ಆಫ್ರಿಕನ್ ದೇಶಗಳಿಗೆ 13 ಲಕ್ಷ ಮಹಿಳೆಯರ ಕಾಂಡೋಂ ಸಪ್ಲೈ

Posted By:
Subscribe to Oneindia Kannada

ತಿರುವನಂತಪುರಂ, ಸೆಪ್ಟೆಂಬರ್ 1: ಕಾಂಡೋಂ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಚ್ ಎಲ್ ಎಲ್ ಲೈಫ್ ಕೇರ್ ಲಿಮಿಟೆಡ್, ಆಫ್ರಿಕಾದ ಜಾಂಬಿಯಾ, ಬುರ್ಕಿನಾ ಫಾಸೊ ಹಾಗೂ ಕೆರಿಬಿಯನ್ ದ್ವೀಪದ ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ 13 ಲಕ್ಷ ಮಹಿಳೆಯರ ಕಾಂಡೋಂ ರಫ್ತು ಮಾಡಲಿದೆ.

ಜಾಗತಿಕ ಮಟ್ಟದಲ್ಲಿ ಏಡ್ಸ್/ಎಚ್ ಐವಿ, ಲೈಂಗಿಕ ಕಾಯಿಲೆಗಳನ್ನು ನಿಯಂತ್ರಣಕ್ಕೆ ತರಬೇಕು ಎಂಬ ಉದ್ದೇಶದ ಭಾಗವಾಗಿ ಈ ಆರ್ಡರ್ ತೆಗೆದುಕೊಂಡಿದ್ದು, ಈ ಮೂರು ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಕಂಪೆನಿ ಉತ್ಪಾದಿಸುವ ಮಹಿಳೆಯರ ಕಾಂಡೋಂಗೆ ಮಾರುಕಟ್ಟೆಯಲ್ಲಿ ಒಳ್ಳೆ ಹೆಸರಿದೆ.[ಮಹಿಳೆಯರು, ಹಿರಿಯ ನಾಗರಿಕರ ನೆರವಿಗೆ ನಿಂತ ನಮ್ಮ ಮೆಟ್ರೋ]

HLL to export 1.3 million female condoms

ಅಭಿವೃದ್ಧಿಯಾಗುತ್ತಿರುವ ದೇಶಗಳಿಗೆ ಅಗತ್ಯ ಇರುವ ಔಷಧಿಗಳನ್ನು ಸಪ್ಲೈ ಮಾಡುವ, ಆಮಸ್ಟರ್ ಡ್ಯಾಮ್ ನಲ್ಲಿ ಮುಖ್ಯ ಕಚೇರಿಯಿರುವ ಐಡಿಎ ಫೌಂಡೇಷನ್ ಅದರ ಜಾಗತಿಕ ಹಣಕಾಸು ಯೋಜನೆಯಡಿ ಈ ಆರ್ಡರ್ ಕೊಟ್ಟಿದೆ. ಈ ಕಾಂಡೋಂ ಅನ್ನು ಎಚ್ ಎಲ್ ಎಲ್ ಕಂಪೆನಿ ಕೇರಳದ ಕೊಚ್ಚಿಯಲ್ಲಿರುವ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಿದೆ. ಈ ಕಾರ್ಖಾನೆಯಲ್ಲಿ ವರ್ಷಕ್ಕೆ 2.5 ಕೋಟಿ ಕಾಂಡೋಂ ಉತ್ಪಾದನೆ ಮಾಡುವ ಸಾಮರ್ಥ್ಯ ಇದೆ.

ಈ ವರ್ಷ ಮಾರ್ಚ್ ನಲ್ಲಿ ಮಹಿಳೆಯರ ಕಾಂಡೋಂಗೆ ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆ ಸಿಕ್ಕ ಮೇಲೆ, ವಿದೇಶದಿಂದ ಬಂದಿರುವ ಮೊದಲ ಆರ್ಡರ್ ಇದು. ಮುಂದೆ ಇನ್ನೂ ಹೆಚ್ಚಿನ ಆರ್ಡರ್ ನಿರೀಕ್ಷೆಯಲ್ಲಿದ್ದೀವಿ ಎಂದಿದ್ದಾರೆ ಎಚ್ ಎಲ್ ಎಲ್ ಕಂಪೆನಿಯ ಸಿಎಂಡಿ ಆರ್.ಪಿ.ಖಂಡೇವಾಲ್.[ಮುಂಬೈ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ]

ಯುರೋಪಿಯನ್ ಒಕ್ಕೂಟ ಹಾಗೂ ಆಫ್ರಿಕನ್ ದೇಶಗಳಿಗೆ 5 ವರ್ಷಗಳ ಕಾಲ ಮಹಿಳೆಯರ ಕಾಂಡೋಂಗಳನ್ನು ರಫ್ತು ಮಾಡಬಹುದಾದ ಅನುಮತಿ ಈ ಕಂಪೆನಿಗೆ ಇದೆ. ಈ ಕಾಂಡೋಂ ಅನ್ನು ಕೇಂದ್ರ ಸಚಿವ ಜೆ.ಪಿ.ನಡ್ಡಾ ಈ ವರ್ಷದ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Leading condom manufacturers HLL Lifecare Ltd, will export 1.3 million female condoms to African countries Gambia and Burkina Faso and Dominican Republic in the Caribbean.
Please Wait while comments are loading...