'ಮೋದಿ ಪ್ರಧಾನಿಯಾಗಲು 10 ಮಕ್ಕಳ ಹೆರಬೇಕು'
ಅಲಹಾಬಾದ್, ಜ, 18: ನರೇಂದ್ರ ಮೋದಿ ಇನ್ನೊಂದು ಅವಧಿಗೆ ಪ್ರಧಾನಿಯಾಗಬೇಕಾದರೆ ಪ್ರತಿಯೊಬ್ಬ ಹಿಂದೂ ಮಹಿಳೆ 10 ಮಕ್ಕಳನ್ನು ಹೇರಬೇಕು ಎಂದು ಬದ್ರಿಕಾಶ್ರಮದ ಶಂಕರಾಚಾರ್ಯ ವಸುದೇವಾನಂದ ಸರಸ್ವತಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಹಿಂದೂ ಸಮ್ಮೇಳನದಲ್ಲಿ ಮಾತನಾಡಿ, ನಾನು ಹಿಂದು ಸಹೋದರಿಯರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ಕನಿಷ್ಠ 5 ಮಕ್ಕಳನ್ನು ಹೆತ್ತು ದೇಶಕ್ಕೆ ನೀಡಿ. ಇದರಿಂದ ಭಾರತ ಹಿಂದು ರಾಷ್ಟ್ರವಾಗಿಯೇ ಉಳಿಯಲಿದೆ ಎಂದು ಹೇಳಿದ್ದಾರೆ.[4 ಮಕ್ಕಳ ಹಡೆದರೆ ಮಾತ್ರ ಹಿಂದೂ ಸಮಾಜ ಉದ್ಧಾರ!]

ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕ್ರಿಶ್ಚಿಯನ್, ಇಸ್ಲಾಂ, ಸಿಖ್ ಸೇರಿದಂತೆ ಎಲ್ಲ ಧರ್ಮಗಳಲ್ಲಿ ಮತಾಂತರಗೊಂಡವರು ತಮ್ಮ ತಮ್ಮ ಧರ್ಮಕ್ಕೆ ಹಿಂತಿರುಗುತ್ತಿದ್ದಾರೆ. ಹಾಗಾಗಿ ಹಿಂದು ಧರ್ಮದಿಂದ ಮತಾಂತರಗೊಂಡವರು ಪುನಃ ಮಾತೃ ಧರ್ಮಕ್ಕೆ ಹಿಂದಿರುಗುವುದರಲ್ಲಿ ಯಾವ ತಪ್ಪಿದೆ? ಎಂದು ಪ್ರಶ್ನಿಸಿದ್ದಾರೆ.[ಮತಾಂತರ ಸರಿಯಾದರೇ, ಮರುಮತಾಂತರವೇಕೆ ತಪ್ಪು?]
ಕೆಲ ದಿನಗಳ ಹಿಂದೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಪ್ರತಿಯೊಬ್ಬ ಹಿಂದೂ ಮಹಿಳೆ ನಾಲ್ಕು ಮಕ್ಕಳನ್ನು ಹೆರಬೇಕು. ದೆಹಲಿಯಲ್ಲಿ ರಾಮನ ಮಕ್ಕಳ ಸರ್ಕಾರ ಇರಬೇಕೆಂದರೆ ಇದು ಅನಿವಾರ್ಯ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಈಗ ಸ್ವಾಮೀಜಿಯೊಬ್ಬರು ಇಂಥ ಹೇಳಿಕೆ ನೀಡಿದ್ದಾರೆ.












Click it and Unblock the Notifications