ಹಿಂದೂ ಇಸ್ಲಾಂ ಧರ್ಮಕ್ಕಿಂತ ಹಳೆಯದು: ಮುಸ್ಲಿಂ ಮೂಲದ ಬಗ್ಗೆ ಕಾಂಗ್ರೆಸ್ಸಿಗನ ಸ್ಪೋಟಕ ಹೇಳಿಕೆ
ಬೆಂಗಳೂರು, ಆಗಸ್ಟ್ 17: ಕಾಂಗ್ರೆಸ್ ಪಕ್ಷವನ್ನು ಬಹುತೇಕ ಮುಸಲ್ಮಾನರು ಬೆಂಬಲಿಸುತ್ತಾರೆ. ಕಾಂಗ್ರೆಸ್ ಸಹ ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುವುದು ಗೊತ್ತಿರುವ ವಿಚಾರ. ಆದರೆ ಸದ್ಯ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಮುಸ್ಲಿಂರ ಮೂಲದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೌದು, ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರು ಮುಸ್ಲಿಮರ ಮೂಲದ ಕುರಿತು ಮಾತನಾಡಿದ್ದಾರೆ. ಹಿಂದೂ ಧರ್ಮವು ಇಸ್ಲಾಂ ಧರ್ಮಕ್ಕಿಂತ ಹಳೆಯದು ಎಂದು ಹೇಳಿಕೆ ನೀಡಿದ್ದಾರೆ.

ಕಳೆದ ಆಗಸ್ಟ್ 14 ರಂದು ದೋಡಾ ಜಿಲ್ಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಕಾಂಗ್ರೆಸ್ ನಾಯಕ, ಇಸ್ಲಾಂ ಧರ್ಮಕ್ಕಿಂತ ಹಿಂದು ಧರ್ಮ ಎಂಬುದಕ್ಕೆ ಕಾಶ್ಮೀರವೇ ಉದಾಹರಣೆ. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಮರು ಇರಲಿಲ್ಲ. ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಿದ್ದಾರೆ.
ಭಾರತದಲ್ಲಿ ಮಾತ್ರವಲ್ಲ ಜಗತ್ತು, ಇಸ್ಲಾಂ 1500 ವರ್ಷಗಳ ಹಿಂದೆ ಬಂದಿದ್ದು, ಆದರೆ ಹಿಂದೂ ಧರ್ಮ ಬಹಳ ಹಳೆಯದು. ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಮುಖ್ಯಸ್ಥರು ಸಹ ಇಸ್ಲಾಂ ಧರ್ಮವು ಹೊರಗಿನಿಂದ ಬಂದಿರಬೇಕು, 10-20 ಜನರು ಮೊಘಲ್ ಸೈನ್ಯದಿಂದ ಬಂದ ಕುರಿತು ಮಾತನಾಡಿದ್ದರು. ಉಳಿದವರು ಹಿಂದೂ-ಸಿಖ್ ಧರ್ಮದಿಂದ ಮತಾಂತರಗೊಂಡಿದ್ದಾರೆ ಎಂದು ಅಜಾದ್ ತಿಳಿಸಿದರು.

ಇಸ್ಲಾಂ ಕೇವಲ 1500 ವರ್ಷದಷ್ಟು ಹಳೆಯದು
ಸದ್ಯ ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಗುಲಾಮ್ ನಬಿ ಆಜಾದ್ ಅವರು, ನಾವು ಹಿಂದೂಗಳು, ಮುಸ್ಲಿಮರು, ಕಾಶ್ಮೀರಿ ಮತ್ತು ದಲಿತರಿಗಾಗಿ ರಾಜ್ಯವನ್ನು ನಿರ್ಮಿಸಿದ್ದೇವೆ. ಇದು ನಮ್ಮ ಭೂಮಿಯಾಗಿದ್ದು, ಇಲ್ಲಿಗೆ ಯಾರೂ ಹೊರಗಿನಿಂದ ಬಂದಿಲ್ಲ. ಕೆಲವರು ಹೊರಗಿನಿಂದ ಇಲ್ಲಿಗೆ ಬಂದಿದ್ದಾರೆ ಎಂದು ನಮ್ಮ ಸಹ ಸಂಸದರೊಬ್ಬರು ಹೇಳಿದನ್ನು ನಾನು ಒಪ್ಪಿರಲಿಲ್ಲ ಎಂದರು.
ನಮ್ಮ ಹಿಂದೂಸ್ತಾನದಲ್ಲಿ ಇಸ್ಲಾಂ ಕೇವಲ 1500 ವರ್ಷಗಳಷ್ಟು ಹಳೆಯದು. ಹಿಂದೂ ಧರ್ಮವು ಪುರಾತನವಾದದ್ದು. ಅದಕ್ಕೆ ಅದರದ್ದೇ ಆದ ದೀರ್ಘ ಇತಿಹಾಸ ಇದೆ. ಆದ್ದರಿಂದ ಮುಸ್ಲಿಮರಲ್ಲಿ 10-20 ಜನರು ಹೊರಗಿನಿಂದ ಬಂದಿರಬೇಕು. ಮೊಘಲರ ಕಾಲದಲ್ಲಿ ಅವರ ಸೈನ್ಯದಲ್ಲಿ, ಉಳಿದವರೆಲ್ಲರೂ ಭಾರತದಲ್ಲಿ ಹಿಂದೂಗಳಿಂದ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರೆ. ಇದಕ್ಕೆ ನಮ್ಮ ಕಾಶ್ಮೀರವೇ ತಕ್ಕ ಉದಾಹರಣೆಯಾಗಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಜಾದ್ ಅವರು, ಸುಮಾರು 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸಲ್ಮಾನರಾಗಿದ್ದವರು ಯಾರು?. ಎಲ್ಲರೂ ಕಾಶ್ಮೀರಿ ಪಂಡಿತರು, ಅವರೆಲ್ಲರೂ ಇಸ್ಲಾಂಗೆ ಮತಾಂತರಗೊಂಡವರೆ ಆಗಿದ್ದಾರೆ. ಹಾಗಾಗಿ ಎಲ್ಲರೂ ಈ ಧರ್ಮದಲ್ಲಿ ಹುಟ್ಟಿದ್ದಾರೆ ಎಂದು ನಾನು ಹೇಳಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications