ಹಿಮಾಚಲ ಪ್ರದೇಶ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶ
Recommended Video

ರಿಪಬ್ಲಿಕ್ ಟಿವಿ exit poll ಫಲಿತಾಂಶ | Oneindia Kannada
ಬೆಂಗಳೂರು, ಡಿಸೆಂಬರ್. 14 : ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ರಿಪಬ್ಲಿಕ್ ಟಿವಿ ಮತ್ತು ಸಿ-ವೋಟರ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಫಲಿತಾಂಶವಿದು.
ಹಿಮಾಚಲ ಪ್ರದೇಶದ 68 ಕ್ಷೇತ್ರಗಳಿಗೆ ನವೆಂಬರ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಅಗತ್ಯವಿರುವ ಮ್ಯಾಜಿಕ್ ನಂಬರ್ 35.

ರಿಪಬ್ಲಿಕ್ ಟಿವಿ ಮತ್ತು ಸಿ-ವೋಟರ್ ಸಮೀಕ್ಷೆಯಂತೆ ಬಿಜೆಪಿ 41, ಕಾಂಗ್ರೆಸ್ 25, ಇತರೆ ಪಕ್ಷದ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ.
India Today-Axis My India ಜಂಟಿಯಾಗಿ ನಡೆಸಿದ ಸಮೀಕ್ಷೆಯಂತೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 47 ರಿಂದ 55, 13 ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್, 0-2 ಕ್ಷೇತ್ರಗಳಲ್ಲಿ ಇತರೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.












Click it and Unblock the Notifications