಹೊಡೆದುರಳಿಸುತ್ತಾರೆ? ಎಂದು ಮಾಜಿ ಸಚಿವ, ಕಾಂಗ್ರೆಸ್ಸಿನ ಹಿರಿಯ ನಾಯಕ ಕಪಿಲ್ ಸಿಬಾಲ್ ಪ್ರಶ್ನಿಸಿದ್ದಾರೆ.

ಭಾರತೀಯ ಸೈನಿಕರ ಶಿರಚ್ಛೇದ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಮೌನವಾಗಿರುವುದೇಕೆ ? ಕೇಂದ್ರ ಸರ್ಕಾರಕ್ಕೆ ಪೂರ್ಣ ಪ್ರಮಾಣದ ರಕ್ಷಣಾ ಸಚಿವರ ಕೊರತೆ ಇದೆ.

'How many heads will you bring for 2 soldiers' asks Kapil Sibal

ಭಾರತ ಸರ್ಕಾರ ಮೌನವಾಗಿರುವುದನ್ನು ಕಂಡು ನನಗೆ ಅಚ್ಚರಿಯಾಗಿದೆ. 2014ರ ಲೋಕಸಭೆ ಚುನಾವಣೆ ವೇಳೆ ನೀವು ಸಾಕಷ್ಟು ಭರವಸೆಗಳನ್ನು ನೀಡಿದ್ದು ಹುಸಿಯಾಗಿದೆ ಎಂದು ಕಪಿಲ್ ಹೇಳಿದರು.

ಇದಕ್ಕಿಂತ ಮುಖ್ಯವಾಗಿ ಯುಪಿಎ 2 ಅಧಿಕಾರದಲ್ಲಿದ್ದ ಕಾಲದಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು 2013ರಲ್ಲಿ ಯೋಧ ಲ್ಯಾನ್ಸ್ ನಾಯ್ಕ್ ಹೇಮರಾಜ್ ಅವರನ್ನು ಗಡಿ ನಿಯತ್ರಣಾ ರೇಖೆ ಪಾಕ್ ಪಡೆ ಹತ್ಯೆ ಮಾಡಿದ್ದರ ಬದಲಿಗೆ 10 ತಲೆಗಳನ್ನು ತರುವುದಾಗಿ ಘೋಷಿಸಿದ್ದರು.ಈಗ ಎಷ್ಟು ಮಂದಿಯ ತಲೆಯನ್ನು ತರುತ್ತೀರಿ ಎಂದು ಕಪಿಲ್ ಪ್ರಶ್ನೆ ಎಸೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+