ಮೋದಿ ಸೆಳೆತಕ್ಕೆ ಸಿಲುಕಿ ಬಿಜೆಪಿ ವಶವಾದವರು...

ನವದೆಹಲಿ,

ಜ.
16:
ಬಿಜೆಪಿ
ರಾಷ್ಟ್ರಾಧ್ಯಕ್ಷ
ಅಮಿತ್
ಶಾ
ನೇತೃತ್ವದಲ್ಲಿ
ಹಲವು
ನಾಯಕರು
ಬಿಜೆಪಿ
ಸೇರುತ್ತಿದ್ದಾರೆ.
ನವದೆಹಲಿಯ
ಗದ್ದುಗೆ
ಏರುವ
ಕನಸು
ಕಾಣುತ್ತಿರುವ
ಬಿಜೆಪಿಗೆ
ನಾಯಕರ
ಸೇರ್ಪಡೆ
ಬಲ
ತಂದುಕೊಡುತ್ತಿದ್ದರೆ,
ಸಮೀಪದ
ಪ್ರತಿಸ್ಪರ್ಧಿಯಾಗಿರುವ
ಆಮ್
ಆದ್ಮಿ
ಹಲವರನ್ನು
ಕಳೆದುಕೊಳ್ಳುತ್ತಿದೆ.

id="toptextpromo">
id='are-slot-1'
class='oiad
oi-axt
oiadv'>

ಸಮಾಜವಾದಿ

ಪಕ್ಷದ
ಮುಖಂಡೆಯಾಗಿದ್ದ
ನಟಿ
ಜಯಪ್ರದಾ
ಕೂಡ
ಬಿಜೆಪಿ
ಸೇರುವ
ಯೋಚನೆ
ಹೊಂದಿದ್ದಾರೆ.
ಕಳೆದ
ಕೆಲವು
ದಿನಗಳಲ್ಲಿ
ದೇಶಾದ್ಯಂತ
ಬಿಜೆಪಿ
ಸೇರಿದ
ಹಲವು
ನಾಯಕರು
ಹಾಗೂ
ಕಾರ್ಯಕರ್ತರ
ಕುರಿತು
ಚಿತ್ರ
ಸಹಿತ
ವಿವರಣೆಯನ್ನು
ಇಲ್ಲಿ
ನೀಡಲಾಗಿದೆ.

id='are-slot-2'
class='oiad
oi-axt
oiadv'>

ಬಿಜೆಪಿ ಬಲೆಗೆ ಸೂಪರ್ ಕಾಪ್

ಬಿಜೆಪಿ ಬಲೆಗೆ ಸೂಪರ್ ಕಾಪ್

ನವದೆಹಲಿಯ 7ಆರ್‌ಸಿಆರ್‌ನಲ್ಲಿ ಏರ್ಪಡಿಸಿದ್ದ ಬಿಜೆಪಿ ಸಭೆಯಲ್ಲಿ ಕಿರಣ್ ಬೇಡಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಪಕ್ಷ ಸೇರಿದರು. ಕಿರಣ್ ಬೇಡಿ ಅವರು ಅಣ್ಣಾ ಹಜಾರೆ ತಂಡದ ಪ್ರಮುಖ ಸದಸ್ಯೆ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಐಪಿಎಸ್ ಅಧಿಕಾರಿ.

ಬಿಜೆಪಿಗೊಲಿದ ದ್ರೌಪದಿ

ಬಿಜೆಪಿಗೊಲಿದ ದ್ರೌಪದಿ

ಖ್ಯಾತ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿ ಪಾತ್ರಧಾರಿಯಾಗಿದ್ದ ರೂಪಾ ಗಂಗೂಲಿ ಹಾಗೂ ಫುಟ್‌ಬಾಲ್ ಆಟಗಾರ ಕಲ್ಯಾಣ್ ಚೌಬೆ ಅವರು ಕೋಲ್ಕತ ಸಮೀಪದ ಹೌರಾದಲ್ಲಿ ಏರ್ಪಡಿಸಿದ್ದ ಬಿಜೆಪಿ ಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೈಟ್ಲಿ ಸಮ್ಮುಖ ಬಿಜೆಪಿ ಸೇರಿದರು.

ಅಧಿಕಾರಕ್ಕಿಂತ ಮೋದಿಯೇ ಹೆಚ್ಚು

ಅಧಿಕಾರಕ್ಕಿಂತ ಮೋದಿಯೇ ಹೆಚ್ಚು

ಕೋಲ್ಕತದಲ್ಲಿ ಪಶ್ಚಿಮ ಬಂಗಾಳದ ಟಿಎಂಸಿ ಸಚಿವರಾಗಿದ್ದ ಮಂಜುಳ್ ಕೃಷ್ಣಾ ಠಾಕೂರ್ ತಮ್ಮ ಪುತ್ರ ಸುಬ್ರತಾ ಠಾಕೂರ್ ಜೊತೆ ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷ ರಾಹುಲ್ ಸಿನ್ಹಾ ಸಮ್ಮುಖದಲ್ಲಿ ಪಕ್ಷ ಸೇರಿದರು.

ಆಪ್‌ಗೆ ತುಮ್ ಎಂದ ಶಾಜಿಯಾ

ಆಪ್‌ಗೆ ತುಮ್ ಎಂದ ಶಾಜಿಯಾ

ನವದೆಹಲಿಯಲ್ಲಿ ಶುಕ್ರವಾರ ಬಿಜೆಪಿ ಸೇರಿದ ಆಮ್ ಆದ್ಮಿ ಮುಖಂಡೆ ಶಾಜಿಯಾ ಇಲ್ಮಿ ಅವರನ್ನು ಅಮಿತ್ ಶಾ ಸ್ವಾಗತಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ ಉಪಸ್ಥಿತರಿದ್ದರು.

ಓಡಿಶಾದಲ್ಲಿ ಕೇಸರಿ ರಂಗು

ಓಡಿಶಾದಲ್ಲಿ ಕೇಸರಿ ರಂಗು

ಓಡಿಶಾ ರಾಜ್ಯದ ಧೌಲಿ ಗ್ರಾಮದ ಐತಿಹಾಸಿಕ ಧೌಲಿ ಶಾಂತಿ ಸ್ತೂಪದ ಹತ್ತಿರ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ರ್ಯಾಲಿಗೆ ಚಾಲನೆ ನೀಡಲಾಯಿತು.

ಓಡಿಶಾದಲ್ಲಿ ಕೇಸರಿ ರಂಗು

ಓಡಿಶಾದಲ್ಲಿ ಕೇಸರಿ ರಂಗು

ಓಡಿಶಾ ರಾಜ್ಯದ ಭುಬನೇಶ್ವರದಲ್ಲಿ ಆಯೋಜಿಸಿದ್ದ ಬಿಜೆಪಿ ಸಭೆಯಲ್ಲಿ ಹೊಸದಾಗಿ ಪಕ್ಷ ಸೇರಿದ ಕಾರ್ಯಕರ್ತರನ್ನು ಅಮಿತ್ ಶಾ ಅಭಿನಂದಿಸಿದರು.

ಉಪಾಧ್ಯಾಯರಿಗೆ ಶಿಷ್ಯ ಬಲ

ಉಪಾಧ್ಯಾಯರಿಗೆ ಶಿಷ್ಯ ಬಲ

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿದ ನೂತನ ಸದಸ್ಯರನ್ನು ಸತೀಶ್ ಉಪಾಧ್ಯಾಯ ಸ್ವಾಗತಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+