2022ರ ಹೊತ್ತಿಗೆ ದೇಶದ ಎಲ್ಲರಿಗೂ ಮನೆ ಎಂಬ ಯೋಜನೆ?

By: ನಿತಿನ್ ಮೆಹ್ತಾ ಮತ್ತು ಪ್ರಣವ್ ಗುಪ್ತ
Subscribe to Oneindia Kannada

2022ರ ಹೊತ್ತಿಗೆ ದೇಶದ ಎಲ್ಲರಿಗೂ ಸೂರು (ಮನೆ) ಒದಗಿಸುವ ಭರವಸೆ ನೀಡಿದೆ ಮೋದಿ ಸರಕಾರ. ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯೇ ರಾಜೀವ್ ಆವಾಸ್ ಯೋಜನಾ ಹಾಗೂ ಇದಿರಾ ಆವಾಸ್ ಯೋಜನಾ...ಹೀಗೆ ವಿವಿಧ ಯೋಜನೆಗಳನ್ನು ತರಲಾಗಿದೆ.

ಪಕ್ಕಾ ಮನೆಗಳನ್ನು ನಿರ್ಮಿಸುವುದಕ್ಕೆ ಅನುದಾನ ನಿಡುವುದು, ಸಾಲದಲ್ಲಿ ಸಬ್ಸಿಡಿ ನೀಡುವ ಯೋಜನೆ, ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸುವುದಕ್ಕೆ ರಾಜ್ಯ ಸರಕಾರಗಳ ಜತೆ ಸೇರಿ ಹಣಕಾಸು ನೆರವು ನೀಡಲಾಗುತ್ರಿದೆ. ಇವೆಲ್ಲ ಹೊರತುಪಡಿಸಿ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಕಾಯ್ದೆ ಜಾರಿಗೆ ತಂದಿದ್ದು, ಇದರಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಗ್ರಾಹಕರಿಗೆ ರಕ್ಷಣೆ ನೀಡಲಿದೆ.

Housing for all?


ಗ್ರಾಮೀಣ ವಸತಿ

1985ರಲ್ಲಿ ಆರಂಭವಾದ ಇಂದಿರಾ ಆವಾಸ್ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣ-ದುರಸ್ತಿಗೆ ನೆರವು ನೀಡುವ ಉದ್ದೇಶ ಹೊಂದಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ಆ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲೇ ಸೇರಿಸಲಾಯಿತು. 2019ರೊಳಗೆ ಒಂದು ಕೋಟಿ ಮಂದಿಗೆ ಪಕ್ಕಾ ಮನೆಗಳನ್ನು ಕಟ್ಟಿಕೊಡುವ ಗುರಿಯನ್ನು ಸರಕಾರ ಹೊಂದಿದೆ.

ಮೋದಿ ಸರಕಾರದ ಅವಧಿಯಲ್ಲಿ ಸರಿ ಹಾದಿಯಲ್ಲಿ ನೇರ ನಗದು ವರ್ಗಾವಣೆ

ಮನೆಯ ಕನಿಷ್ಠ ಗಾತ್ರವನ್ನು ಇಪ್ಪತ್ತು ಚದರ ಮೀಟರ್ ನಿಂದ ಇಪ್ಪತ್ತೈದು ಚದರ ಮೀಟರ್ ಗೆ ಹೆಚ್ಚಿಸಲಾಗಿದೆ. ಇನ್ನು ಅನುದಾನವನ್ನು ಎಪ್ಪತ್ತೈದು ಸಾವಿರದಿಂದ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೆ ಏರಿಸಲಾಗಿದೆ.

ಯುಪಿಎ ಎರಡನೇ ಅವಧಿಗಿಂತ ಎನ್ ಡಿಎ ಉತ್ತಮ

ನಾವು ಗಮನಿಸಿದ ಹಾಗೆ, ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯುಪಿಎ ಎರಡನೇ ಅವಧಿಯ ಕೊನೆ ಎರಡು ವರ್ಷದಲ್ಲಿ ಇಂದಿರಾ ಆವಾಸ್ ಯೋಜನೆಯಡಿ ವಾರ್ಷಿಕವಾಗಿ ಹತ್ತು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು.

ಇದಕ್ಕೆ ಹೋಲಿಸಿದರೆ ಕಳೆದ ವರ್ಷವೊಂದರಲ್ಲೇ ದೇಶದಾದ್ಯಂತ ಇಪ್ಪತ್ತೆಂಟು ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ. 2014ರಿಂದ ಈಚೆಗೆ ಮನೆಗಳ ನಿರ್ಮಾಣ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಆಗಿದೆ. ಗೃಹ ನಿರ್ಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಯಾದ ನಂತರವೇ.

ಗ್ರಾಮೀಣ ಭಾರತದ ರಸ್ತೆ ಸಂಪರ್ಕ ಸಾಧನೆ ಆಗಿದೆಯಾ?

ಸ್ವಚ್ಛ ಭಾರತ ಮತ್ತು ಸ್ಕಿಲ್ ಇಂಡಿಯಾದಂತೆಯೇ ಮನೆ ನಿರ್ಮಾಣದ ಗುರಿ ಮುಟ್ಟಲು ಸಹ ಶಕ್ತಿ ಮೀರಿ ಶ್ರಮಿಸಬೇಕಿದೆ. ವಾರ್ಷಿಕವಾಗಿ ನಿರ್ಮಾಣವಾಗುತ್ತಿರುವ ಮನೆಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಆಗಬೇಕಿದೆ. ಆಗಷ್ಟೇ 2019ರ ವೇಳೆಗೆ ಗ್ರಾಮೀಣ ಭಾಗದಲ್ಲಿ ಒಂದು ಕೋಟಿ ಗೃಹ ನಿರ್ಮಾಣದ ಗುರಿಯನ್ನು ಸರಕಾರ ತಲುಪಲು ಸಾಧ್ಯ.

ನಗರ ವಸತಿ

ಇನ್ನು ನಗರ ಪ್ರದೇಶಗಳಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ (ಸಿಎಲ್ ಎಸ್ ಎಸ್) ಮತ್ತು ರೇರಾ ಪರಿಚಯ ಮಾಡಿರುವುದು ವಸತಿ ನಿರ್ಮಾಣ ವಲಯಕ್ಕೆ ಉತ್ತೇಜನ ನೀಡುವಂತಿದೆ. ಸಿಎಲ್ ಎಸ್ ಎಸ್ ನ ವಿಸ್ತರಣೆ ಬಗ್ಗೆ ಹೊಸ ವರ್ಷದ ಮುಂಚೆ ಮಾಡಿದ ಭಾಷಣದಲ್ಲಿ ಮೋದಿ ಹೇಳಿದ್ದರು.

ಒಂಬತ್ತು ಹಾಗೂ ಹನ್ನೆರಡು ಲಕ್ಷದ ಸಾಲಕ್ಕೆ ಕ್ರಮವಾಗಿ ನಾಲ್ಕು, ಮೂರು ಪ್ರತಿಶತ ಸಬ್ಸಿಡಿ ನೀಡುವ ಬಗ್ಗೆ ಹೇಳಿದ್ದರು. ಕೆಲವರು ಹೇಳುವ ಪ್ರಕಾರ ಇದರಿಂದ ಪ್ರಮುಖ ಸಾರ್ವಜನಿಕ ಬ್ಯಾಂಕ್ ಗಳಿಂದ ಸಾಲ ಪಡೆಯುವ ಮೂರನೇ ಎರಡು ಭಾಗದಷ್ಟು ಮಂದಿಗೆ ಸಹಾಯವಾಗುತ್ತದೆ.

ವಿದ್ಯುತ್ ನಿಂದ ಬೆಳಗುತ್ತಿದೆಯೇ ಗ್ರಾಮೀಣ ಭಾರತ?

ಆರ್ಥಿಕವಾಗಿ ದುರ್ಬಲವರ್ಗದವರು ಹಾಗೂ ಕಡಿಮೆ ಆದಾಯದ ಗುಂಪಿನವರು ಸ್ವಂತ ಸೂರು ಹೊಂದುವಂತಾಗಬೇಕು ಎಂಬುದು ಈ ಯೋಜನೆ ಉದ್ದೇಶವಾಗಿದೆ. ಈ ಯೋಜನೆ ವಿಸ್ತರಣೆಗೂ ಮುನ್ನ ಸಿಎಲ್ ಎಸ್ ಎಸ್ ಗೆ ಅಂಥ ಸ್ಪಂದನೆ ಇಲ್ಲ ಮತ್ತು ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆಯಿದೆ.

ಪ್ರಮುಖವಾಗಿ ಕೈಗೊಂಡಿರುವ ಈ ಯೋಜನೆಯು ಸಂವಹನದ ಕೊರತೆ ಕಾರಣಕ್ಕೆ ವಿಫಲವಾಯಿತು ಎಂಬಂತಾಗಬಾರದು. ಈ ಬಗ್ಗೆ ಸರಕಾರ ಗಮನ ಹರಿಸಬೇಕು.

ಹಣದುಬ್ಬರ ನಿಯಂತ್ರಣ ಹಾಗೂ ಜನ್ ಧನ್ ಖಾತೆಯಿದ ಸಹಾಯ

ಕಳೆದ ಮೂರು ವರ್ಷಗಳಲ್ಲಿ ಸಾಲ ಪಡೆಯುವ ಬಡ್ಡಿ ದರದಲ್ಲಿ ತುಂಬ ಕಡಿಮೆಯಾಗಿದೆ. ಹಣದುಬ್ಬರ ನಿಯಂತ್ರಿಸುವಲ್ಲಿ ಸರಕಾರ ಸಫಲವಾಗಿರುವುದರಿಂದ ಪರೋಕ್ಷವಾಗಿ ಸಾರ್ವಜನಿಕರಿಗೆ ಸಹಾಯವಾಗಿದೆ. ಬಡ್ಡಿದರದಲ್ಲಿ ಇಳಿಕೆಯಾಗಿದೆ. ಕಡಿಮೆ ಬಡ್ಡಿದರದ ಸಾಲದ ಜತೆಗೆ ಸಾಲ ಸಿಗುವುಂತೆ ಮಾಡಲು ಶ್ರಮ ಹಾಕಬೇಕಿದೆ.

ಜನ್ ಧನ್ ಯೋಜನೆಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಬ್ಯಾಂಕ್ ಗಳಿಗೆ ಬರುವಂತಾಗಿದೆ. ಆದರೆ ಇಲ್ಲೊಂದು ಅನುಮಾನವಿದೆ. ಅಂಥವರಿಗೆ ಮನೆ ಹಾಗೂ ವೈಯಕ್ತಿಕ ಕಾರಣಗಳಿಗೆ ಸಾಲ ದೊರೆಯುತ್ತಿದೆಯೇ ಎಂಬ ಬಗ್ಗೆ ಅನುಮಾನಗಳಿವೆ.

ವಿದ್ಯುತ್ ಉಳಿಸಲು ಉಜಾಲ ಯೋಜನೆಯಲ್ಲಿ ಸರಕಾರದ ಶ್ರಮವಿದು

ಪೂರ್ಣಗೊಳ್ಳದ ಯೋಜನೆಗಳು ಹಾಗೂ ಕಟ್ಟಡ ನಿರ್ಮಾತೃಗಳ ವಿಳಂಬ ಈ ಎರಡೂ ನಗರ ಪ್ರದೇಶದ ಮನೆ ಖರೀದಿಸುವವರ ಪಾಲಿನ ಪ್ರಮುಖ ಸಮಸ್ಯೆಗಳು. ಪೂರ್ತಿ ಹಣ ಪಡೆದ ಮೇಲೂ ಹೇಳಿದ ಸಮಯಕ್ಕೆ ಯೋಜನೆ ಪೂರ್ಣ ಮಾಡದೆ ಮನೆ ಬಿಟ್ಟು ಕೊಡಲು ಕಟ್ಟಡ ನಿರ್ಮಾತೃಗಳು ಸಮಸ್ಯೆ ಮಾಡುತ್ತಾರೆ.

ಆದರೆ ರೆರಾ ಕಾಯ್ದೆ ಜಾರಿಗೆ ತಂದಿರುವುದರಿಂದ ಬೇಕಾಬಿಟ್ಟಿ ನಡೆದುಕೊಳ್ಳಲು ಸಾಧ್ಯವಿಲ್ಲ. ಮಾದರಿ ಕಾಯ್ದೆಯೊಂದನ್ನು ಕೇಂದ್ರ ಜಾರಿಗೆ ತಂದಿದೆ. ಆ ಪೈಕಿ ಕೆಲ ಪ್ರಮುಖ ಅಂಶಗಳನ್ನು ರಾಜ್ಯ ಸರಕಾರಗಳು ದುರ್ಬಲ ಮಾಡಿವೆ. ಎಲ್ಲ ರಾಜ್ಯಗಳು ಈ ಕಾಯ್ದೆಯನ್ನು ಪ್ರಬಲ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ ಎಂಬುದನ್ನು ಕೇಂದ್ತ ಸರಕಾರ ಖಾತ್ರಿ ಪಡಿಸಬೇಕು.

ಪರಿಸಮಾಪ್ತಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ನಿರ್ಮಾಣ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ರೆರಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ.

ಆ ಮೂಲಕ ಖರೀದಿದಾರರು ಮತ್ತು ಬಿಲ್ಡರ್ಸ್ ಗಳ ಮಧ್ಯೆ ಇರುವ ನಂಬಿಕೆ ಕೊರತೆಯನ್ನು ನೀಗುತ್ತದೆ. ಒಟ್ಟಾರೆ ಎಲ್ಲರಿಗೂ ಮನೆ ಎಂಬ ಗುರಿಯೊಂದಿಗೆ ಕೇಂದ್ರ ಸರಕಾರ ಉತ್ತರ ಆರಂಭ ಮಾಡಿದೆ. ಈ ಬಗ್ಗೆ ಯಾವುದೇ ಪ್ರಮುಖ ಮೌಲ್ಯಮಾಪನ ಮಾಡುವುದಕ್ಕೆ ಕನಿಷ್ಠ ಇನ್ನೊಂದು ವರ್ಷ ಕಾಯಬೇಕಾಗುತ್ತದೆ.

(ನಿತಿನ್ ಮೆಹ್ತಾ ರಣ್ ನೀತಿ ಕನ್ಸಲ್ಟಿಂಗ್ ಮತ್ತು ರೀಸರ್ಚ್ ನ ಕಾರ್ಯನಿರ್ವಹಣಾ ಪಾಲುದಾರ, ಪ್ರಣವ್ ಗುಪ್ತ ಸ್ವತಂತ್ರ ಸಂಶೋಧಕ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Housing for all?
English summary
The Modi government has promised to provide 'Housing for All; by 2022. Various housing schemes of the government like the Rajiv AwasYojana, Indira AwasYojana etc. have been subsumed under the Pradhan MantriAwasYojana.
Please Wait while comments are loading...