ಹಿಮಾಚಲಪ್ರದೇಶ ದುರಂತ: ಭೂ ಕುಸಿತದಿಂದ ಹಲವಾರು ಮಂದಿ ಸಾವು

Posted By:
Subscribe to Oneindia Kannada

ಶಿಮ್ಲಾ, ಆಗಸ್ಟ್ 13: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕೊಟ್ರೂಪಿ ವ್ಯಾಪ್ತಿಯಲ್ಲಿ ಭೂಕುಸಿತದಿಂದಾಗಿ ದುರಂತ ಸಂಭವಿಸಿದ್ದು, ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಭೂ ಕುಸಿತದಿಂದ ಏಳು ಮಂದಿ ಸಾವನ್ನಪ್ಪಿದ್ದರೆ ಎಂದು ಆರಂಭಿಕ ಅಧಿಕೃತ ವರದಿ ಬಂದಿದೆ.

ಆದರೆ, ಎರಡು ಬಸ್ ಗಳು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 50 ಜನರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಶನಿವಾರ ತಡರಾತ್ರಿಯಿಂದಲೇ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸೇನೆ ಹಾಗೂ ಎನ್ ಡಿಆರ್ ಎಫ್ ನ ನೆರವನ್ನು ಜಿಲ್ಲಾಡಳಿತ ಕೋರಿದೆ

Himachal Pradesh landslide: Many killed, rescue operations underway

ಒಂದು ಬಸ್ ಮನಾಲಿಯಿಂದ ಚಂಬಾಗೆ ತೆರಳುತ್ತಿದ್ದು, ಇನ್ನೊಂದು ಮನಾಲಿಯಿಂದ ಜಮ್ಮುವಿನ ಕಾಟ್ರಾಗೆ ತೆರಳುತ್ತಿತ್ತು.

ಈ ದುರ್ಘಟನೆಯಲ್ಲಿ ಸುಮಾರು 50 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹಿಮಾಚಲ ಪ್ರದೇಶದ ಸಾರಿಗೆ ಸಚಿವ ಜಿ.ಎಸ್.ಬಾಲಿ ತಿಳಿಸಿದ್ದಾರೆ.

ಈ ಭೂಕುಸಿತದಿಂದಾಗಿ ಮಂಡಿ-ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿ 154 (ಕೊಟ್ರುಪಿ ಗ್ರಾಮ, ಮಂಡಿಜಿಲ್ಲೆ ಬಳಿ) ಸಂಪೂರ್ಣ ಹಾಳಾಗಿದೆ.


ಇದಲ್ಲದೆ ಮಂಡಿಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 21 ಬಂದ್ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least six persons were killed and many are feared trapped after three vehicles were hit by a landslide near Padhar area in Mandi district of Himachal Pradesh on Sunday early morning.
Please Wait while comments are loading...