ಕಾರ್ಮಿಕರು, ವಲಸಿಗರ ಪಾಲಿನ ಸಾರಥಿ ಶ್ರಮಿಕ ರೈಲು

ಬೆಂಗಳೂರು, ಮೇ 5: ವಿವಿಧ ರಾಜ್ಯದಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳ ನೆರವಿಗಾಗಿ ಶ್ರಮಿಕ ವಿಶೇಷ ರೈಲುಗಳ ಸಂಚಾರ ಜಾರಿಯಲ್ಲಿದೆ. ರಾಜ್ಯ ಸರ್ಕಾರಗಳ ಮನವಿಗೆ ರೈಲ್ವೆ ಓಡಿಸಲು‌ ನಿರ್ಧಾರ ಕೈಗೊಂಡಿದ್ದು, ಕೆಲವು ಷರತ್ತುಗಳೊಂದಿಗೆ ಸಂಚರಿಸಲಿವೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸಲು ಎರಡು ರಾಜ್ಯಗಳ ಒಪ್ಪಿಗೆ‌‌ ಇರಬೇಕು.

ಶ್ರಮಿಕ ಟ್ರೈನ್ ಗಳು ನಾನ್ ಸ್ಟಾಪ್ ರೈಲುಗಳಾಗಿದ್ದು..ಒಂದೇ ಸ್ಥಳದಲ್ಲಿ ನಿಲ್ಲುತ್ತವೆ. 22 ಕೋಚ್ ಗಳಿರಲಿದ್ದು, ಪ್ರತಿ ಕೋಚ್ ನಲ್ಲಿ 54 ಪ್ರಯಾಣಿಕರಿಗೆ ಪ್ರಯಾಣದ ಅವಕಾಶವಿರುತ್ತದೆ. ಯಾವುದೇ ಸ್ಟೇಷನ್ ನಡುವೆ ನಿಲುಗಡೆ ಇರುವುದಿಲ್ಲ.

ಕೋವಿಡ್ 19 ರೋಗದ ಲಕ್ಷಣಗಳು ಇದ್ರೆ ಪ್ರಯಾಣಕ್ಕೆ ಅವಕಾಶ ಇಲ್ಲ ಎಂಬ ನಿಬಂಧನೆಗಳನ್ನು ಹಾಕಲಾಗಿದೆ. ಇನ್ನೂ ರೈಲ್ವೆ ಟಿಕೆಟ್ ಅನ್ನು ರೈಲ್ವೆ ‌ಇಲಾಖೆ ಪ್ರಿಂಟ್ ‌ಮಾಡಿ ರಾಜ್ಯ ಸರ್ಕಾರಕ್ಕೆ ನೀಡುತ್ತದೆ. ರಾಜ್ಯ ‌ಸರ್ಕಾರ ಪ್ಯಾಸೆಂಜರ್ ಗೆ ನೀಡಬೇಕು. ಪ್ರಯಾಣಿಕರು ಮಾಸ್ಕ್ ಧರಿಸಲೇಬೇಕು.

ಸಾಮಾಜಿಕ ಅಂತರ ಕಾಪಾಡಬೇಕು

ಸಾಮಾಜಿಕ ಅಂತರ ಕಾಪಾಡಬೇಕು

ರೈಲಿನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು,ಮಧ್ಯದ ಸೀಟ್ ಖಾಲಿ ‌ಇರಬೇಕು, ರೈಲ್ವೆ ಸಂಚಾರಕ್ಕೂ‌ ಮುನ್ನಾ ಸ್ಕ್ರೀನಿಂಗ್ ನಡೆಸಬೇಕು. ಪ್ಯಾಸೆಂಜರ್ ಸಂಪೂರ್ಣ ವಿಳಾಸ ಹಾಗೂ ಪೋನ್ ನಂಬರ್ ಪಡೆಯಬೇಕು. ರೈಲು ಪ್ರವೇಶಿಸುವ ಮುನ್ನ ಪ್ರತಿ ಪ್ರಯಾಣಿಕನು ವೈದ್ಯಕೀಯವಾಗಿ ಕೊವಿಡ್ 19 ರಹಿತ ಎಂಬುದು ಖಾತ್ರಿಯಾಬೇಕು.

ಊಟ, ತಿಂಡಿ, ನೀರಿನ ವ್ಯವಸ್ಥೆ

ಊಟ, ತಿಂಡಿ, ನೀರಿನ ವ್ಯವಸ್ಥೆ

ಪ್ರಯಾಣಿಕರಿಗೆ ಊಟ, ತಿಂಡಿ, ನೀರಿನ ವ್ಯವಸ್ಥೆಗಳನ್ನು ಆಯಾ ರಾಜ್ಯಗಳು ಮಾಡುತ್ತಿವೆ. ತುಂಬಾ ದೂರದ ಪ್ರಯಾಣವಾದರೆ ಭಾರತೀಯ ರೈಲ್ವೆ ಇಲಾಖೆಯೇ ಆಹಾರ ವ್ಯವಸ್ಥೆ ನಿಭಾಯಿಸಲಿದೆ. ನಿಗದಿತ ರೈಲ್ವೆ ನಿಲ್ದಾಣ ತಲುಪಿದ ಬಳಿಕ ಅಲ್ಲಿನ ರಾಜ್ಯ ಮುಂದಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಮತ್ತೊಮ್ಮೆ ಸ್ಕ್ರೀನಿಂಗ್, ನಿಲ್ದಾಣದಿಂದ ಬೇರೆಡೆಗೆ ತೆರಳಲು ಸಾರಿಗೆ ವ್ಯವಸ್ಥೆ, ಅನುಮಾನ ಬಂದರೆ ಕ್ವಾರಂಟೈನ್ ಮಾಡುವುದು ಎಲ್ಲವೂ ಕಡ್ಡಾಯ.

ಮೊದಲ ಹಂತದಲ್ಲಿ 6 ರೈಲು

ಮೊದಲ ಹಂತದಲ್ಲಿ 6 ರೈಲು

ಮಹಾರಾಷ್ಟ್ರದ ನಾಸಿಕ್ ನಿಂದ ಉತ್ತರಪ್ರದೇಶದ ಲಕ್ನೋಗೆ, ಬೆಂಗಳೂರು ಸಮೀಪದ ಬಾಣಾವಾರದಿಂದ ಬಿಹಾರಕ್ಕೆ ಒಂದು ಸುತ್ತಿನ ಶ್ರಮಿಕ ರೈಲುಗಳು ತಲುಪಿವೆ. ವಿವಿಧೆಡೆಗಳಿಂದ 6 ರೈಲುಗಳು ದಿನಕ್ಕೆರಡರಂತೆ ಪ್ರಯಾಣಿಸಲಿದೆ. ಲಿಂಗಪ್ಪಲ್ಲಿಯಿಂದ ಹಾತಿಯಾ, ಆಳುವದಿಂದ ಭುವನೇಶ್ವರ್, ನಾಸಿಕ್ ನಿಂದ ಲಕ್ನೋ, ನಾಸಿಕ್ ನಿಂದ ಭೋಪಾಲ್, ಜೈಪುರದಿಂದ ಪಾಟ್ನಾ, ಕೋಟಾದಿಂದ ಹಾತಿಯಾಗೆ ಶ್ರಮಿಕ ರೈಲು ಪ್ರಯಾಣಿಸಿದೆ.

ಒಟ್ಟು 10 ಶ್ರಮಿಕ ರೈಲು

ಒಟ್ಟು 10 ಶ್ರಮಿಕ ರೈಲು

ರಾಜಸ್ಥಾನದಿಂದ ಜಾರ್ಖಂಡ್, ಉತ್ತರಪ್ರದೇಶ ಹಾಗೂ ಬಿಹಾರಕ್ಕೆ ರೈಲುಗಳು ಸಂಚರಿಸಿವೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ, ಆಂಧ್ರಪ್ರದೇಶದಿಂದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯಾತ್ರಾರ್ಥಿಗಳು ಸಂಬಂಧಪಟ್ಟ ಊರಿಗೆ ತೆರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+