ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?

ಎಕ್ಸಿಟ್ ಪೋಲ್ ಎಂದರೆ ಮತದಾರ ಮತಹಾಕಿ ಹೊರ ಬಂದಾಗ ಆತ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆಂದು ಆತನಿಂದಲೇ ತಿಳಿದುಕೊಂಡು ಅದರ ಆಧಾರದ ಮೇಲೆ ಫಲಿತಾಂಶವನ್ನು ಊಹಿಸುವುದನ್ನು ಎಗ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆ ಎನ್ನಲಾಗುತ್ತದೆ.

ಮಾಧ್ಯಮದವರು ಅಥವಾ ಸಮೀಕ್ಷೆ ಮಾಡುವ ಸಂಸ್ಥೆಗಳ ಸದಸ್ಯರು ಮತಗಟ್ಟೆ ಹೊರಗೆ ನಿಂತು, ಮತಹಾಕಿ ಬಂದ ಮತದಾರ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆಂದು ಆತನನ್ನೇ ಕೇಳಿ ತಿಳಿದುಕೊಂಡು ಕೊಡುವ ಮಾಹಿತಿ ಆಧರಿಸಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಲಾಗುತ್ತದೆ

How does the Exit poll works

ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತಲೂ ಚುನಾವಣೋತ್ತರ ಸಮೀಕ್ಷೆಗಳು ಫಲಿತಾಂಶಕ್ಕೆ ಹೆಚ್ಚು ಹತ್ತಿರ ಇರುತ್ತವೆ ಎನ್ನಲಾಗುತ್ತದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳೂ ಎಲ್ಲಾ ಬಾರಿ ಸತ್ಯವೇನೂ ಆಗಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಕಳೆದ ಬಾರಿಯ ಬಿಹಾರ ವಿಧಾನಸಭಾ ಚುನಾವಣೆ.

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಅಪಸ್ವರವೂ ಸಾಕಷ್ಟಿದೆ. ಏಕೆಂದರೆ ಸಮೀಕ್ಷೆ ನಡೆಸುವ ಸದಸ್ಯರು ಎಲ್ಲ ಕ್ಷೇತ್ರಗಳ ಎಲ್ಲ ಮತಗಟ್ಟೆಗಳಲ್ಲಿ ಎಲ್ಲ ಮತದಾರರ ಅಭಿಪ್ರಾಯ ಸಂಗ್ರಹಿಸುವುದಿಲ್ಲ, ಹೆಚ್ಚೆಂದರೆ ಒಬ್ಬ ಸದಸ್ಯ ಐನೂರರಿಂದ ಎರಡು ಸಾವಿರ ಮತದಾರರ ಅಭಿಪ್ರಾಯ ಪಡೆದು ಅದೇ ಮಾಹಿತಿಯನ್ನು ಸಮೀಕ್ಷೆಯ ಅಂತಿಮ ವರದಿ ತಯಾರಿಸಲು ರವಾನಿಸುತ್ತಾನೆ ಎಂಬುದು ಚುನಾವಣೋತ್ತರ ಸಮೀಕ್ಷೆ ಬಗೆಗಿರುವ ಬಹುದೊಡ್ಡ ಅಪಸ್ವರ.

ಪ್ರಸ್ತುತ ಗುಜರಾತ್ ಚುನಾವಣೆ ಮುಗಿದಿದ್ದು, ಯಾವ ಚಾನೆಲ್ ಹಾಕಿದರೂ, ಜಾಲತಾಣ ತೆರೆದರೂ ಎಗ್ಸಿಟ್ ಪೋಲ್ ಕಣ್ಣಿಗೆ ರಾಚುತ್ತಿದೆ, ಬಹುತೇಕ ಎಲ್ಲ ಎಗ್ಸಿಟ್ ಪೋಲ್ ಗಳೂ ಒಂದೇ ರೀತಿಯ ಫಲಿತಾಂಶವನ್ನು ಊಹಿಸಿರುವುದನ್ನು ಗಮನಿಸಿದರೆ ಈ ಬಾರಿಯ ಎಗ್ಸಿಟ್ ಪೋಲ್ ಬಹುತೇಕ ನಿಜ ಪಲಿತಾಂಶಕ್ಕೆ ಹತ್ತಿರವಿದ್ದಂತೆ ಗೋಚರವಾಗುತ್ತಿದೆ.

ಗುಜರಾತ್ ಚುನಾವಣೆಯ ಎಗ್ಸಿಟ್ ಪೋಲ್ ಸಮೀಕ್ಷೆ ಬಗ್ಗೆ ಬಿಜೆಪಿ ಖುಷಿಯಾಗಿದ್ದರೆ, ಕಾಂಗ್ರೆಸ್ ಮಾತ್ರ ಬಿಹಾರ ಚುನಾವಣೆಯನ್ನು ಉದಾಹರಣೆ ನೀಡುತ್ತಾ ಈಗಲೇ ವಿಜಯಾಚರಣೆ ಬೇಡ ಎಂದು ಬಿಜೆಪಿಗೆ ಸಲಹೆ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+