ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್‌ಗೆ ನಾಂದಿಯಾದ ಅವಮಾನಕರ ಪ್ರಶ್ನೆ!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 01 : ಟಿವಿ ನಿರೂಪಕಿ ಕೇಳಿದ ಆ ಒಂದು ಅವಮಾನಕಾರಿಯಾದ ಪ್ರಶ್ನೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಪ್ರೇರೇಪಣೆಯಾಯಿತು ಎಂದರೆ ನಂಬಲೇಬೇಕು.

ಈ ಸಂಗತಿಯನ್ನು ಪಣಜಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಬಹಿರಂಗಪಡಿಸಿದ್ದು ಅಂದು ಕೇಂದ್ರ ರಕ್ಷಣಾ ಸಚಿವರಾಗಿದ್ದ ಮತ್ತು ಇಂದು ಗೋವಾದ ಮುಖ್ಯಮಂತ್ರಿಯಾಗಿರುವ ಮನೋಹರ್ ಪರಿಕ್ಕರ್ ಅವರು.

ಸರ್ಜಿಕಲ್ ಸ್ಟ್ರೈಕಿಗಿಂತಲೂ ಉತ್ತಮ ಆಯ್ಕೆ ನಮ್ಮಲ್ಲಿದೆ: ಪಾಕಿಸ್ತಾನಕ್ಕೆ ಎಚ್ಚರಿಕೆಸರ್ಜಿಕಲ್ ಸ್ಟ್ರೈಕಿಗಿಂತಲೂ ಉತ್ತಮ ಆಯ್ಕೆ ನಮ್ಮಲ್ಲಿದೆ: ಪಾಕಿಸ್ತಾನಕ್ಕೆ ಎಚ್ಚರಿಕೆ

ಸರ್ಜಿಕಲ್ ಸ್ಟ್ರೈಕ್ ನ ತಯಾರಿ ನಡೆದಿದ್ದು 15 ತಿಂಗಳ ಹಿಂದೆ, 2015ರ ಜೂನ್ 9ರಂದು. ಜೂನ್ 4ರಂದು ಎನ್ಎಸ್‌ಸಿಎನ್-ಕೆ ಎಂಬ ಉಗ್ರ ಸಂಘಟನೆ ಈಶಾನ್ಯ ಭಾರತದಲ್ಲಿ, ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ದಾಳಿ ನಡೆಸಿ 18 ಜವಾನರನ್ನು ಹತ್ಯೆಗೈದಿದ್ದ ಸಂದರ್ಭ.

ಕಾಶ್ಮೀರ: ಮನೆ ಹೊಕ್ಕಿರುವ ಉಗ್ರರೊಂದಿಗೆ ಸೇನೆ ಕಾದಾಟ; 2 ಉಗ್ರರು ಬಲಿ ಕಾಶ್ಮೀರ: ಮನೆ ಹೊಕ್ಕಿರುವ ಉಗ್ರರೊಂದಿಗೆ ಸೇನೆ ಕಾದಾಟ; 2 ಉಗ್ರರು ಬಲಿ

"ನನಗೆ ಭಾರೀ ಅವಮಾನವಾಗಿತ್ತು. ಕೇವಲ 200 ಜನರಿರುವ ಉಗ್ರ ಸಂಘಟನೆಯೊಂದು 18 ಡೊಗ್ರಾ ಜವಾನರನ್ನು ಹತ್ಯೆಗೈಯುವುದೆಂದರೇನು? ಆ ಸಂಜೆಯೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ಲಾನ್ ಮಾಡಿ, ಜೂನ್ 8ರಂದು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ 70-80 ಉಗ್ರರನ್ನು ಹತ್ಯೆ ಮಾಡಿದೆವು" ಎಂಬ ವಿವರ ಪರಿಕ್ಕರ್ ಬಹಿರಂಗಪಡಿಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ 2: ಮೋದಿ ಮುಂದಿನ ತಂತ್ರದ ಬಗ್ಗೆ ಸಚಿವರ ಸುಳಿವುಸರ್ಜಿಕಲ್ ಸ್ಟ್ರೈಕ್ 2: ಮೋದಿ ಮುಂದಿನ ತಂತ್ರದ ಬಗ್ಗೆ ಸಚಿವರ ಸುಳಿವು

ಅದೊಂದು ಯಶಸ್ವಿ ದಾಳಿಯಾಗಿತ್ತು. ಆದರೆ, ನಮ್ಮ ಯೋಧನ ಕಾಲಿಗೆ ಜಿಗಣೆಯೊಂದು ಕಚ್ಚಿದ್ದು ಮಾತ್ರ ನಮ್ಮ ಯೋಧರಿಗಾಗಿದ್ದ ಏಕೈಕ ಗಾಯವಾಗಿತ್ತು. ಆ ಸಂದರ್ಭದಲ್ಲಿ ಮಾಜಿ ಯೋಧ ರಾಜ್ಯವರ್ಧನ್ ರಾಥೋಡ್ ಟಿವಿಯೊಂದರಲ್ಲಿ ವಿವರಣೆ ನೀಡುತ್ತಿದ್ದರು. ಆಗ ನಿರೂಪಕಿಯಿಂದ ತೂರಿಬಂದಿತ್ತು ಆ ಅವಮಾನಕರ ಪ್ರಶ್ನೆ. ಅದೇನೆಂದರೆ...

ಪಾಕ್ ಮೇಲೆ ದಾಳಿ ಮಾಡುವ ಧೈರ್ಯವಿದೆಯೆ?

ಪಾಕ್ ಮೇಲೆ ದಾಳಿ ಮಾಡುವ ಧೈರ್ಯವಿದೆಯೆ?

"ಪೂರ್ವದ ಗಡಿಯಲ್ಲೇನೋ ದಾಳಿ ಮಾಡಿದಿರಿ. ಆದರೆ, ಪಶ್ಚಿಮದ ಗಡಿಯಲ್ಲೂ ಹೀಗೆ ಸರ್ಜಿಕಲ್ ಸ್ಟ್ರೈಕ್ ಮಾಡಲು ನಿಮಗೆ ಧೈರ್ಯ ಮತ್ತು ಸಾಮರ್ಥ್ಯ ಇದೆಯೆ?" ಎಂದು ಆ ಯುವತಿ ಕೇಳಿ ಪರಿಕ್ಕರ್ ಕನಲಿ ಕೆಂಡವಾದರು. ಆ ನಿರೂಪಕಿಯ ಹೆಸರನ್ನು ಪರಿಕ್ಕರ್ ಬಹಿರಂಗಪಡಿಸಿಲ್ಲ.

ಸೂಕ್ತ ಸಮಯದಲ್ಲಿ ತಕ್ಕ ಉತ್ತರ

ಸೂಕ್ತ ಸಮಯದಲ್ಲಿ ತಕ್ಕ ಉತ್ತರ

ಈ ಪ್ರಶ್ನೆ ಮನೋಹರ್ ಪರಿಕ್ಕರ್ ಅವರನ್ನು ಕಲ್ಲವಿಲ್ಲಗೊಳಿಸಿತು. "ನಾನು ಆಕೆ ಕೇಳಿದ್ದ ಪ್ರಶ್ನೆಯನ್ನು ಗಮನವಿಟ್ಟು ಕೇಳಿದೆ. ಸಮಯ ಬಂದಾಗ ಉತ್ತರ ಕೊಡುವ ತೀರ್ಮಾನಕ್ಕೆ ಬಂದಿದ್ದೆ. ಹೀಗೆ 2016ರ ಸೆಪ್ಟೆಂಬರ್ 29ರಂದು ಪಾಕಿಸ್ತಾನದ ಉಗ್ರರ ಮೇಲೆ ದಾಳಿ ಮಾಡಲು ಸ್ಕೆಚ್ ತಯಾರಾಗಿದ್ದು 2015ರ ಜೂನ್ 9ರಂದು."

ದಾಳಿಗೆ ಹೆಚ್ಚುವರಿ ಶಸ್ತ್ರಾಸ್ತ್ರ ತರಿಸಿಕೊಳ್ಳಲಾಯಿತು

ದಾಳಿಗೆ ಹೆಚ್ಚುವರಿ ಶಸ್ತ್ರಾಸ್ತ್ರ ತರಿಸಿಕೊಳ್ಳಲಾಯಿತು

"ಇದಕ್ಕಾಗಿ ಸಿದ್ಧತೆಗಳನ್ನು ಆಗಿನಿಂದಲೇ ಮಾಡಿಕೊಳ್ಳಲು ಆರಂಭಿಸಿದೆವು. ಹೆಚ್ಚುವರಿ ತುಕುಡಿಯನ್ನು ಕರೆಸಿಕೊಳ್ಳಲಾಯಿತು. ಅವರಿಗೆ ಸೂಕ್ತ ತರಬೇತಿ ನೀಡಲಾಯಿತು. ಈ ದಾಳಿಗೆ ಅವಶ್ಯಕವಾಗಿ ಬೇಕಾಗಿದ್ದ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳಲಾಯಿತು. ಇದೆಲ್ಲ 15 ತಿಂಗಳ ಹಿಂದೆಯೇ ಯೋಜಿಸಲಾಗಿತ್ತು."

ಡಿಆರ್ಡಿಓದ ಶಸ್ತ್ರಾಸ್ತ್ರ ಪತ್ತೆ ಸಾಧನ

ಡಿಆರ್ಡಿಓದ ಶಸ್ತ್ರಾಸ್ತ್ರ ಪತ್ತೆ ಸಾಧನ

ಡಿಆರ್‌ಡಿಓ ತಯಾರಿಸಿದ, ಶತ್ರುಗಳ ಶಸ್ತ್ರಾಸ್ತ್ರ ಪತ್ತೆ ಮಾಡುವ ಸ್ವಾತಿ ವೆಪನ್ ಲೊಕೇಟಿಂಗ್ ರಾಡಾರ್ ಬಳಸಿ 2016ರ ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನದ ಸೇನೆ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಲಾಯಿತು. ಈ ಸಾಧನವನ್ನು ಬಳಸಿ ಶತ್ರುಗಳ 40 ಫೈರಿಂಗ್ ಯುನಿಟ್ ಗಳನ್ನು ಧ್ವಂಸ ಮಾಡಲಾಯಿತು ಎಂದು ಪರಿಕ್ಕರ್ ವಿವರಣೆ ನೀಡಿದರು.

ಮುಟ್ಟಿ ನೋಡಿಕೊಳ್ಳುವಂಥ ಸರ್ಜಿಕಲ್ ಸ್ಟ್ರೈಕ್

ಮುಟ್ಟಿ ನೋಡಿಕೊಳ್ಳುವಂಥ ಸರ್ಜಿಕಲ್ ಸ್ಟ್ರೈಕ್

ಯೋಜನೆ ಹಾಕಿಕೊಂಡಂತೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ನಿರ್ಧರಿಸಿದ್ದ ಭಾರತೀಯ ಸೇನೆ, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 2016ರ ಸೆಪ್ಟೆಂಬರ್ 29ರಂದು, ಪಾಕ್ ಉಗ್ರರಿಗೆ ಸೇರಿದೆ 7 ನೆಲೆಗಳ ಮೇಲೆ ಭರ್ಜರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ 38 ಉಗ್ರರನ್ನು ಹೊಸಕಿಹಾಕಿತ್ತು.

English summary
It was an insulting question by a television anchor that prompted him to plan the surgical strikes on Pakistan. Former Defence Minister, Manohar Parrikar who is currently the Chief Minister of Goa said at an event in Panaji that the stikes were planned 15 months in advance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X