Get Updates
Get notified of breaking news, exclusive insights, and must-see stories!

ಹಿಜಾಬ್‌ ವಿವಾದ: ಹೈಕೋರ್ಟ್ ಏನೇ ನಿರ್ಧಾರ ಕೈಗೊಂಡರೂ ರಾಜಕೀಯ ಲಾಭ ಎಂದ ಬಿಜೆಪಿ

ನವದೆಹಲಿ, ಫೆಬ್ರವರಿ 17: ಕೆಲವು ವಾರಗಳಿಂದ ಕರ್ನಾಟಕದಲ್ಲಿ ಹಿಜಾಬ್‌ ವಿವಾದ ಭಾರೀ ಸುದ್ದಿ ಮಾಡುತ್ತಿದೆ. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಶಾಲೆಗಳಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರಿದಿದೆ. ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಲೆಕ್ಕಿಸದೆ ಸೋಮವಾರ 40 ಯುವತಿಯರು ತಮ್ಮ ಹಿಜಾಬ್‌ಗಳನ್ನು ತೆಗೆದುಹಾಕುವ ಬದಲು ಮನೆಗೆ ಮರಳಲು ನಿರ್ಧಾರ ಮಾಡಿದ್ದಾರೆ. ಈ ನಡುವೆ ಹೈಕೋರ್ಟ್‌ನ ಯಾವುದೇ ನಿರ್ಧಾರ ಕೈಗೊಂಡರೂ ರಾಜಕೀಯ ಲಾಭವಾಗಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಫೆಬ್ರವರಿ 16 ರಂದು ಕಾಲೇಜುಗಳು ಪುನರಾರಂಭವಾಗಿದ್ದು ತರಗತಿ ಕೊಠಡಿಗಳಲ್ಲಿ ಹಿಜಾಬ್ ಅಥವಾ ಕೇಸರಿ ಶಾಲುಗಳನ್ನು ಧರಿಸಬಾರದು ಎಂಬ ಕರ್ನಾಟಕ ಹೈಕೋರ್ಟ್ ಆದೇಶವು ಅನ್ವಯವಾಗುತ್ತದೆ. ಈ ನಡುವೆ ಆಡಳಿತಾರೂಢ ಬಿಜೆಪಿಗೆ, ನ್ಯಾಯಾಲಯಗಳು ಅಂತಿಮವಾಗಿ ಯಾವ ರೀತಿಯಲ್ಲಿ ತೀರ್ಪು ನೀಡಿದರೂ, ಇದು ರಾಜಕೀಯ ಲಾಭವನ್ನು ಮಾತ್ರ ಪಡೆಯುವ ವಿವಾದವಾಗಿದೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳಿರುವುದಾಗಿ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

"ರಾಜ್ಯದಲ್ಲಿ ಹಿಜಾಬ್ ವಿಚಾರವು ತಮ್ಮ ಹಿಂದುತ್ವದ ಯೋಜನೆಯ ಭಾಗವಲ್ಲ. ಇದನ್ನು ನಾವು ಪ್ರಾರಂಭ ಮಾಡಿದಲ್ಲ," ಎಂದು ಹೇಳುವ ಬಿಜೆಪಿ ಹಿರಿಯ ನಾಯಕರೊಬ್ಬರು, "ಇದನ್ನು ಆರಂಭ ಮಾಡಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಘಟಕವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ). ಇದರಿಂದಾಗಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿವಾದ ಹುಟ್ಟಿಕೊಂಡಿತು. ಇದು ಕರಾವಳಿ ಕರ್ನಾಟಕದಲ್ಲಿ ರಾಜಕೀಯ ಲಾಭ ಪಡೆಯಲು ಸಿಎಫ್‌ಐ ಪ್ರಯತ್ನದ ಭಾಗವಾಗಿದೆ. ಆದರೆ ರಾಜ್ಯವ್ಯಾಪಿ ವಿಷಯವಾಗಿ ಬಿ.ಜೆ.ಪಿ.ಗೆ ಅವಕಾಶವಾಗಿದೆ," ಎಂಬುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.

Hijab Row: Whatever HC Decides in Hijab Case, It Will Be a Political Advantage Says BJP

ಈ ವಿವಾದವನ್ನು ಆರಂಭ ಮಾಡಿದ್ದು ಯಾರು?: ಬಿಜೆಪಿ ಹೇಳುವುದು ಹೀಗೆ

"ಸಮಸ್ಯೆಯನ್ನು ನಾವು ಆರಂಭಿಸಿಲ್ಲ. ಸಿಎಫ್‌ಐ ಮತ್ತು ಎಸ್‌ಡಿಪಿಐ ಈ ವಿಷಯವನ್ನು ಬಳಸಿಕೊಂಡು ಕರಾವಳಿ ಕರ್ನಾಟಕದಲ್ಲಿ ರಾಜಕೀಯ ಲಾಭ ಪಡೆಯಲು ಬಯಸಿದ್ದವು. ಆದರೆ ನಮಗೆ ಈ ಅವಕಾಶವನ್ನು ಈಗ ನೀಡಲಾಗಿದೆ," ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು. "ಇತರ ಕಾಲೇಜುಗಳ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಲು ಪ್ರಾರಂಭಿಸಿದ ನಂತರ ಇದು ದೊಡ್ಡ ಸಮಸ್ಯೆಯಾಯಿತು ಮತ್ತು ಅದರೊಂದಿಗೆ ಹಿಂದೂ ವಿದ್ಯಾರ್ಥಿಗಳು ತಮ್ಮ ಕೇಸರಿ ಶಾಲು ಪ್ರತಿಭಟನೆಯಿಂದ ಹಿಂದೆ ಸರಿಯದಂತಹ ನಿಲುವು ತೆಗೆದುಕೊಂಡದರು," ಎಂದು ಹೆಸರು ಉಲ್ಲೇಖಿಸಲು ಬಯಸದ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಾದ್ಯಂತ ಕಾಲೇಜುಗಳಲ್ಲಿ ಸಾವಿರಾರು ಯುವಕರು ಹಿಂದುತ್ವದ ಪರ ನಿಲುವು ತಳೆದಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಮತಬ್ಯಾಂಕ್‌ ಆಗಲಿದೆ ಎಂದು ಕೂಡಾ ಬಿಜೆಪಿ ಆಶಯ ಹೊಂದಿರುವಂತೆ ಕಂಡು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕರು, "ವಿದ್ಯಾರ್ಥಿಗಳು ಈಗ ಬಿಜೆಪಿ ಮತ್ತು ಸಂಘದ ಸೈದ್ಧಾಂತಿಕ ನಿಲುವಿಗೆ ತೆರೆದುಕೊಂಡಿದ್ದಾರೆ ಮತ್ತು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಹಲವರು ವಿಧಾನಸಭೆ, ಇತರೆ ಚುನಾವಣೆಗಳಲ್ಲಿ ನಮಗೆ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ನಾವು ಭಾವಿಸುತ್ತೇವೆ," ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ವಿಭಜನೆ

"ನಾವು ಕೆಲವು ವಿದ್ಯಾರ್ಥಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಅವರು ಎಷ್ಟು ಸ್ಪಷ್ಟವಾಗಿದ್ದಾರೆ ಮತ್ತು ಅವರು ಎಷ್ಟು ಬದ್ಧರಾಗಿದ್ದಾರೆಂದು ನೋಡಿದಾಗ ನಮಗೆ ಆಶ್ಚರ್ಯವಾಗುತ್ತದೆ. ಅವರಲ್ಲಿ ಹಲವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರೂ ಅಲ್ಲ. ಅವರನ್ನೂ ರಾಜಕೀಯವಾಗಿ ಬೆಳೆಸಲು ಇದು ಖಂಡಿತಾ ಅವಕಾಶವಾಗಿದೆ. ಈಗ ವಿದ್ಯಾರ್ಥಿಗಳಲ್ಲಿ ಈಗ ಭಿನ್ನಾಭಿಪ್ರಾಯವಿದೆ. ಅಕ್ಕಪಕ್ಕದಲ್ಲಿ ಕುಳಿತಿದ್ದ ಮುಸ್ಲಿಮರು ಮತ್ತು ಹಿಂದೂ ವಿದ್ಯಾರ್ಥಿಗಳು ಹಗೆತನ ತೋರಿದ್ದಾರೆ. ಮತ್ತು ಇದು ಬಿಜೆಪಿಯ ತಯಾರಿಕೆಯಲ್ಲದಿದ್ದರೂ, ಇದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ," ಎಂದು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+